ಮಿಲನ ಮಹೋತ್ಸವದ ಗಳಿಗೆ ಗಂಡು ಹೆಣ್ಣು ಒಬ್ಬರನ್ನೊಬ್ಬರನ್ನು ದೈಹಿಕವಾಗಿ ಹತ್ತಿರ ತರುವ ಕ್ರಿಯೆ ಮಾತ್ರವಲ್ಲ ಮಾನಸಿಕವಾಗಿ ಕೂಡ ಬೆಸೆಯುವ ಅಮೃತಗಳಿಗೆ. ಕೆಲ ಬಾರಿ ಏನಾಗುತ್ತದೆಂದರೆ, ನಾವೇ ಬೆಳೆಸಿಕೊಂಡಿರುವ ಕೆಲ ಅಭ್ಯಾಸಗಳು ನಮಗೇ ಅರಿವಿಲ್ಲದಂತೆ ರಸಾಭಾಸವನ್ನುಂಟು ಮಾಡಿ ಮನಸ್ಸನ್ನು ಆ ಕ್ಷಣದ ಮಟ್ಟಿಗೆ ಒಡೆದುಹಾಕಿಬಿಡುತ್ತವೆ. ಗಂಡು ಹೆಣ್ಣು ಕೂಡುವ ಸಮಯದಲ್ಲಿ ಇವೇ ಅಭ್ಯಾಸಗಳು ಕೀಳರಿಮೆಯನ್ನೂ ಹುಟ್ಟುಹಾಕುತ್ತವೆ. ಇಂಥವುಗಳ ಬಗ್ಗೆ ಎಚ್ಚರವಹಿಸಿ, ಕೆಲ ಅಡೆತಡೆಗಳನ್ನು ನಿವಾರಿಸಿಕೊಂಡರೆ ದೇಹಗಳು ಅನುರಾಗಕ್ಕೆ ತಾವಾಗಿಯೇ ಹಂಬಲಿಸಲು ಪ್ರಾರಂಭಿಸುತ್ತವೆ.
ಕೆಲ ದುರಭ್ಯಾಸಗಳನ್ನು ಇಲ್ಲಿ ನೀಡಲಾಗಿದೆ.
1) ನಿಮ್ಮ ದೇಹ : ಅನೇಕ ಬಾರಿ ನಮ್ಮ ದೇಹವೇ ನಮಗೆ ಶತ್ರುವಾಗಿ ಪರಿಣಮಿಸಿಬಿಡುತ್ತದೆ. ಸೋ, ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮಲ್ಲಿ ಏನೇ ಕೊರತೆಗಳಿದ್ದರೂ ಸಂಗಾತಿಯ ದೇಹವನ್ನು ಅಪೇಕ್ಷಿಸುವ ಮುನ್ನ ನಮ್ಮ ದೇಹವನ್ನು ನಾವು ಪ್ರೀತಿಸಬೇಕು. ಕತ್ತಲಾವರಿಸಿ ಶಯನಗೃಹದ ಬಾಗಿಲು ಮುಚ್ಚಿ ದೇಹಗಳು ಬೆಸೆಯಲು ಅಣಿಯಾದ ಕೂಡಲೆ ಮನಸುಗಳ ಕದ ತೆರೆದುಕೊಳ್ಳಬೇಕು. ನಾಚಿಕೆ ಎಂಬುದನ್ನು ಮರೆಮಾಚಬೇಕು. ದೈಹಿಕ ಕೊರತೆಯನ್ನು ಮರೆತು ಪ್ರೀತಿಯ ಒರತೆಯನ್ನು ಸಂಗಾತಿಯ ಮೇಲೆ ಸುರಿಯಬೇಕು. ದೇಹವನ್ನು ಬಟ್ಟೆಯಿಂದ ಮುಚ್ಚಿದರೆ ಮೆಚ್ಚನಾ ಸಂಗಾತಿಯು.
2) ಸೈಲೆನ್ಸ್ : ಒಬ್ಬರು ಕಾಮೇಚ್ಛೆಯಿಂದ ಬಳಿ ಬಂದಾಗ ಯಾವುದೇ ಭಾವ ತೋರದೆ ಗುಮ್ಮನಗುಸಕನಂತೆ ಸುಮ್ಮನೆ ಇರುವುದು ಇನ್ನೊಬ್ಬರಿಗೆ ಅವಮಾನ ಮಾಡಿದಂತೆ. ಸತ್ತುಬಿದ್ದ ಬೊಡ್ಡೆಯ ಜೊತೆಗೆ ಕಾಮಕೇಳಿ ಆಡಲು ಸಾಧ್ಯವೆ? ಯೋಚಿಸಿ. ಮನಸುಗಳು ಪರಸ್ಪರ ಸ್ಪಂದಿಸಿದಾಗಲೇ ಪ್ರೇಮದ ಕಾರಂಜಿ ಉಕ್ಕಿ ಹರಿಯಲು ಸಾಧ್ಯ. ಬಟ್ಟೆ ಬಿಚ್ಚಿದಂತೆ ಮನಸನ್ನೂ ಬಿಚ್ಚಿಡಿ. ನಿಮಗನಿಸಿದ್ದನ್ನು ನಿವೇದಿಸಿಕೊಳ್ಳಿ. ಕೇಳಿ ಇಷ್ಟವಿಲ್ಲದಿದ್ದರೆ ಇಷ್ಟವಿಲ್ಲವೆಂದು ಬಾಯಿಬಿಟ್ಟು ಹೇಳಿ. ಕೆಲ ಭಂಗಿಗಳು, ಕೆಲ ಭಾಗಗಳಲ್ಲಿ ಮುಟ್ಟುವುದು, ತಡವುವುದು ಸಹ್ಯವಾಗದಿದ್ದರೆ ಅಸಹ್ಯಿಸದೆ ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ.
3) ಆನಂದ : ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಕೆಲವರು ತಮಗಾಗುತ್ತಿರುವ ಆನಂದವನ್ನು ಬಹಿರಂಗವಾಗಿ ಹಂಚಿಕೊಳ್ಳಲು ಏಕೋ ಬಿಗುಮಾನ ತೋರುತ್ತಾರೆ. ಇದು ಸರ್ವಥಾ ಸಲ್ಲ. ಸಂಗಾತಿಯ ಖುಷಿಯಾದರೆ ನಿಮಗೂ ಖುಷಿ ತಾನೆ? ಸಂತಸವನ್ನು ಹೊರಗೆಡಹಿದರೆ ಗಂಟು ಖರ್ಚಾಗುವಂತೆ ಗಂಭೀರವಾಗಿರುತ್ತಾರೆ. ಇದರಿಂದ ಸಂಗಾತಿಯ ಹುಮ್ಮಸ್ಸು ಅರ್ಧಕ್ಕರ್ಧ ಕುಸಿದುಹೋಗಿಬಿಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಆನಂದವನ್ನು ಮನಬಿಚ್ಚಿ ಹಂಚಿಕೊಳ್ಳಿ. ಸಂತೋಷವಾಗಿರಿ, ಪ್ರತಿಯೊಂದು ಕ್ರಿಯೆಯನ್ನೂ ಆನಂದಿಸಿ.
4) ಸ್ಖಲನ : ಸುಖಾಸುಮ್ಮನೆ ಸುಖಿಸುವ ನಾಟಕವಾಡುವುದನ್ನು ಬಿಟ್ಟುಬಿಡಿ. ಅದು ಸಂಗಾತಿಗೆ ಮಾತ್ರವಲ್ಲ ನಮಗೆ ನಾವೇ ಮಾಡಿಕೊಳ್ಳುವ ಮೋಸ. ಗಂಡನನ್ನು ಸಂತುಷ್ಟಗೊಳಿಸಲು ಹೆಂಡತಿ ಸುಖಿಸಿದಂತೆ ಆಡುವುದು, ಗಂಡನನ್ನು ತೃಪ್ತಿಪಡಿಸಲು ಹೆಂಡತಿ ಏನೇನೋ ಕಸರತ್ತುಗಳನ್ನು ಮಾಡುವುದು ಸುಮ್ನೆ ವೇಸ್ಟ್. ಅದರ ಬದಲು ಸಂಗಾತಿಗೆ ಯಾವ ರೀತಿ ಲೈಂಗಿಕ ತೃಪ್ತಿ ನೀಡಲು ಸಾಧ್ಯವೆಂದು ತಿಳಿದುಕೊಳ್ಳಿ. ಕೂಡಿಕೊಳ್ಳುವ ಮೊದಲು ನಡೆಸುವ ಚಟುವಟಿಕೆಗಳು ಲೈಂಗಿಕತೆಯ ಉತ್ತುಂಗಕ್ಕೇರಲು ಸಹಾಯ ಮಾಡುತ್ತವೆ.
5) ಪ್ರಣಯ ಭಂಗಿಗಳು : ಲೈಂಗಿಕ ಕ್ರೀಡೆಯಾಡುವಾಗಲೂ ವಿಭಿನ್ನತೆಯಿರಲಿ. ಒಂದೇ ಬಗೆಯ ಭಂಗಿಯಲ್ಲಿ ಮಿಲನ ಮಹೋತ್ಸವ ಆಚರಿಸಿಕೊಳ್ಳುವುದು ಮಹಾ ಬೋರೋ ಬೋರು. ನಿಮಗಿಷ್ಟವಾದ, ಸಾಂಗಾತಿಗಿಷ್ಟವಾದ ಪ್ರಣಯ ಭಂಗಿಗಳಲ್ಲಿ ಸುಖಿಸುವುದನ್ನು ರೂಢಿಸಿಕೊಳ್ಳಿ. ಇದರ ಬಗ್ಗೆ ಹೆಚ್ಚಿನ ತಿಳಿವಳಿಕೆ ಬೇಕಿದ್ದರೆ ಪುಸ್ತಕಗಳನ್ನು ಕೊಂಡು ಓದಲು ಹಿಂಜರಿಯಬೇಡಿ. ಅಗತ್ಯ ಬಿದ್ದರೆ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಸಂದೇಹಗಳನ್ನು ನಿವಾರಿಸಿಕೊಳ್ಳಿ. [ಮಿಲನ ಮಹೋತ್ಸವ]