•  

ಲೈಂಗಿಕಾನುಭವ : ಹೇಳಲೇಬೇಕಾದ ಕಥೆಗಳು

Array
Siddu Yapalaparavi, Gadag
 
ಈ ಘಟನೆ ತುಂಬಾ ಹಳೆಯದಾದರೂ ಆಗಾಗ ನನ್ನನ್ನು ಕಾಡುತ್ತಲೇ ಇರುತ್ತದೆ. ನಮ್ಮೂರ ಕಡೆ ಶಿಕ್ಷಕರು, ಪಾಲಕರು ಬಾಲ್ಯದಲ್ಲೇ ಲೈಂಗಿಕ ಶಿಕ್ಷಣ ನೀಡಿದ್ದರೆ ಈ ರೀತಿಯ ಅಪಾಯಗಳು ತಪ್ಪುತ್ತಾ ಇದ್ದವೇನೋ ಅನಿಸುತ್ತದೆ. ನನ್ನ ಬಾಲ್ಯದ ದಿನಗಳಿಂದ ಹೆಕ್ಕಿದ ಕೆಲವು ನೈಜ ಪ್ರಸಂಗಗಳನ್ನು ನಿಮ್ಮ ಮುಂದೆ ಇಡುವ ಮನಸ್ಸಾಗಿದೆ. One thing leads to another ಎಂಬ ಲೋಕೋಕ್ತಿಯಂತೆ ಇಲ್ಲಿನ ಘಟನಾವಳಿಗಳನ್ನು ಗಮನಿಸಿ:

ಚಿಕ್ಕ ಹುಡುಗಿ : ಎಂಟನೇ ತರಗತಿಯಲ್ಲಿ ಓದುವಾಗ ಗೆಳೆಯರೆಲ್ಲ ವಯಸ್ಸಿನಲ್ಲಿ ಒಂದೆರಡು ವರ್ಷ ದೊಡ್ಡವರಿದ್ದರು. ಆಗಾಗ ರಹಸ್ಯವಾಗಿ ತಮ್ಮ ಲೈಂಗಿಕಾನುಭವಗಳನ್ನು ರಸವತ್ತಾಗಿ ವರ್ಣಿಸುತ್ತಿದ್ದರು. ಕುತೂಹಲವಿದ್ದರೂ ಒಳಗೊಳಗೆ ಭಯವೆನಿಸುತ್ತಿತ್ತು. ಹತ್ತನೇ ವರ್ಗದಲ್ಲಿದ್ದ ಗೆಳೆಯನ ಮದುವೆ ಆಗಿತ್ತು. ಮನೆಯಲ್ಲಿ ಅಕ್ಕನ ಮಗಳನ್ನು ಮದುವೆ ಆಗೋ ಅನಿವಾರ್ಯ, ಖರ್ಚಿನಲ್ಲಿ ಖರ್ಚು ಎಂದು ಮದುವೆಯಾಗಿದ್ದ. ಹುಡುಗಿ ತುಂಬಾ ಚಿಕ್ಕವಳು ಆದ್ದರಿಂದ ಆತನ ಮದುವೆಗೆ ವಿಶೇಷತೆಯಿರಲಿಲ್ಲ.

ಗೆಳೆಯರ ಬಳಗ : ನನ್ನ ಗೆಳೆಯರು ಅವನ ಮದುವೆಯ ಸಂದರ್ಭದಲ್ಲಿ ಪಡೆದ ಪಾರ್ಟಿ ಕತೆ ಕೇಳಿದರೆ ಖಂಡಿತಾ ನೀವು ಬೆಚ್ಚಿ ಬೀಳುತ್ತೀರಿ. ನಮ್ಮ ಜಿಲ್ಲೆಯ ಪಕ್ಕದ ಜಿಲ್ಲೆಯ ಒಂದು ಹಳ್ಳಿಯಲಿ ದೇವದಾಸಿ ಪದ್ಧತಿ ಜೀವಂತವಾಗಿತ್ತು. ಅಲ್ಲಿ ಕೆಲವು ಮನೆಗಳಲ್ಲಿ ವಿಚಿತ್ರ ರೀತಿಯ ವೇಶ್ಯಾವಾಟಿಕೆ ನಡೆಯುತ್ತಿತ್ತಂತೆ. ನಮ್ಮ ನಾಲ್ಕಾರು ಜನ ಗೆಳೆಯರು ಮದುವೆಯಾದ ಹುಡುಗನೊಂದಿಗೆ ಆ ಊರಿಗೆ ಹೋಗುವ ಯೋಜನೆ ರೂಪಿಸಿಕೊಂಡಿದ್ದರು. ವಯಸ್ಸಿನಲ್ಲಿ ಕಿರಿಯನಾದ ನನ್ನನ್ನು ಅಲ್ಲಿಗೆ ಕರೆಯಲಿಲ್ಲ.

ಮೋಜಿನ ಯಾತ್ರೆ : ಕಾರಟಗಿಂದ ಹೊಸಪೇಟೆಗೆ ಅಂಬಾಸಡರ್ ಕಾರಿನಲ್ಲಿ ಹೋಗಿ, ಬೀರು, ಕೋಳಿಯ ರುಚಿ ನೋಡಿ, ಅಂದೇ ರಾತ್ರಿ ಹೊಸಪೇಟೆ ದಾಟಿಹೋಗಿ ಆ ಹಳ್ಳಿಯಲ್ಲಿ ರಾತ್ರಿಯ ರತಿಸುಖ ಪಡೆಯುವ ಮೋಜಿನ ಯಾತ್ರೆಯಾಗಿತ್ತು. ಅಲ್ಲಿರುವ ಕೆಲವು ಮನೆಗಳಲ್ಲಿ ಒಂದೆರಡು ದಿನ ಇದ್ದು ಎಲ್ಲ ರೀತಿಯ ಸುಖ ಅನುಭವಿಸುವ ವ್ಯವಸ್ಥೆ ಇತ್ತಂತೆ. ಆ ಮನೆಯಲ್ಲಿಯೇ ಊಟ ವಸತಿ ಹಾಗೂ ರತಿಸುಖದ ಸಂಪ್ರದಾಯದ ಮನೆಗಳಲ್ಲಿ ಸೆಕ್ಸ್ ಅನುಭವಿಸುವ ಸಂಭ್ರಮಕ್ಕೆ ಮದುವೆಯಾದ ಹುಡುಗನು ಹೋಗಿದ್ದು ನನ್ನನ್ನು ತಲ್ಲಣಗೊಳಿಸಿತು.

ಸಮೂಹ ಸುಖ : ಕೇವಲ 18ರ ಪ್ರಾಯದ ಗೆಳೆಯರು ಹೀಗೆ ಸಾಮೂಹಿಕ ಲೈಂಗಿಕ ಸುಖ ಅನುಭವಿಸುವ ಪಾರ್ಟಿಯನ್ನು ಗೆಳೆಯನ ಮದುವೆಯ ನೆಪದಲಿ ಪಡೆದುಕೊಂಡದ್ದು ನನಗೆ ಬೇಸರವಾಯಿತು. ಆ ಪಾರ್ಟಿಗೆ ನನ್ನ ಕ್ಲಾಸಿನ ಇಬ್ಬರು ಗೆಳೆಯರು ಹೋಗಿದ್ದರು. ಹೊಸ ಅನುಭವದಿಂದ ತತ್ತರಗೊಂಡ, ಗೆಳೆಯರು ಬಿತ್ತರಿಸಿದ ವಿವರ ಇಂದಿಗೂ ನೆನಪಿದೆ. ಅಂದು ರಾತ್ರಿ ಆ ಮನೆಗಳಿಗೆ ತಲುಪಿದ ಮೇಲೆ ಅವರೇ ಸ್ನಾನ ಮಾಡಿಸಿದರಂತೆ, ಏನೋ ಅರಿಯದವರಿಗೆ ಸೆಕ್ಸ್ ಹೇಗೆ ಅನುಭವಿಸಬೇಕು ಎಂದು ವಿವರಿಸುವುದಲ್ಲದೇ, ಗೃಹಿಣಿಯರಂತೆ ಅಪ್ಪಟ ಸುಖಾನುಭವ ನೀಡಿ ಖುಷಿಕೊಟ್ಟರಂತೆ. 16 -18 ಪ್ರಾಯದಲ್ಲಿ ಲೈಂಗಿಕಾನುಭವದ ಅಗತ್ಯವಿತ್ತೆ ಎಂಬ ಪ್ರಶ್ನೆ ನನ್ನನ್ನು ಕಾಡಿತು.

ನಾನು ಅರೆಹುಚ್ಚ : ಅಬ್ಬಾ! ಭಾರಿ ಮಜ ಅನಿಸ್ತಲೆ ಎಂದು ಗೆಳೆಯರು ವರ್ಣಿಸಿದ್ದೇ ವರ್ಣಿಸಿದ್ದು. ಒಂದು ದಿನದ ಹಾಲ್ವನ್ನು ಎರಡು ದಿನಕ್ಕೆ ವಿಸ್ತರಿಸಿ ಮದುವೆಯಾದ ಗೆಳೆಯನಿಗೆ ಪರಸ್ತ್ರೀಯೊಂದಿಗೆ ಸುಖ ಕೊಡಿಸಿದ ಮಹನೀಯರನ್ನು ಅವನು ಕೊಂಡಾಡಿದ. ಮತ್ತೆ ಅದೇ ಗೆಳೆಯ ಮಹಾಜ್ಞಾನಿಯಂತೆ ವಿವರಿಸಿದ, ನೋಡು 40 ಹನಿ ರಕ್ತ ಸೇರಿ, ಒಂದು ಹನಿ ವಿರ್ಯವಾಗುತ್ತದೆಯಂತೆ, ಆ ವಿರ್ಯವನ್ನು ಸ್ವಪ್ನ ಸ್ಖಲನ ಅಥವಾ ಮ್ಟುಷ್ಟಿ ಮೈಥುನದ ಮೂಲಕ ಹೊರ ಹಾಕಿದರೆ ಮನುಷ್ಯ ಸೊರಗುತ್ತಾನಂತೆ, ಒಣ ಮೀನಿನಂತಾಗುತ್ತಾನಂತೆ. ಅದೇ ಹೆಣ್ಣಿನ ಸಹವಾಸ ಮಾಡಿದರೆ ಜೀವನಕ್ಕೆ ಚೈತನ್ಯ ಸಿಗುತ್ತೆ ಎಂದು ಬುರುಡೆ ಬಿಟ್ಟ. ಅದನ್ನು ನಾನು ಅರೆಹುಚ್ಚನಂತೆ, ಕುತೂಹಲದಿಂದ ಆಲಿಸಿದ್ದೆ.

ಹದಿನಾಕರ ವಯಸು : ಆದರೆ ಈ ಘಟನೆ ನನ್ನನ್ನು ತೀವ್ರವಾಗಿ ಕಾಡಿ, ಕಿರಿಕಿರಿ ಎನಿಸಿತು. ಗೆಳೆಯರಿಗೆ ತಿಳಿ ಹೇಳುವ ಅಗತ್ಯವಿರಲಿಲ್ಲ. ಆದರೆ ದಿಢೀರೆಂದು ಲೈಂಗಿಕ ಕುತೂಹಲ ಹೆಚ್ಚಿಸಿತು. ಕೆಲವು ಸಮಾನ ಮನಸ್ಕ ಗೆಳೆಯರೂ ಕೂಡಾ ಅವನ ಮಾತನ್ನು ಅನುಮೋದಿಸಿದರು. ಆದರೆ ಅವರು ವೇಶ್ಯೆಯರ ಸಂಗವನ್ನು ಸಮ್ಮತಿಸದೇ ಇದ್ದುದು ನನ್ನ ಪುಣ್ಯ. ಇಲ್ಲ, ಸ್ವಪ್ನ ಸ್ಖಲನ, ಮುಷ್ಟಿಮೈಥುನ ಅಪಾಯ ಅಲ್ಲ ಎಂದು ತಾವು ಓದಿದ್ದೇವೆ ಎಂದು ಬೇರೆ ಹೇಳಿದರು. ಹರೆಯದಲ್ಲಿ ಸೆಕ್ಸ್ ಯಾವಾಗ ಜಾಗೃತವಾಗುತ್ತದೆ ಎಂದು ವಿಜ್ಞಾನ ಹೇಳುವುದಕ್ಕಿಂತ ಅವರವರ ಜೀವನಾನುಭವವೇ ಮುಖ್ಯ ಎಂದೆನಿಸಿತು. ಹೀಗಾಗಿ ಗೆಳೆಯರೆಲ್ಲ ಸೇರಿ ಕೇವಲ 14ರ ಪ್ರಾಯದಲಿ ಲೈಂಗಿಕಾನುಭವ ಜಾಗೃತಗೊಳಿಸಿದರು.

ಎರಡು ಸಾವು : ನಾಲ್ವತ್ತು ಹನಿ ರಕ್ತದ ವಿರ್ಯಾಣು ಕತೆಯ ಆತಂಕದೊಂದಿಗೆ ಮುಷ್ಟಿ ಮೈಥುನಕೆ ಬಲಿ ಆದದ್ದು ಸಣ್ಣ ಸಂಗತಿ ಅನಿಸಿತು. ಕುಟುಂಬ ವ್ಯವಸ್ಥೆ, ವೈಯಕ್ತಿಕ ಸಾಹಿತ್ಯಾಸಕ್ತಿ, ಪಾಪ ಪುಣ್ಯಗಳ ಭಾವನೆಗಳು ತೀವ್ರವಾಗಿ ಜಾಗೃತಕೊಂಡಿದ್ದರಿಂದ ವೇಶ್ಯೆಯರ ಸುಖಕ್ಕೆ ನಾವು ಹತ್ತಾರು ಗೆಳೆಯರು ತಲೆ ಹಾಕಲಿಲ್ಲ ಎಂಬುದೇ ಮಹಾನ್ ಸಾಧನೆ ಎನಿಸಿದೆ. ಅಂದ ಹಾಗೆ ಆ ಪಾರ್ಟಿಯಲಿ ಪಾಲ್ಗೊಂಡು ಇಬ್ಬರು ಗೆಳೆಯರು ಇತ್ತೀಚಿಗೆ ಏಡ್ಸ್ ಕಾಯಿಲೆಯಿಂದ ಸತ್ತಿದ್ದಾರೆಂದು ತಿಳಿದು ವಿಷಾದವೆನಿಸಿತು. (ಸಿದ್ದು ಕಾಲ)

English summary
Sex life accounts from my teens. Siddu Yapalaravi in Gadag lists the myths, fantacies and disillutionments he came across during his school days.
Story first published: Friday, December 17, 2010, 15:27 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more