"ನನ್ನ ಹುಡುಗಿ ತೊಟ್ಟ ಕೆಂಬಣ್ಣದ ಸೆಲ್ವಾರ್ ಕಮೀಜಿನ ಆಕರ್ಷಣೆಗೆ ಒಳಗಾಗಿಯೇ ಆಕೆಯನ್ನು ಪ್ರೀತಿಸಲು ಪ್ರಾರಂಭಿಸಿದೆ. ಎಷ್ಟು ಚೆನ್ನಾಗಿ ಕಾಣ್ತಾಳೆ ಗೊತ್ತಾ ಆ ಬಣ್ಣದ ಉಡುಪು ತೊಟ್ಟಾಗ" ಅಂತ ಹುಡುಗ ತನ್ನ ಪ್ರೀತಿಯ ಬಗ್ಗೆ ಕೊಚ್ಚಿಕೊಂಡಾಗ ಪಕ್ಕದಲ್ಲಿದ್ದವರಿಗೆ ಅಸೂಯೆಯಾಗದೆ ಇರದು. ಇತರ ಕಣ್ಣುಗಳೂ ಅಂತಹ ಬಣ್ಣದ ಹುಡುಕಾಟದಲ್ಲಿ ತೊಡಗಲು ಪ್ರಾರಂಭಿಸಿರುತ್ತವೆ.
ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ... ಹಾಡು ಬಣ್ಣದ ವರ್ಣನೆಯಿಂದಲೇ ಅನೇಕ ಪ್ರೇಮಿಗಳಲ್ಲಿ ಪ್ರೀತಿಯ ಬಣ್ಣ ಹಚ್ಚಿದ್ದು ಸುಳ್ಳಲ್ಲ. ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು ಎಂದು ಪ್ರಿಯತಮೆಯ ಮುಂದು ಉಲಿದು ನೋಡಿ, ಆಕೆ ಪ್ರೇಮದ ಬಲೆಗೆ ಬೀಳದಿದ್ದರೆ ಕೇಳಿ. ಪ್ರೇಮದ ಬಲೆಗೆ ಬಿದ್ದು, ಮದುವೆಯಾಗಿ, ಮಧುಚಂದ್ರ ಮುಗಿದು, ಪ್ರತಿಬಾರಿ ಶಯನಗೃಹಕ್ಕೆ ಕಾಲಿಟ್ಟಾಗ ಆಕರ್ಷಣೆಗೆ ಒಳಗಾಗುವುದು ಈ ಬಣ್ಣವೆ. ಗೋಡೆ ಬಣ್ಣ, ಕಿಟಕಿ ಸ್ಕ್ರೀನ್ ಬಣ್ಣ, ಹಾಸಿಗೆಯ ಹೊದಿಕೆಯ ಬಣ್ಣ... ಕೊನೆಗೆ ಮಲಗಲು ಸಜ್ಜಾಗಿ ನಿಂತ ಬಾಳ ಸಂಗಾತಿ ತೊಟ್ಟ ಉಡುಪಿನ ಬಣ್ಣ...
ಆ ಒಂದೊಂದು ಬಣ್ಣದಲ್ಲಿಯೂ ಒಂದೊಂದು ಬಗೆಯ ಆಕರ್ಷಣೆಯಿರುತ್ತದೆ, ವಿಭಿನ್ನ ಭಾವನೆಗಳನ್ನು ಕೆರಳಿಸುತ್ತವೆ, ಪ್ರೇಮದ ನರಳಾಟಕ್ಕೆ ಇಂಬು ನೀಡುತ್ತವೆ. ಮೊದಲನೆ ನೋಟಕೆ ನಿನ್ನ ಮೇಲೆ ನನಗೆ ಮನಸಾಯ್ತು, ಮನಸಾಗಿ ಲವ್ವಾಯ್ತು... ಅಂತ ಲಘುವಾಗಿ ಹಿನ್ನೆಲೆಯಲ್ಲಿ ಹಾಡು ಕೇಳಿಬರುತ್ತಿದ್ದರೆ ದೇಹ ತೂಗುಯ್ಯಾಲೆಯಂತಾಗಿರುತ್ತದೆ, ಮನವು ಕೆರಳಿರುತ್ತದೆ. ಯಾವ ಬಣ್ಣ ಎಂಥ ಭಾವನೆ ಕೆರಳುತ್ತದೆ ಎಂಬುದನ್ನು ನೋಡೋಣ, ಬನ್ನಿ.
1. ಕೆಂಪು : ಕೆಂಪು ಪ್ರೇಮದ ಸಂಕೇತ. ಪ್ರಥಮ ಆಕರ್ಷಣೆಯ ಬೀಜ ಬಿತ್ತುವುದೇ ಕೆಂಪು. ಗುಂಪು ಎಷ್ಟೇ ದಟ್ಟವಾಗಿದ್ದರೂ ಎದ್ದು ಕಾಣುವುದು ಕೆಂಬಣ್ಣವೆ. ಕೆಂಪು ವಿಶೇಷವಾದ ಭಾವನೆಯನ್ನು ಚಿಮ್ಮಿಸುತ್ತದೆ. ನೋಡಿದ ಕೂಡಲೇ ಮರುಳಾಗುವಂದೆ ಮಾಡುತ್ತದೆ. ಕೆಂಪು ನೈಟಿ, ಕೆಂಪು ಒಳ ಉಡುಪುಗಳು... ಇನಿಯನನ್ನು ಸನಿಹಕೆ ಸೆಳೆಯಲು ಇನ್ನೇನು ಬೇಕು?
2. ಗುಲಾಬಿ : ಈ ಬಣ್ಣ ಪ್ರೇಮೋನ್ಮಾದದ ಸಂಕೇತ. ಪ್ರೀತಿ ಪ್ರೇಮದ ವಿಷಯಕ್ಕೆ ಬಂದರೆ ಗುಲಾಬಿಗೆ ಗುಲಾಬಿಯೇ ಸಾಟಿ. ಪ್ರೇಮಿಗಳ ದಿನದಂದು ಗುಲಾಬಿ ಇಡೀ ಜಗತ್ತನ್ನೇ ಆವರಿಸಿಕೊಂಡಿರುತ್ತದೆ. ಕೆಂಪು ಹೆಚ್ಚು ಆಕರ್ಷಿಸಿದರೆ, ಗುಲಾಬಿ ಹಿತವಾಗಿ ನಶೆಯೇರಿಸಿ ಬಿಲ್ಲನ್ನು ಹದೆಯೇರಿಸಿ ಝೇಂಕಾರ ಮಾಡಿಬಿಡುತ್ತದೆ. ಗುಲಾಬಿ ಬಣ್ಣ ತೊಟ್ಟ ಪ್ರಿಯತಮೆಯ ಚೆಲುವು ಎಂದಿಗಿಂತಲೂ ಹೆಚ್ಚಾಗಿರುತ್ತದೆ.
3. ನೇರಳೆ : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ... ಈ ಬಣ್ಣವನ್ನು ಬಣ್ಣಿಸಲಿಕ್ಕಾಗಿಯೇ ಹುಟ್ಟಿದಂತಹ ಹಾಡಿರಬಹುದು. ಹೌದು, ನೇರಳೆ ಬಣ್ಣ ವಿಭಿನ್ನ ಭಾವನೆಗಳನ್ನು ಪುಟಿದೇಳಿಸುತ್ತದೆ, ವಿಚಿತ್ರ ಕಾಮನೆಗಳನ್ನು ಕೆರಳಿಸುತ್ತದೆ. ಹೇಳಲೂ ಆಗಲು, ತಾಳಲೂ ಆಗಲು ಅನ್ನುವಂತ ಮನಸ್ಥಿತಿ. ಈ ಬಣ್ಣದ ಉಡುಪು ತೊಟ್ಟಾಗ ತುಂಟತನ ತಾನೇ ತಾನಾಗಿರುತ್ತದೆ ಮತ್ತು ಅದ್ಭುತ ಪ್ರೇಮದಾಟಕ್ಕೆ ಮೂಡನ್ನು ತಾನಾಗಿಯೇ ಸೃಷ್ಟಿಸುತ್ತದೆ.
4. ಬೆಳ್ಳಿ : ಬೆಳ್ಳಿಯ ಹೊಳಪನ್ನು ಮೀರಿಸುವ ಇನ್ನೊಂದು ಬಣ್ಣವೇ ಇಲ್ಲ. ಚುಂಬಕದಂತೆ ಸೆಳೆಯುವ ಶಕ್ತಿ ಬೆಳ್ಳಿ ಬಣ್ಣದಲ್ಲಡಗಿದೆ. ಈ ಬಣ್ಣದ ಸೀರೆಯನ್ನೋ, ನೈಟಿಯನ್ನೋ ತೊಟ್ಟಾಗ ಗುಂಡು ತನಗೆ ಅರಿವಿಲ್ಲದಂತೆಯೇ ಸೆಳೆತಕ್ಕೆ ಒಳಗಾಗಿಬಿಡುತ್ತಾನೆ. ಕ್ಷಣಕಾಲ ತಾನೇನು ಮಾಡುತ್ತಿದ್ದೇನೆ ಎಂಬ ಅರಿವನ್ನೂ ಮರೆಸಿ ಮಂಚಕ್ಕೆ ಸೆಳೆಯುವ ಶಕ್ತಿ ಈ ಬಣ್ಣಕ್ಕಿದೆ.
5. ಕಪ್ಪು : ಪ್ರಿಯಕರನಲ್ಲಿ ಪ್ರೇಮದ ಹುಚ್ಚು ಉನ್ಮಾದ ಉಕ್ಕಿಸಬೇಕಿದ್ದರೆ ಕಪ್ಪು ಬಣ್ಣಕ್ಕಿಂತ ಇನ್ನೊಂದು ಬಣ್ಣವೇ ಇಲ್ಲ. ಹೊಂಬಣ್ಣದ ಮೈಸಿರಿಯಿರುವ ಮಹಿಳೆ ಆಕರ್ಷಕವಾಗಿ ಮೈಗೊಪ್ಪುವ ಕಪ್ಪು ಬಣ್ಣದ ಒಳಉಡುಪಾಗಲಿ, ಮೇಲುಡುಪಾಗಲಿ ತೊಟ್ಟರೆ ಅವರಿಲ್ಲಯೇ ಒಂದು ಬಗೆಯ ಪರಿಪೂರ್ಣತೆ ತಂದುಕೊಡುತ್ತದೆ. ಆಮೇಲೆ ಮುಂದಿನ ಕೆಲಸವೆಲ್ಲ ಸರಾಗ.