•  

ಸಖತ್ತು ಸ್ತನ ಹೊಂದಲು ಎರಡೇ ಎರಡು ಬಿಸ್ಕತ್ತು

Array
Breast enlargement biscuits invented
 
ಒಂದು ಅಧ್ಯಯನದ ಪ್ರಕಾರ ಮಹಿಳೆಯರನ್ನು ಸಂಧಿಸಿದಾಗ ಸೌಂದರ್ಯ ಪ್ರಜ್ಞೆ ಇರುವ ಯಾವುದೇ ಪುರುಷರ ದೃಷ್ಟಿ ಮೊದಲು ಹಾಯುವುದೇ ಅವರ ಸ್ತನಗಳತ್ತ. ಈ ಸಂಗತಿಯನ್ನು ಸಂಪ್ರದಾಯವಾದಿಗಳು ಬಹಿರಂಗವಾಗಿ ಅಲ್ಲಗಳೆದರೂ, ಆಂತರಿಕವಾಗಿ ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಮಹಿಳೆಯರ ಆ ಭಾಗದ ಆಕರ್ಷಣೆಯೇ ಅಂತಹುದು. ಪುರುಷರು ಅಷ್ಟೇ ಏಕೆ ಲಲನಾಮಣಿಗಳು ಕೂಡ ಇತರರ ಆ ಆಸ್ತಿಯತ್ತ ಒಂದು ಬಾರಿಯಾದರೂ ದೃಷ್ಟಿ ಹರಿಸಿಯೇ ಇರುತ್ತಾರೆ.

ಅತ್ಯಂತ ಆರೋಗ್ಯದಿಂದಿರುವ ಮತ್ತು ಆಕರ್ಷಕವಾಗಿರುವ ಕುಚಗಳನ್ನು ಹೊಂದುವುದು ಕೂಡ ಸೌಂದರ್ಯ ಪ್ರಜ್ಞೆ ಇರುವ ಯಾವುದೇ ಮಹಿಳೆಯ ಅಂತರಂಗದ ಆಸೆಯಾಗಿರುತ್ತದೆ. ಸ್ತನ ಆಕರ್ಷಕವಾಗಿಲ್ಲದಿದ್ದರೆ ಕೀಳರಿಮೆಗೆ ಜಾರುವ ಮಹಿಳೆಯರ ಕಥೆಗಳನ್ನೂ ನಾವು ಕೇಳಿರುತ್ತೇವೆ. ಸಣ್ಣ ಗಾತ್ರದ ಸ್ತನಗಳನ್ನು ದೊಡ್ಡದು ಹೇಗೆ ಮಾಡುವುದು ಎಂಬ ಕುರಿತು ಕಂಡಕಂಡ ಪುಸ್ತಕಗಳಲ್ಲಿನ ಸಾಹಿತ್ಯಗಳನ್ನು ಅತ್ಯಂತ ಗೌಪ್ಯವಾಗಿ ಓದುತ್ತಿರುತ್ತಾರೆ. ವಿಪರೀತ ದೊಡ್ಡದಾಗಿದ್ದರೆ ದೇಹದ ಗಾತ್ರಕ್ಕೆ ಒಪ್ಪುವಂತೆ ಹೇಗೆ ಸಣ್ಣದು ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ಚಿಂತಿಸುತ್ತಿರುತ್ತಾರೆ.

ಸಣ್ಣ ಗಾತ್ರದ ಮತ್ತು ಆಕರ್ಷಕವಲ್ಲದ ಸ್ತನಗಳನ್ನು ಹೊಂದಿರುವವರು ಇನ್ನು ಚಿಂತಿಸುವ ಅಗತ್ಯವೇ ಇಲ್ಲ. ಸ್ತನಗಾತ್ರ ದೊಡ್ಡದು ಮಾಡಿಕೊಳ್ಳಲು ದುಂದುವೆಚ್ಚ ಮಾಡಿ ಶಸ್ತ್ರಚಿಕಿತ್ಸೆಗೆ ಶರಣಾಗುವ ಅವಶ್ಯಕತೆಯೂ ಇಲ್ಲ. ದಿನಕ್ಕೆರಡು ಬಿಸ್ಕತ್ತುಗಳನ್ನು ತಿಂದರೂ ಸಾಕು. ಇವು ಅಂತಿಂಥ ಬಿಸ್ಕತ್ತುಗಳಲ್ಲ, ಮ್ಯಾಜಿಕಲ್ ಬಿಸ್ಕತ್ತುಗಳು. ಇಂಥ ವಿಶಿಷ್ಟ ಬಗೆಯ ಬಿಸ್ಕತ್ತುಗಳನ್ನು ಸುನಾಮಿಯಿಂದ ಜರ್ಜರಿತವಾಗಿರುವ ಜಪಾನ್ ದೇಶದ ಕಂಪನಿಯೊಂದು ಆವಿಷ್ಕರಿಸಿದೆ. ಇವಕ್ಕೆ ಎಫ್-ಕಪ್ ಬಿಸ್ಕತ್ತು ಎಂದು ನಾಮಕರಣ ಮಾಡಲಾಗಿದೆ.

ಪ್ಯುರಾರಿಯಾ ಮಿರಿಫಿಕಾ ಎಂಬ ಗಿಡಮೂಲಿಕೆಯನ್ನು 50 ಗ್ರಾಂನಷ್ಟು ಹೊಂದಿದ್ದು, ಇದು ಸ್ತನ ಟಿಶ್ಯೂ ವೃದ್ಧಿಯಾಗುವಂತೆ ಮಾಡುತ್ತದೆ. ಈ ವಿಶೇಷ ಬಿಸ್ಕತ್ತುಗಳು ಜಪಾನ್ ದೇಶದಲ್ಲಿ ಮಾತ್ರ ಲಭ್ಯವಿವೆ. ನಾಲ್ಕು ಬಿಸ್ಕತ್ತಿನ ಬೆಲೆ ಕೇವಲ 1.50 ಪೌಂಡ್ ಮಾತ್ರ. ಆದರೆ, ಇದನ್ನು ಕೇಳಿ ಆಕಾಶ ಭೂಮಿ ಒಂದಾಗುವಂತೆ ಜಿಗಿದಾಡಲು ಸಣ್ಣ ಸ್ತನ ಹೊಂದಿರುವ ಮಹಿಳೆಯರು ಇನ್ನೂ ಕಾಯಬೇಕು. ವೈದ್ಯಕೀಯವಾಗಿ ಈ ಬಿಸ್ಕತ್ತುಗಳು ಇನ್ನೂ ಹೆಚ್ಚಿನ ಪರೀಕ್ಷೆಗೊಳಗಾಗಬೇಕಾಗಿದ್ದು, ಪಾಸ್ ಆಗಿ ಬಂದ ಮೇಲೆಯೇ ದೊಡ್ಡ ಕುಚ ಆಕಾಂಕ್ಷಿಗಳು ಕೊಳ್ಳಬೇಕಾಗಿ ತಜ್ಞರು ಎಚ್ಚರಿಸಿದ್ದಾರೆ.

English summary
Japanees company has invented cookies which can enlarge the size of breasts. Just eating two biscuits a day can bring miraculous change in breast size, it is said. But the experts have warned against eating them till they are tested.
Story first published: Thursday, April 14, 2011, 18:51 [IST]

Get Notifications from Kannada Indiansutras