•  

ಸಂಭೋಗದಿಂದ ಸಮಾಧಿಯ ಕಡೆಗೆ..

Array
 
ಶಾಮ್,

ಕಾಮಸೂತ್ರ ಆಡಿಯೋ ಬುಕ್ ಸುದ್ದಿ ಓದಿದೆ. ಅದಕ್ಕೆ ನನ್ನ ಪ್ರತಿಕ್ರಿಯೆ ಹೀಗಿದೆ :

ಮಾನವ ಸೃಷ್ಟಿಸಿದ ಧರ್ಮ, ಸಂಸ್ಕೃತಿಗಳಿಗೆ ಕಾಮದ ಮೇಲೆ ಅದೇಕೆ ತಾತ್ಸಾರವೋ! ಕೋಪವೋ! ಶತ ಶತಮಾನಗಳಿಂದ ಮನುಷ್ಯ ಕಾಮದ ಬಗ್ಗೆ ಮಾತನಾಡುವುದು ಅಸಹ್ಯ, ಅಶ್ಲೀಲ ಎಂದು ಹೇಳುತ್ತ ಬಂದಿರುವನಾದರೂ, ಅದೇ ಕಾಮದ ವಾಸನೆಯಲ್ಲಿ ನರಳುತ್ತಿರವದಂತು ಸತ್ಯ. ಅದನ್ನು ವಿರೋಧಿಸುವುದರಿಂದ, ಅದುಮಿಕ್ಕುವುದರಿಂದ ಇನ್ನಷ್ಟು ಕಾಮುಕನಾಗುತ್ತಾನೆಯೇ ಹೊರತು ಅದರಿಂದ ಹೊರಬರಲಾರ.

ಕಾಮವನ್ನು ಆನಂದದಿಂದ, ಪವಿತ್ರತೆಯಿಂದ, ಧನ್ಯತೆಯಿಂದ ಸ್ವೀಕರಿಸಿ, ಕಾಮ ಧಾರೆಯನ್ನು ಮೇಲ್ಮಟ್ಟಕ್ಕೆ ಒಯ್ಯವುದು ಒಳಿತು. ಕಾಮ ವಾಸನೆ ಪ್ರೇಮಕ್ಕೆ ರೂಪಾಂತರವಾಗಬೇಕು. ಆ ದಿವ್ಯ ಪ್ರೇಮವೇ ಜೀವನ ಸಾಕ್ಷಾತ್ಕಾರದ ಮೊದಲ ಹೆಜ್ಜೆ. ನಾವು ಎಷ್ಟು ಪರಿಪೂರ್ಣ ಹೃದಯದಿಂದ ಅದನ್ನು ಸ್ವೀಕರಿಸುತ್ತೆವೆಯೋ ಅಷ್ಟೇ ಅದರಿಂದ ಮುಕ್ತನಾಗಲು ಸಾಧ್ಯ. ನಾವು ಎಷ್ಟು ಅಸ್ವೀಕಾರ ಮಾಡುತ್ತೇವೆಯೋ ಅಷ್ಟೇ ಅದರ ಬಂಧನದಲ್ಲಿ ಸಿಲುಕುತ್ತೇವೆ (ನಾವು ಇತ್ತೀಚಿಗೆ ಕೇಳುತ್ತಿರುವ ಕಾಮಿ ಸನ್ಯಾಸಿಗಳ ಕಥೆಗಳೇ ಇದಕ್ಕೆ ಸಾಕ್ಷಿ ).

ಆದರೆ ಕಡೆಗೊಂದು ದಿನ ಆ ಕಾಮ ಶಕ್ತಿಯ ರೂಪಾಂತರವಾಗಲೇಬೇಕು- ಅಂದಾಗ ಮಾತ್ರ, ಬದುಕಿಗೊಂದು ಅರ್ಥ. ಕಾಮದ ಕಡೆಗೆ ಹರಿವ ಶಕ್ತಿಯನ್ನ ಪ್ರೇಮ, ಧ್ಯಾನಗಳ ಕಡೆಗೆ ಹರಿಬಿಟ್ಟಾಗ ಮಾತ್ರ ಅಂಥದೊಂದು ರೂಪಾಂತರವಾಗಲು ಸಾಧ್ಯ... and that journey from sex to super consciousness is one of the greatest transforming journey for a man. ಹೀಗೊಂದು ಸಂಭೋಗದಿಂದ ಸಮಾಧಿಯ ಕಡೆಗೆ ನಮ್ಮ ಚಿತ್ತ ತಿರುಗುವ ಸಂದರ್ಭ ಬಂದಾಗ, ನಾವು ನಿರ್ಭಿಡೆಯಿಂದ ಆ ಅಲ್ಲಮನ ಮಾತುಗಳನ್ನ ಹೇಳಬಹುದು -

ಎಸೆಯದಿರು, ಎಸೆಯದಿರು
ಕಾಮ, ನಿನ್ನ ಬಾಣ ಹುಸಿಯಲೇಕೋ?
ಲೋಭ-ಮೋಹ-ಮದ-ಮತ್ಸರ
ಇವು ಸಾಲದೇ ನಿನಗೆ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೇ ಮರುಳು ಕಾಮ ?!

(ಮೂಲ : ಓಶೋ Talks)

- ರಾಜ್ ಹಿರೇಮಠ

English summary
...and that journey from sex to super consciousness is one of the greatest transforming journey for a man.
Story first published: Saturday, August 7, 2010, 12:40 [IST]

Get Notifications from Kannada Indiansutras