ಬೆಳಗ್ಗೆ ಎದ್ದ ಕೂಡಲೆ ನಿಮ್ಮಾಕೆ ನಿಮಗೆ ಸುಂದರವಾಗಿ ಕಾಣಲು ಆರಂಭಿಸುತ್ತಾರೆ. ಪುರುಷರು ಬೆಳಗ್ಗೆ ಎದ್ದ ಕೂಡಲೆ ಮನ್ಮಥನ ಬಾಣಕ್ಕೆ ತುತ್ತಾದವರಂತೆ ಆಡುತ್ತಾರೆ ಅಲ್ಲವೇ? ನಿಜ ಏಕೆಂದರೆ ಬೆಳಗಿನ ಆ ವಾತಾವರಣವೇ ಹಾಗೆ ಮನ್ಮಥ ಲೀಲೆಗೆ ಹೇಳಿ ಮಾಡಿಸಿದ ರೀತಿಯಲ್ಲಿ ಇರುತ್ತದೆ.
ದಿನವಿಡೀ ಕೆಲಸ ಮಾಡಿ ಮನೆಗೆ ಬಂದು ಊಟವಾದ ಮೇಲೆ ಸೋಫಾ ಕುರ್ಚಿ ಹೀಗೆ ಎಲ್ಲೆಂದರಲ್ಲಿ ನಿದ್ರಾದೇವಿ ಪುರುಷರನ್ನು ಆವರಿಸುತ್ತಾ ಇರುತ್ತಾಳೆ. ಮಹಿಳೆಯರು ಅಷ್ಟೇ ಬೆಳಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿರುತ್ತಾರೆ. ಅದೇ ಬೆಳಗ್ಗೆ ನಿದ್ದೆ ಮಾಡಿ, ಮೈ ಮನಸ್ಸು ಹಗುರ ಮಾಡಿಕೊಂಡಿರುವ ಇವರಿಗೆ ಬಯಕೆಗಳು ಆರಂಭವಾಗುವ ಕಾಲ ಇದಾಗಿರುತ್ತದೆ.
ಅದಕ್ಕೆ ಪುರುಷರಿಗೆ ಬೆಳಗ್ಗೆ ಬಹುತೇಕ ಪಾಲು ಅವರ ಲಿಂಗ ನಿಮಿರಿರುತ್ತದೆ, ಇಲ್ಲವೆ ಬೇಗ ನಿಮಿರಲು ಆರಂಭಿಸುತ್ತದೆ. ಮಹಿಳೆಯರು ತಮ್ಮ ಸಂಗಾತಿಗೆ ಈ ಸಮಯದಲ್ಲಿ ಸಹಕರಿಸುವುದಿಲ್ಲ ಎಂಬ ದೂರಿದೆ. ಅದಕ್ಕೆ ಕಾರಾಣವೇನು? ಚರ್ಚಿಸೋಣ ಬನ್ನಿ. ಕುತೂಹಲಕರ ವಿಚಾರವೇನೆಂದರೆ ಪುರುಷರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಮುಂಜಾನೆ ಎದ್ದ ಕೂಡಲೆ ಹೆಚ್ಚಾಗಿರುತ್ತದೆ.ಆದರೆ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಸ್ರವಿಸುವುದಾದರೂ ಅದು ಕಡಿಮೆ ಇರುತ್ತದೆ. ರಾತ್ರಿಯ ಹೊತ್ತು ಈ ಪ್ರಮಾಣ ಅವರಲ್ಲಿ ಅಧಿಕವಾಗಿರುತ್ತದೆ. ಅದೇ ಕಾರಣಕ್ಕಾಗಿ ಪುರುಷರು ಬೆಳಗ್ಗೆ ಲೈಂಗಿಕ ಕ್ರಿಯೆಯನ್ನು ಬಯಸಿದರೆ, ಮಹಿಳೆಯರು ರಾತ್ರಿಗೆ ಬಯಸುತ್ತಾರೆ. ಬನ್ನಿ ಇದರ ಕುರಿತು ಒಂದು ನೋಟ ಪಡೆಯೋಣ.
ಬೆಳಗ್ಗೆ ಟೆಸ್ಟೋಸ್ಟಿರೋನ್ ಮಟ್ಟವು ಅಧಿಕವಾಗಿರುತ್ತದೆ
ಮೊದಲೇ ತಿಳಿಸಿದಂತೆ ಪುರುಷರಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಬೆಳಗ್ಗೆ ಅಧಿಕವಾಗಿರುತ್ತದೆ. ಅಧ್ಯಯನಗಳ ಪ್ರಕಾರ ರಾತ್ರಿ ಗಾಢವಾಗಿ ನಿದ್ದೆ ಮಾಡುವ ವ್ಯಕ್ತಿಗಳಲ್ಲಿ ಟೆಸ್ಟೋಸ್ಟಿರೋನ್ ಮಟ್ಟವು ಬೆಳಗ್ಗೆ ಹೆಚ್ಚಾಗಿರುತ್ತದೆಯಂತೆ.
ಒತ್ತಡದ ಹಾರ್ಮೋನ್‌ಗಳು ಲೈಂಗಿಕ ಹಾರ್ಮೋನ್‌ಗಳನ್ನು ನಿರ್ಬಂಧಿಸುತ್ತವೆ
ದಿನ ಕಳೆದಂತೆ ಪುರುಷ ಮತ್ತು ಮಹಿಳೆಯರಿಬ್ಬರೂ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಕಾರ್ಟಿಸೋಲ್ ಎಂದು ಕರೆಯಲಾಗುವ ಒತ್ತಡದ ಹಾರ್ಮೋನ್ ದೇಹದಲ್ಲಿ ಹೆಚ್ಚಾಗುತ್ತಾ ಹೋದಂತೆ, ಲೈಂಗಿಕ ಹಾರ್ಮೋನ್‌ಗಳು ಕಡಿಮೆಯಾಗುತ್ತಾ ಹೋಗುತ್ತವೆ. ಇದು ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಲೈಂಗಿಕಾಸಕ್ತಿಯನ್ನು ಕಡಿಮೆ ಮಾಡುತ್ತದೆ.
ಫ್ಲರ್ಟ್ ಮಾಡುವ ಹಾರ್ಮೋನ್‌ಗಳು
ಪುರುಷರು ದಿನವಿಡೀ ಟೆಸ್ಟೋಸ್ಟಿರೋನ್ ಹಾರ್ಮೋನ್ ಅನ್ನು ಉತ್ಪಾದಿಸುತ್ತಲೆ ಇರುತ್ತಾರೆ. ಆಗ ನರ ವ್ಯೂಹವು ಪುರುಷರನ್ನು ಫ್ಲರ್ಟ್ ಮಾಡಲು ಪ್ರಚೋದಿಸುತ್ತದೆ. ಉದಾಹರಣೆಗೆ ಪುರುಷರು ತಮ್ಮ ನಡುವೆ ಆಕರ್ಷಣೀಯವಾಗಿ ಕಾಣುವ ಸಹೋದ್ಯೋಗಿಯನ್ನು ನೋಡಿದಾಗ, ಮೆದುಳಿನಲ್ಲಿ ಉತ್ತಮ ಮೂಡ್ ನೀಡುವ ನ್ಯೂರೋಟ್ರಾನ್ಸ್‌ಮಿಟ್ಟರ್‌ಗಳು ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಆತನ ಜನನಾಂಗಕ್ಕೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಹೀಗಾದಾಗ ಆ ವ್ಯಕ್ತಿ ಆ ಸಹೋದ್ಯೋಗಿಯ ಜೊತೆಗೆ ಫ್ಲರ್ಟ್ ಮಾಡಲು ಆರಂಭಿಸುತ್ತಾನೆ. ಇದು ದಿನವಿಡೀ ನಡೆಯುವ ಪ್ರಕ್ರಿಯೆ!