•  

ಆ.... ಆಸೆ, ಭಾವನೆ ಕೆರಳಿಸುವ ಕಲೆ, ಈಗಲೇ ತಿಳಿದುಕೊಳ್ಳಿ!

Array

"ಮನೆಗೋದರೆ ಅದೇ ಹೆಂಡತಿ ಹಸ್ರು ಕಲರ್ ಹಳೆ ನೈಟಿ" ಎಂಬ ಸಾಲನ್ನು ಖಾಲಿ ಕ್ವಾರ್ಟರ್ ಬಾಟ್ಲಿ ಹಾಡಿನಲ್ಲಿ ಕೇಳಿರಬೇಕಲ್ಲವೆ? ಹೌದು ಹೆಂಗಸರು ಕಾಮ ಪ್ರಚೋದಕವಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಎಷ್ಟು ಸತ್ಯವೋ, ಹೆಂಡತಿಯರು ಗಂಡಂದಿರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುವುದಿರಲಿ, ಸಹಕಾರವೇ ನೀಡುವುದಿಲ್ಲ ಎಂಬ ದೂರು ಬಹುತೇಕ ಗಂಡಸರದಾಗಿರುತ್ತದೆ.

ಬನ್ನಿ ಅದಕ್ಕಾಗಿ ನಾವು ನಿಮಗೆ ಐದು ಸಲಹೆಗಳನ್ನು ನೀಡುತ್ತೇವೆ. ಊಟ, ತಿಂಡಿ, ಬಟ್ಟೆ, ಬರೆ, ಮನೆಯ ಅಲಂಕಾರ, ಮನೆಯವರ ಆರೋಗ್ಯ ಎಲ್ಲವನ್ನೂ ನೋಡಿಕೊಳ್ಳುವ ನೀವು ನಿಮ್ಮವರ ಆ.... ಭಾವನೆ ಕೆರಳುವಂತೆ ಮಾಡುವ ಕಲೆಯನ್ನು ನಾವು ಹೇಳಿಕೊಡಬೇಕೆ? ಆದರೂ ಕೆಲವೊಂದು ಅಂಶಗಳನ್ನು ಒಮ್ಮೆ ಓದಿಕೊಳ್ಳಿ... 

ನೀವಷ್ಟೇ ಅಲ್ಲ ನಿಮ್ಮ ಮನೆಯು ಸಹ ಸೆಕ್ಸಿಯಾಗಿರಲಿ

ನೀವಷ್ಟೇ ಅಲ್ಲ ನಿಮ್ಮ ಮನೆಯು ಸಹ ಸೆಕ್ಸಿಯಾಗಿರಲಿ

ಹೌದು ಲೈಂಗಿಕವಾಗಿ ಉತ್ತೇಜನಕ್ಕೆ ಒಳಗಾಗಬೇಕು ಎಂದಲ್ಲಿ ಗಂಡು ಮತ್ತು ಹೆಣ್ಣು ಮಾತ್ರ ಆಕರ್ಷಕವಾಗಿ ಇದ್ದರೆ ಸಾಲದು. ಮಿಲನ ಮಹೋತ್ಸವ ನಡೆಯುವ ಸ್ಥಳವು ಸಹ ಸುಂದರವಾಗಿದ್ದರೇನೆ, ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸಾಧ್ಯ. ಹಾಗಾಗಿ ಮನೆಯ ಅಲಂಕಾರಕ್ಕೆ ಒತ್ತು ನೀಡಿ. ಹಾಗೆಂದು ದುಬಾರಿ ವಸ್ತುಗಳನ್ನು ತನ್ನಿ ಎಂದು ನಾವು ಹೇಳುತ್ತಿಲ್ಲ. ಎಲ್ಲೆಂದರಲ್ಲಿ ಬಳಸಿದ ಬಟ್ಟೆಗಳನ್ನು ಬಿಸಾಡುವುದು. ಬಟ್ಟೆಗಳನ್ನು ಒಣಗಿ ಹಾಕುವುದು, ಸರಿಯಾಗಿ ಜೋಡಿಸಿಡದ ಪಾತ್ರೆಗಳು, ಮನೆಯೋ ಹಳೆಯ ಸಾಮಾನು ಮಾರುವ ಅಂಗಡಿಯೋ ಎಂಬಂತೆ ಭಾಸವಾಗುವ ಕೋಣೆ ಮತ್ತು ಹಾಲ್‌ಗಳು ಎಂತಹವರಿಗಾದರೂ ಅಸಹ್ಯ ತರಿಸುತ್ತದೆ. ಮನೆಯಲ್ಲಿ ಯಾವ ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕೋ, ಅಲ್ಲಲ್ಲಿ ಇರಲಿ. ಮುಖ್ಯವಾಗಿ ನೀವು ಮಲಗುವ ಕೋಣೆಯಲ್ಲಿ ಸ್ಥಳಾವಕಾಶ ಮಾಡಿಕೊಂಡು ಸುಗಂಧಭರಿತವಾದ ಹೂವುಗಳನ್ನು ಇಡಬಹುದಾದ ಹೂದಾನಿಯೊಂದನ್ನು ಇಡಿ. ಚಿತ್ರ ಪಟಗಳನ್ನು ಗೋಡೆಗೆ ನೇತು ಹಾಕಿ, ಸಂಗೀತ ಕೇಳುವ ವ್ಯವಸ್ಥೆ ಮಾಡಿಕೊಳ್ಳಿ, ಗೋಡೆಯ ಬಣ್ಣಗಳು ತಿಳಿಯಾಗಿರಲಿ, ಇನ್ನು ನಿಮ್ಮ ಮೂಡ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಲೈಟ್‌ಗಿಂತ ಪರ್ಫ್ಯೂಮ್ಡ್ ಕ್ಯಾಂಡಲ್ ಇದ್ದರೆ ಒಳ್ಳೆಯದು. ಹೊರಗಿನ ಗೊಡವೆಗಳನ್ನೆಲ್ಲ ಮರೆತು ನಿಮ್ಮ ಮೈಮನಗಳನ್ನು ಆರಾಮವಾಗಿ ಹಗುರ ಮಾಡಿಕೊಳ್ಳಿ. ಇಬ್ಬರೂ ಆನಂದವನ್ನು ಪಡೆಯಿರಿ.

ಸ್ವಲ್ಪ ನಿಮ್ಮ ಅಂದ ಚಂದ ಬದಲಾಯಿಸಿಕೊಳ್ಳಿ

ಸ್ವಲ್ಪ ನಿಮ್ಮ ಅಂದ ಚಂದ ಬದಲಾಯಿಸಿಕೊಳ್ಳಿ

ಮದುವೆಯಾಗುವ ಮುನ್ನ ಮಾತನಾಡಲು ಹಾತೊರೆಯುವ ಜೋಡಿ, ಮದುವೆಯ ಹೊಸತರಲ್ಲಿ ದೇಹಕ್ಕೆ ದೇಹ ಒತ್ತಿಕೊಂಡೆ ಇರುವಂತೆ ಕೂರುತ್ತಾರೆ. ಇನ್ನು ಲೈಂಗಿಕ ಕ್ರಿಯೆಯ ವಿಚಾರಕ್ಕೆ ಬಂದರೆ ಮದುವೆಯಾದ ಹೊಸತರಲ್ಲಿ ದಿನದಲ್ಲಿ ಶಕ್ತಿ-ಸಾಮರ್ಥ್ಯ ಎಷ್ಟಿರುತ್ತದೋ ಅಷ್ಟು ಎಂಬಂತೆ ಇರುತ್ತದೆ. ವರ್ಷದ ನಂತರ ವಾರಕ್ಕೆರಡು ಮತ್ತು ಮೂರು, ಮಗುವಾದ ನಂತರ ವಾರಕ್ಕೊಮ್ಮೆ, ಆಮೇಲೆ ಇನ್ನೂ ಸ್ವಲ್ಪ ದಿನವಾದ ಮೇಲೆ ತಿಂಗಳಿಗೊಂದು ಬಾರಿ ಹೀಗೆ ಸಾಗುತ್ತದೆ ಅಂಕಿ-ಅಂಶಗಳು. ಅದಕ್ಕೆ ಹೇಳುವುದು ನೀವು ಸಂಸಾರದ ಒತ್ತಡದಲ್ಲಿ ನಿಮ್ಮನ್ನು ನೀವು ಮರೆತಿದ್ದೀರಿ ಎಂದು. ಸ್ವಲ್ಪ ಶಾಪಿಂಗ್ ಹೋಗಿ ಬನ್ನಿ. ನೀವು ಲಿಪ್‌ಸ್ಟಿಕ್ ಧರಿಸುವಂತಿದ್ದರೆ ಒಂದೆರಡು ಹೊಸದು ಹುಡುಕಿ ತನ್ನಿ. ಇನ್ನೂ ನೇಲ್ ಪಾಲಿಶ್, ಕ್ರೀಮ್ ಇದೆಲ್ಲಾ ನಿಮ್ಮ ಪಟ್ಟಿಯಲ್ಲಿ ಇದ್ದೇ ಇರುತ್ತದೆ. ಮನೆಯಲ್ಲಿದ್ದಾಗಲೂ ತಕ್ಕಮಟ್ಟಿಗೆ ಒಳ್ಳೆಯ ಬಟ್ಟೆಗಳನ್ನು ಧರಿಸಿ, ಅದನ್ನು ಬಿಟ್ಟು "ಹಸ್ರು ಸೀರೆ ಹಳೆ ನೈಟಿ" ಬೇಡ. ಕನಿಷ್ಠ ಹೊಸ ನೈಟಿಯಾದರೂ ಖರೀದಿಸಿ. ಮುಖ್ಯವಾಗಿ ನೀವು ಬರೀ ಕಪ್ಪು ಮತ್ತು ಬಿಳಿ ಒಳ ಉಡುಪುಗಳನ್ನು ಧರಿಸುವಂತಿದ್ದರೆ ಅದರ ಬದಲಿಗೆ ಕೆಲವೊಂದು ಬಣ್ಣದ ಒಳ ಉಡುಪುಗಳನ್ನು ಸಹ ಖರೀದಿಸಿ. ಇವುಗಳು ನಿಮ್ಮ ಗಂಡನಿಗೆ ಖಂಡಿತ ಇಷ್ಟವಾಗುತ್ತವೆ. ಇನ್ನು ನೀವು ಆನ್‌ಲೈನ್ ಖರೀದಿ ಮಾಡುವವರಾಗಿದ್ದಲ್ಲಿ ನಿಮಗೆ ಬೇಕಾದ ಕಾಮಪ್ರಚೋದಕ ಉಡುಪುಗಳು ಕಡಿಮೆ ಬೆಲೆಗೆ ದೊರೆಯುತ್ತವೆ ಖರೀದಿಸಿ. ನಿಮ್ಮ ಗಂಡನ ಮನಃಸಂತೋಷಪಡಿಸಿ, ಮುಂದಿನ ತಿಂಗಳು ಅವರೇ ನಿಮಗೆ ಬೇಕಾದ ಉಡುಪುಗಳ ಉಡುಗೊರೆ ನೀಡುತ್ತಾರೆ.

ದೇಹದ ಗಂಧದತ್ತ ಗಮನ ನೀಡಿ

ದೇಹದ ಗಂಧದತ್ತ ಗಮನ ನೀಡಿ

ಗಂಡಸರಿಗೆ ಎಲ್ಲಾ ವಾಸನೆಗಳು ಮಧುರವಾಗಿರಬೇಕು ಹಾಗು ಅದಕ್ಕೆ ಅವರು ತಕ್ಕಂತೆ ಪ್ರತಿಕ್ರಿಯೆಯನ್ನು ಸಹ ನೀಡುತ್ತಾರೆ. ಹೆಂಡತಿಯರ ಮೈಯಿಂದ ಸುಗಂಧವು ಹೊರಸೂಸುತ್ತಿದ್ದರೆ ಗಂಡಂದಿರಿಗೆ ಆ ವಾಸನೆಯೇ ಕಾಮಪ್ರಚೋದನೆಯನ್ನು ಮಾಡುತ್ತದೆ. ಆದರೂ ದೇಹದಿಂದ ಸುವಾಸನೆ ಹೊರತರಲು ಸ್ವಲ್ಪ ಪ್ರಯತ್ನ ಬೇಕಾಗುತ್ತದೆ. ಇದು ಸ್ವಲ್ಪ ದುಬಾರಿ ಏಕೆಂದರೆ ಮೈಗೆ ಹಾಕುವ ಸೋಪ್, ಪರ್ಫ್ಯೂಮ್, ಡಿಯೋಡೆರೆಂಟ್, ಇತ್ಯಾದಿಗಳನ್ನು ಬಳಸಿ. ದೇಹ ಬೇಸಿಗೆಯಲ್ಲಿ ಬೆವರಿನಿಂದ ದುರ್ಗಂಧ ಬರುತ್ತಿದ್ದಲ್ಲಿ ಸ್ನಾನದ ನೀರಿಗೆ ರೋಸ್ ವಾಟರ್ ಒಂದು ಚಮಚ ಹಾಕಿಕೊಂಡು ಸ್ನಾನ ಮಾಡಿ. ನಿಮಗೆ ಬೇರೆ ಕೆಲಸವಿಲ್ಲದಿದ್ದಲ್ಲಿ, ಸಂಜೆ ಪತಿ ಬರುವ ಸ್ವಲ್ಪ ಸಮಯಕ್ಕೆ ಮೊದಲು ಸ್ನಾನ ಪುನಃ ಸ್ನಾನ ಮಾಡಿ ಸಿದ್ಧರಾಗಿರಿ. ಇದರಿಂದ ಸಹ ಅವರಿಗೆ ಸಂತೋಷವಾಗುತ್ತದೆ. ಇನ್ನು ನಿಮಗೆ ಮತ್ತು ನಿಮ್ಮವರಿಗೆ ಇಷ್ಟವಾದರೆ ರಾತ್ರಿ ಮಲ್ಲಿಗೆ ಹೂವು ಮುಡಿದುಕೊಳ್ಳಿ.

ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ

ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ

ತೀರಾ ಸಣ್ಣಗಿದ್ದರೂ ಗಂಡಸರಿಗೆ ಇಷ್ಟವಾಗುವುದಿಲ್ಲ. ತೀರಾ ದಪ್ಪಗಿದ್ದರೂ ಅವರಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಮದುವೆಯಾದಾಗ ನಿಮ್ಮ ಸೌಂದರ್ಯವನ್ನು ನೋಡಿ ಮದುವೆಯಾಗಿರುವ ಗಂಡ, ನಿಮ್ಮ ಸ್ಥೂಲಕಾಯವನ್ನು ಸಹಿಸಿಕೊಳ್ಳಬಹುದೇ ಹೊರತು ನಿಮ್ಮತ್ತ ಆಕರ್ಷಿತರಾಗುವುದಿಲ್ಲ. ಆದ್ದರಿಂದ ಸ್ವಲ್ಪ ತೆಳ್ಳಗಾಗಲು ಪ್ರಯತ್ನಿಸಿ. ಹಾಗೆಂದು ತೀರಾ ಸಣ್ಣ ಆಗಬೇಡಿ. ಇದಕ್ಕಾಗಿ ನಿಮ್ಮ ಗಂಡನ ಸಹಾಯ ಸಹ ಪಡೆಯಿರಿ. ಜಾಗಿಂಗ್, ನಡಿಗೆ ಹಾಗು ಯಾವುದಾದರೂ ಒಂದು ಕ್ರೀಡೆಯಲ್ಲಿ ಒಟ್ಟಿಗೆ ಪಾಲ್ಗೊಳ್ಳುವ ಮೂಲಕ ನೀವು ಅವರ ಮನಸ್ಸನ್ನು ಗೆಲ್ಲಬಹುದು ಜೊತೆಗೆ ನಿಮ್ಮ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು. ಈಜು, ಜಿಮ್, ಯೋಗ ಇತ್ಯಾದಿ ನಿಮಗೆ ನೆರವು ನೀಡುತ್ತದೆ. ನೀವು ಸ್ಥೂಲಕಾಯವನ್ನು ಕರಗಿಸಿಕೊಂಡ ಮೇಲೆ, ನಿಮ್ಮ ಗಂಡನ ನೆಚ್ಚಿನ ಬಟ್ಟೆಯನ್ನು ಧರಿಸಿ ಅವರ ಮುಂದೆ ಕಾಣಿಸಿಕೊಳ್ಳಿ ಆಗ ನೋಡಿ, ಅವರ ಅಭಿಪ್ರಾಯ.

ಗಂಡನ ಜೊತೆಗೆ ಹೆಂಡತಿಗಿಂತ ಹೆಚ್ಚಾಗಿ ಸ್ನೇಹಿತೆಯಾಗಿರಿ

ಗಂಡನ ಜೊತೆಗೆ ಹೆಂಡತಿಗಿಂತ ಹೆಚ್ಚಾಗಿ ಸ್ನೇಹಿತೆಯಾಗಿರಿ

ಕೆಲವೊಮ್ಮೆ ಹೆಂಡತಿ ತನ್ನ ಅಧಿಕಾರವನ್ನು ಗಂಡನ ಮೇಲೆ ಹೆಚ್ಚಾಗಿ ಚಲಾಯಿಸುತ್ತಾರೆ ಎಂಬ ಆರೋಪ ಗಂಡಂದಿರು ಮಾಡುತ್ತಿರುತ್ತಾರೆ. ಮದುವೆಗೆ ಮೊದಲು ಪ್ರೀತಿಸಿ ಮದುವೆಯಾಗಿದ್ದರೂ, ಮದುವೆಯ ನಂತರ ಅವರು ಪಕ್ಕಾ ಹೆಂಡತಿಯಾಗಿ ಬದಲಾಗಿ ಬಿಟ್ಟಿರುತ್ತಾರೆ. ಅದಕ್ಕಾಗಿ ನೀವು ಗಂಡನ ಜೊತೆಗೆ ಹೆಂಡತಿಯಾಗಿ ನಡೆದುಕೊಳ್ಳುವುದಕ್ಕಿಂತ ಸ್ನೇಹಿತೆಯಾಗಿ ಇದ್ದಲ್ಲಿ ಗಂಡನಿಗೆ ಅನುಕೂಲ ಹಾಗು ಅವರ ಪ್ರೀತಿ ಪಡೆಯಬಹುದು. ಡಾರ್ಲಿಂಗ್ ನೀವು ಆಫೀಸಿಗೆ ಹೋಗಿ ಮಗುವನ್ನು ಸ್ಕೂಲಿಗೆ ನಾನು ಬಿಡುತ್ತೇನೆ, ಕರೆಂಟ್ ಬಿಲ್ ನಾನು ಪಾವತಿಸುತ್ತೇನೆ, ಮನೆಗೆ ಸಾಮಾನು ನಾನು ತರುತ್ತೇನೆ ಎಂಬಂತಹ ಮಾತುಗಳು ಗಂಡಸರಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತವೆ. ಇನ್ನೂ ಮುಂದೆ ಹೋಗಿ ವೀಕೆಂಡ್ ಯಾವಾಗ ನೀವು ಫ್ರೀ ಹೇಳಿ, ನಿಮ್ಮ ನೆಚ್ಚಿನ ಮೂವಿಗೆ ಬುಕ್ ಮಾಡುತ್ತೇನೆ ಹೋಗೋಣಾ ಎನ್ನುವುದು, ಐಪಿಎಲ್‌ನಲ್ಲಿ ಆರ್‌ಸಿಬಿ ಪಂದ್ಯ ಇದ್ದಾಗ ಗಂಡನಿಗೆ ಇಷ್ಟವಾಗುವ ಕುರುಕಲು ತಿಂಡಿ ಮಾಡಿಕೊಂಡು ಆತನ ಜೊತೆಗೆ ಕುಳಿತು ಮ್ಯಾಚ್ ನೋಡುವುದು ಇತ್ಯಾದಿ ಮಾಡಿ. ಪಂದ್ಯ ನಡೆಯುವಾಗ ಖುಷಿಯ ಗಳಿಗೆಗಳಲ್ಲಿ ನಿಮ್ಮ ಸರಸ ಸಲ್ಲಾಪಗಳನ್ನು ನಡೆಸಬಹುದು (ಮನೆಯಲ್ಲಿ ನೀವಿಬ್ಬರೇ ಇದ್ದಲ್ಲಿ, ಇಲ್ಲವೇ ಏಕಾಂತವಿದ್ದಲ್ಲಿ).
ಹೀಗೆ ಗಂಡನ ಮನಸ್ಸನ್ನು ಅರ್ಥ ಮಾಡಿಕೊಂಡು ಅವರನ್ನು ಮತ್ತೆ ಕಾಮ ಪ್ರಚೋದಕ ವಾತಾವರಣಕ್ಕೆ ಕರೆತನ್ನಿ. ಇದರಿಂದ ನಿಮ್ಮ ಮತ್ತು ನಿಮ್ಮ ಗಂಡನ ನಡುವಿನ ಸಂಬಂಧ ಸುಧಾರಿಸುವುದರ ಜೊತೆಗೆ ಮತ್ತಷ್ಟು ಮಧುರವಾಗಿರುತ್ತದೆ.

 
 
English summary
Quite a number of marriage relationships become sexually stale with time and need external stimulation. This is not necessarily because of lack of love for one another. It is more because of the pressures of life that a woman has to deal with- work, children, church or volunteer work, extended family. It is difficult to juggle all these and still be sexually alert. She does not pay much attention to herself or her surroundings. However, every wife must always remember that she creates the atmosphere in the home.
Story first published: Tuesday, April 11, 2017, 23:14 [IST]

Get Notifications from Kannada Indiansutras