•  

ರತಿಸುಖಕ್ಕಾಗಿ ಕಾಮಸೂತ್ರದ ವಿಶಿಷ್ಟ ಭಂಗಿಗಳು

Array

ಮಲ್ಲಿನಾಘ ಎಂಬ ವ್ಯಕ್ತಿಯ ಹೆಸರು ಕೇಳಿದ ಕೂಡಲೆ ಅನೇಕರ ಕಣ್ಣುಗಳು ಕಿರಿದಾಗಿಬಿಡುತ್ತವೆ. ಆದರೆ, ವಾತ್ಸಾಯನ ಎಂಬ ಹೆಸರು ಪ್ರಸ್ತಾಪ ಮಾಡಿದ ಕೂಡಲೆ ಕಣ್ಣುಗಳ ತಾನಾಗಿಯೇ ಅರಳಿಬಿಡುತ್ತವೆ. ಕ್ರಿ.ಶ. 4ನೇ ಶತಮಾನದಲ್ಲಿದ್ದ ವಾತ್ಸಾಯನನ ಕಾಮಸೂತ್ರ ಗ್ರಂಥದ ಪ್ರಭಾವವೇ ಅಂತಹುದು. ಕೆಲವರು ಓದಿರುತ್ತಾರೆ, ಕೆಲವರು ಹೆಸರು ಕೇಳಿರುತ್ತಾರೆ ಅಷ್ಟೆ, ಕೆಲವರು ಕೆಲ ಪುಟಗಳನ್ನು ತಿರುವಿಹಾಕಿದ್ದರೆ, ಹಲವರು ನೋಡಲೂ ಆಗದೆ, ಓದಲೂ ಆಗದೆ ಚಟಪಡಿಸಿಬಿಟ್ಟಿರುತ್ತಾರೆ.

ನಮ್ಮ ಭಾರತದಂತಹ ಮಡಿವಂತಿಕೆಯ ದೇಶದಲ್ಲಿ ಇಂಥವು ಸಹಜ ಕೂಡ. ಲೈಂಗಿಕ ಕ್ರಿಯೆ ನಡೆಸುವುದರ ಬಗ್ಗೆ, ವಿವಿಧ ಭಂಗಿಗಳ ಬಗ್ಗೆ, ಸುಖ ಪಡೆಯುವ ವಿಭಿನ್ನ ಸಾಧ್ಯತೆಗಳ ಬಗ್ಗೆ ಅನೇಕರಿಗೆ ಅರಿವಿರುವುದಿಲ್ಲ. ಲೈಂಗಿಕ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಏನೋ ಮುಜುಗರ. ಇನ್ನು ಸ್ನೇಹಿತರೊಂದಿಗೆ ಹೆಣ್ಣು ಗಂಡುಗಳೆರಡು ಪರಸ್ಪರ ಸುಖಿಸುವ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿ, ಮಾಹಿತಿ ತಿಳಿದುಕೊಳ್ಳುವುದಂತೂ ದೂರವೇ ಉಳಿಯಿತು.

ಆದರೆ, ದಂಪತಿಗಳು ನಿರಾಶರಾಗುವುದೂ ಬೇಡ, ಚಿಂತೆಗೀಡಾಗುವುದೂ ಬೇಡ. ವಾತ್ಸಾಯನ ಕಾಮಸೂತ್ರದಲ್ಲಿ 100ಕ್ಕೂ ಹೆಚ್ಚು ರತಿಕ್ರೀಡೆಯ ಭಂಗಿಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಲಾಗಿದೆ. ಅವುಗಳ ಕುರಿತು ತಿಳಿದು ಹಂತಹಂತವಾಗಿ ಕಾರ್ಯರೂಪಕ್ಕೆ ತಂದರೂ ಸಾಕು ಸುಖದ ಸುಪ್ಪತ್ತಿಗೆಯ ಮೇಲೆ ಹೊರಳಾಡಬಹುದು. ಈ ಹೊತ್ತಗೆಯಲ್ಲಿ ರತಿಕ್ರೀಡೆಯ ಅತ್ಯಾಕರ್ಷಕ ಭಂಗಿಗಳನ್ನು ತಿಳಿಸಿದ್ದಾನೆ ವಾತ್ಸಾಯನ. ಲೈಂಗಿಕತೆಯ ಬಗ್ಗೆ ತಿಳಿಯಲು ಇಡೀ ಗ್ರಂಥವನ್ನು ಓದಬೇಕಾಗಿಲ್ಲ. ಆಗಾಗ ಮುಗುಚಿಹಾಕಿದರೂ ಸಾಕು ಕಾಮನಬಿಲ್ಲು ತಾನಾಗಿಯೇ ಹೆದೆಯೇರಿಬಿಡುತ್ತದೆ.

ಕೆಲ ರತಿಸುಖದ ಭಂಗಿಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ

ಚಿಟ್ಟೆಗಳ ಪ್ರೇಮ ಸಲ್ಲಾಪ

ಚಿಟ್ಟೆಗಳ ಪ್ರೇಮ ಸಲ್ಲಾಪ

ಇದು ಸರಳ ಮತ್ತು ಅನೇಕರು ಮಾಡುವ ಭಂಗಿಯೇ ಆಗಿದ್ದರೂ ಸ್ವಲ್ಪ ವ್ಯತ್ಯಾಸವಿದೆ. ಚಿಟ್ಟೆಗಳ ಪ್ರಣಯ ಸಲ್ಲಾಪವನ್ನು ನೀವು ನೋಡಿರಬಹುದು. ಹೆಣ್ಣು ಬೆತ್ತಲಾಗಿ ಹಾಸಿಗೆಯ ಮೇಲೆ ನೆಲಕ್ಕೆ ಬೆನ್ನು ಮಾಡಿ ಅಂಗಾತ ಮಲಗಿರಬೇಕು. ಕಾಲುಗಳೆರಡು ತೆರೆದುಕೊಂಡಿರಬೇಕು ಮತ್ತು ಪೃಷ್ಠದ ಕೆಳಗಡೆ ಮೆತ್ತನೆಯ ದಿಂಬನ್ನು ಇಟ್ಟುಕೊಂಡಿರಬೇಕು. ಆಗ ಪುರುಷನಿಗೆ ಹೆಣ್ಣನ್ನು ನೇರವಾಗಿ ಮತ್ತು ಸರಳವಾಗಿ ಪ್ರವೇಶಿಸಲು ಸಹಾಯಕವಾಗುತ್ತದೆ. ದಿಂಬನ್ನು ಇಟ್ಟುಕೊಂಡಿರುವುದು ಸುಖದ ಮುಲುಕಾಟಕ್ಕೆ ಮತ್ತಷ್ಟು ಹೇಷಾರವ ತರುತ್ತದೆ.

ಹೆಣ್ಣು ಮಲಗಿ, ಗಂಡ ನಿಂತು

ಹೆಣ್ಣು ಮಲಗಿ, ಗಂಡ ನಿಂತು

ಪ್ರಣಯ ಸಲ್ಲಾಪಕ್ಕೆ ಇದು ಅತ್ಯದ್ಭುತವಾದ ಭಂಗಿ. ಇಲ್ಲಿ ಹೆಣ್ಣು ಮಂಚದ ಹಾಸಿಗೆಯ ಮೇಲೆ ಅಂಗಾತ ಮಲಗಿರಬೇಕು. ಆದರೆ, ಆಕೆಯ ಕಾಲುಗಳು ನೆಲವನ್ನು ತಾಗುತ್ತಿರಬೇಕು ಮತ್ತು ಅದರ ಮೇಲೆ ದೇಹದ ಸಂಪೂರ್ಣ ಬಿದ್ದಿರಬೇಕು. ಆದರೆ ಗಂಡು ಹೆಣ್ಣಿನ ಮೇಲೆ ಸಂಪೂರ್ಣವಾಗಿ ಒರಗದೆ, ನಿಂತ ಭಂಗಿಯಲ್ಲಿ ಪೃಷ್ಟವನ್ನು ಸ್ಪಲ್ಪವಾಗಿ ಎತ್ತಿದ ಹೆಂಡತಿಯನ್ನು ಪ್ರವೇಶಿಸಬಹುದು. ಇಂಥ ಭಂಗಿ ಟ್ರೈ ಮಾಡಿರದಿದ್ದರೆ ಇಂದು ರಾತ್ರಿಯೇ ಒಂದು ಕೈ ನೋಡೇಬಿಡಿ.

ಆಳವಾದ ಮನ್ಮಥ ಬಾಣ ಪ್ರಯೋಗ

ಆಳವಾದ ಮನ್ಮಥ ಬಾಣ ಪ್ರಯೋಗ

ಇದು ಬಹುಶಃ ಎಲ್ಲ ಭಂಗಿಗಳಿಗಿಂತ ಸುಲಭವಾದ, ಹೆಚ್ಚು ಆನಂದದಾಯಕವಾದ ಮತ್ತು ಹೆಚ್ಚು ಹೊತ್ತು ತೊಡಗಿಕೊಳ್ಳಬಹುದಾಗ ಲೈಂಗಿಕ ಭಂಗಿ. ಲೈಂಗಿಕ ವೈದ್ಯರು ಕೂಡ ಹೊಸದಾಗಿ ಮದುವೆಯಾದ, ಆದರೆ, ರತಿಸುಖದಲ್ಲಿ ಸುಲಭವಾಗಿ ತೊಡಗಲು ಕಷ್ಟಪಡುವ ಜೋಡಿಗಳಿಗೆ ಈ ಭಂಗಿಯನ್ನೇ ಶಿಫಾರಸು ಮಾಡುವುದು. ಇಲ್ಲಿ ಹಾಸಿಗೆಯ ಮೇಲೆ ಅಂಗಾತವಾಗಿ ಮಲಗಿದ ಹೆಣ್ಣಿನ ಕಾಲುಗಳೆರಡನ್ನು ಗಂಡು ಎತ್ತಿಹಿಡಿದು ಅಥವಾ ತನ್ನ ಹೆಗಲ ಮೇಲೆ ಹಾಕಿಕೊಂಡು ನೇರವಾಗಿ ಆಕೆಯನ್ನು ಪ್ರವೇಶಿವುದು.

ಆರಾಮ ಕುರ್ಚಿಯ ರತಿಸುಖ

ಆರಾಮ ಕುರ್ಚಿಯ ರತಿಸುಖ

ಇದೊಂದು ವಿಭಿನ್ನವಾದ ಲೈಂಗಿಕ ಕ್ರಿಯೆ ಭಂಗಿ. ಇಲ್ಲಿ ಹೆಣ್ಣು ಮಲಗಿರದೆ ಗಂಡು ಕುರ್ಚಿಯ ಮೇಲೆ ಅಥವಾ ಗೋಡೆಗೊರಗಿ ಕಾಲು ಮಡಚಿಕೊಂಡು ಕುಳಿತಿರುತ್ತಾನೆ. ಹೆಣ್ಣು ಆತನ ತೊಡೆಯ ಮೇಲೆ ಆರಾಮವಾಗಿ ಮತ್ತು ಕಂಫರ್ಟೆಬಲ್ ಭಂಗಿಯಲ್ಲಿ ಕುಳಿತು ಆತನನ್ನು ಪ್ರವೇಶಿಸಬೇಕು. ಇಲ್ಲಿ ಗಂಡು ಹೆಣ್ಣುಗಳೆರಡು ರತಿಸುಖ ಪಡೆಯುವುದರ ಜೊತೆಗೆ ಒಬ್ಬರಿಗೊಬ್ಬರು ಪ್ರೀತಿಯ ಸಂಭಾಷಣೆ ನಡೆಸುತ್ತ ರತಿಸುಖ ಪಡೆಯಬಹುದು. ಜೊತೆಗೆ ಗಂಡು ಹೆಣ್ಣಿನ ಮತ್ತು ಹೆಣ್ಣು ಗಂಡಿನ ದೇಹದ ಎಲ್ಲ ಭಾಗಗಳನ್ನು ಸವರುವ ಅವಕಾಶವಿರುತ್ತದೆ.

 

ಇಂದು ವಾತ್ಸಾಯನ ಕಾಮಸೂತ್ರ ಪುಸ್ತಕ ಕನ್ನಡದಲ್ಲಿಯೂ ಲಭ್ಯವಿದೆ. ಅಂಗಡಿಗೆ ಹೋಗಿ ಕೊಳ್ಳುವುದು ಮುಜುಗರವಾದರೆ ಆನ್‌ಲೈನ್ ಮುಖಾಂತರ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಈ ಪುಸ್ತಕವನ್ನು ವಯಸ್ಸಿಗೆ ಬಂದ ಯಾರೇ ಆಗಲಿ ಓದಬಹುದು. ಓದಿರಿ, ರತಿಕ್ರೀಡೆಯ ಬಗ್ಗೆ ವಿವಿಧ ಭಂಗಿಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಿ ಮತ್ತು ರಾತ್ರಿಯ ಹೊತ್ತಿನಲ್ಲಿ ಇಬ್ಬರೇ ಇದ್ದಾಗ ಜಾರಿಗೆ ತನ್ನಿರಿ. ಉತ್ತಮವಾದ ಲೈಂಗಿಕ ಸುಖ ನಿಮ್ಮದಾಗಲಿ ಮತ್ತು ಬಾಳು ಕೂಡ ಆನಂದಮಯವಾಗಿರಲಿ.
English summary
Kama Sutra is the book that has made couples enjoy sex lives in a better way. There are more than 100 sex positions in the Kama Sutra book. Many couples go through the pages of the book to find out some exciting sex positions.
Please Wait while comments are loading...

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more