•  

ಶಯನಗೃಹದಲ್ಲಿ ಕಾಮಕೇಳಿ ಆನಂದಕ್ಕೆ 5 ಟಿಪ್ಸ್

Array

ಕತ್ತಲು ಸುತ್ತಲು ಮುತ್ತಿದಂತಹ ಸಮಯದಲ್ಲಿ ಎಂಥ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತೀರಿ? ಮಲಗುವ ಕೋಣೆ, ಅಡುಗೆಮನೆ, ಟೆರೇಸ್, ವರಾಂಡ, ಬಚ್ಚಲುಮನೆ, ಗ್ಯಾರೇಜಿನಲ್ಲಿಟ್ಟ ಕಾರಿನೊಳಗೆ... ಹೊಸದಾಗಿ ಮದುವೆಯಾದ ಹಸಿದಿರುವ ಮೈ ಹೊಂದಿರುವಂತಹ ಹದಿಹರೆಯದ ಜೋಡಿಗಳಿಗೆ ಸ್ಥಳ ಯಾವುದಾದರೇನು? ಕಂಡ ಸ್ಥಳವೆಲ್ಲ ಶೃಂಗಾರಮಯವೆ.

ಆದರೆ ಕಾಲ ಪಕ್ವವಾದಂತೆಲ್ಲ, ಮನೆಯಲ್ಲೆಲ್ಲ ಸುಳಿದಾಡುವ ಗಾಳಿ ಪಕ್ಕದಮನೆಯಲ್ಲಿರುವ ಜನರ ಕಿವಿ ಹೊಕ್ಕಂತೆಲ್ಲ, ಒಂದು ಬಗೆಯ ಮುಜುಗರ ಆವರಿಸಲು ಪ್ರಾರಂಭಿಸುತ್ತದೆ. ಅಂತಹ ಸಮಯದಲ್ಲಿ ಅಥವಾ ಇನ್ನಾವುದೇ ಸಮಯದಲ್ಲಿ ಗಂಡ ಹೆಂಡತಿ ಕಾಮಕ್ರೀಡೆಯಾಡಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ.

ಪ್ರಣಯದ ಸುಖಪಡಲು ಶಯನಗೃಹವೇ ಅತ್ಯುತ್ತಮ ಜಾಗ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮ ಭಾರತೀಯರಲ್ಲಿ ಅವಿಭಕ್ತ ಕುಟುಂಬವೇ ಹೆಚ್ಚು. ಮಲಗುವ ಕೋಣೆಯಲ್ಲಿ ಸಿಗುವಂಥ ಖಾಸಗಿತನ, ಎಲ್ಲವನ್ನೂ ಬರಿದು ಮಾಡಿಕೊಂಥ ಭಾವ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಏನೇ ಹೇಳಿ, ಕೇಳಿಯಾಡಲು ಬೆಡ್ ರೂಂ ಬೆಸ್ಟ್ ರೂಂ.

ಇರುವ ಮಲಗುವ ಕೋಣೆಯನ್ನೇ ಬಳಸಿಕೊಂಡರೆ ಪ್ರಣಯದಾಟವನ್ನು ಮತ್ತಷ್ಟು ಆನಂದಿಸಲು ಸಾಧ್ಯ. ಅಗತ್ಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಜಡಗಟ್ಟಿರುವ ಮೈಯಲ್ಲಿ ಮತ್ತಷ್ಟು ಕಾಮನೆಗಳನ್ನು ತುಂಬಲು ಸಾಧ್ಯ. ಲೈಂಗಿಕ ಕ್ರೀಡೆಯನ್ನೇ ಇನ್ನಷ್ಟು ಸರಸಮಯ ಮಾಡಲು ಇಲ್ಲೊಂದಿಷ್ಟು ಟಿಪ್ಸ್ ನೀಡಲಾಗಿದೆ. ಅವು ನಿಮ್ಮ ಜೀವನ ರಸಮಯವಾಗಿಸಲು ಸಹಾಯ ಮಾಡುತ್ತವೆ.

ಮೆತ್ತನೆಯ ಕಂಬಳಿ ಮೇಲೆ ಕಾಮಕೇಳಿ

ಮೆತ್ತನೆಯ ಕಂಬಳಿ ಮೇಲೆ ಕಾಮಕೇಳಿ

ಲೈಂಗಿಕ ಕ್ರಿಯೆ ಪ್ರತಿಬಾರಿ ಮಂಚದ ಮೇಲೆಯೇ ಆಗಬೇಕೆಂದಿಲ್ಲ. ಮೆತ್ತನೆಯ ಕಂಬಳಿ ಅಥವಾ ಮೈಗೆ ಹಿತನೀಡುವಂತಹ ರಜಾಯ್ ಅನ್ನೇ ನೆಲದ ಮೇಲೆ ಹಾಸಿಕೊಂಡು, ಅದನ್ನೇ ಹೊದ್ದುಕೊಂಡು, ಉಟ್ಟಬಟ್ಟೆಯನ್ನೆಲ್ಲ ಬಿಸಾಕಿ ಹೊರಳಾಡುವುದಿದೆಯಲ್ಲ ವಿಶಿಷ್ಟ ಅನುಭವ ನೀಡುತ್ತದೆ.

ಕುರ್ಚಿ ಅಥವಾ ಸೋಫಾದ ಮೇಲೆ

ಕುರ್ಚಿ ಅಥವಾ ಸೋಫಾದ ಮೇಲೆ

ಪ್ರತಿಬಾರಿನೂ ಹಾಸಿಗೆಯ ಮೇಲೇನಾ ಎಂದು ರಾಗವೆಳೆಯುವ ಹೆಂಡತಿಗೆ ಒಂದು ಬಾರಿ ಸೋಫಾದ ಮೇಲೆ ಕಾಮದಾಟದ ರುಚಿ ತೋರಿಸಿ. ಮಂಚದ ಪಕ್ಕದಲ್ಲಿರುವ ಕುರ್ಚಿಯ ಮೇಲೆ ಕೂಡ ಕುಳಿತುಕೊಂಡು ಆರಾಮ ಕುರ್ಚಿಯ ಭಂಗಿಯಲ್ಲಿ ಕೇಳಿಯಲ್ಲಿ ತೊಡಗಬಹುದು. ಕುರ್ಚಿಯಲ್ಲಿ ಕುಳಿತು ಮಾಡುವಾಗ ಮೆತ್ತನೆಯ ದಿಂಬನ್ನು ಬಳಸಲು ಮರೆಯದಿರಿ. ಆದರೆ, ಸಾಧ್ಯವಾದ ಮಟ್ಟಿಗೆ ಕುರ್ಚಿಯಾಗಲಿ, ಸೋಫಾ ಆಗಲಿ ಕಿರ್ ಕಿರ್ ಸದ್ದು ಮಾಡದಂತೆ ಎಚ್ಚರವಹಿಸಿ.

ಕಾಮನೆ ಉಕ್ಕುವಂತಹ ಕರ್ಟನ್ ‌ಗಳಿರಲಿ

ಕಾಮನೆ ಉಕ್ಕುವಂತಹ ಕರ್ಟನ್ ‌ಗಳಿರಲಿ

ಶಯನಗೃಹದ ಶೃಂಗಾರ ನಿಮ್ಮ ಕಾಮದಾಟದ ಒಂದು ಭಾಗವಾಗಿರಲಿ. ಮನಸ್ಸಿಗೆ ಹಿತ ನೀಡುವಂತಹ ಸುಂದರ ಕರ್ಟನ್‌ಗಳು ಗಾಳಿಗೆ ಸುಯ್ದಾಡುತಿರಲಿ. ಕಾಮನೆ ಕೆರಳಿಸುವಂತಹ ಬಣ್ಣಗಳು ಅದರಲ್ಲಿ ತುಂಬಿರಲಿ. ಕಿಟಕಿಯನ್ನು ಅರ್ಧದಷ್ಟು ತೆರೆದಿಟ್ಟು, ಕಿಲಾಡಿ ಗಾಳಿಯನ್ನು ಕೋಣೆಯಲ್ಲೆಲ್ಲ ಸುಳಿದಾಡಲು ಬಿಟ್ಟು, ಗಾಳಿಗೆ ತಿಳಿಯದಂತೆ ಕರ್ಟನ್ ಹಿಂದೆ ಹೋಗಿ ಕೆರಳಿದಂತಹ ದೇಹಗಳು ಬೆಸೆದುಕೊಳ್ಳಲಿ. ನಿಮ್ಮ ಈ ಪ್ರಣಯದಾಟವನ್ನು ಮಂಚಕ್ಕೆ ಕೂಡ ತಿಳಿಯಲು ಬಿಡಬೇಡಿ.

ಸುವಾಸನೆ ಬೀರುವ ಕ್ಯಾಂಡಲ್ ಬೆಳಗುತಿರಲಿ

ಸುವಾಸನೆ ಬೀರುವ ಕ್ಯಾಂಡಲ್ ಬೆಳಗುತಿರಲಿ

ಕೋಣೆಯ ಮೂಲೆಯಲ್ಲಿದ್ದ ಮ್ಯೂಸಿಕ್ ಸಿಸ್ಟಂ ರೋಮ್ಯಾಂಟಿಕ್ ಹಾಡನ್ನು ಗುನುಗುತ್ತಿದ್ದರೆ, ಲೈಟ್ ಬೆಳಕು ಆರಿದ ಮೇಲೆ ಮತ್ತೊಂದು ಮೂಲೆಯಲ್ಲಿ ಸುವಾಸನೆಯುಳ್ಳ ಮೊಂಬತ್ತಿ ಬೆಳಗುತಿರಲಿ. ಕ್ಯಾಂಡಲ್ ಬೆಳಕು ವಿಶಿಷ್ಟಬಗೆಯ ಮೂಡನ್ನು ಸೃಷ್ಟಿಸುತ್ತದೆ. ಕ್ಯಾಂಡಲ್ ಬೆಂಕಿಯ ಲಾಸ್ಯಕ್ಕೆ ಕಾಮನೆಯ ಧಗೆ ಭಗಭಗ ಅಂದಿರುತ್ತದೆ. ಆ ಮಂದ ಬೆಳಕಿನಲ್ಲಿಯೇ 'ಈ ಸಮಯ ಶೃಂಗಾರಮಯ, ನೂತನ ಬಾಳಿಗೆ ಶುಭೋದಯ' ಎಂದು ಹಾಡು ಹೇಳಿಕೊಳ್ಳುತ್ತಿದ್ದರೆ ಕಾಮದ ರಸ ಉಕ್ಕದಿದ್ದರೆ ಕೇಳಿ.

ಕಟ್ಟಿಗೆ ಟೇಬಲ್ ಮೇಲೆ ಆಗಲಿ ಸಂಗಮ

ಕಟ್ಟಿಗೆ ಟೇಬಲ್ ಮೇಲೆ ಆಗಲಿ ಸಂಗಮ

ಇದೊಂದು ವಿಶಿಷ್ಟ ಪ್ರಯೋಗ. ಮಂಚದ ಮೇಲೆ, ಸೋಫಾದ ಮೇಲೆ, ಕುರ್ಚಿಯ ಮೇಲೆ, ಕಂಬಳಿಯ ಮೇಲೆ ಕೇಳಿಯಾಡಿ ಬೇಜಾರಾದಾಗ ಪಕ್ಕದಲ್ಲಿರುವ ಟೇಬಲ್ ಅನ್ನೇ ಲೈಂಗಿಕ ಕ್ರೀಡೆಯ ಅಂಗಳವಾಗಲಿ. ಬೆತ್ತಲಾದ ಸಂಗಾತಿಯನ್ನು ಟೇಬಲ್ ಮೇಲೆ ಮಲಗಿಸಿ ನೀವು ನಿಂತ ಅಥವಾ ಮಲಗಿದ ಭಂಗಿಯಲ್ಲಿ ಒಳಸೇರುತ್ತಿದ್ದರೆ ಸಿಗುವ ಆನಂದವನ್ನು ಅನುಭವಿಸಿಯೇ ತೀರಬೇಕು.

 
English summary
There are many places to enjoy sex. from bedroom, bathroom, kitchen, stairs, garden to car, couples love to experiment sex in different places. But, having sex in the bedroom is one of the best places for a couple.
Please Wait while comments are loading...

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more