•  

ತೆರೆದಿದೆ ವೆಬ್ ಬಾಗಿಲು ಓ ಬಾ ಅತಿಥಿ

Array
Online Sex Trade
 
ಅಂತರ್ಜಾಲದಲ್ಲಿ ಸೆಕ್ಸ್ ವಹಿವಾಟು ಬಾಳೆಹಣ್ಣು ಸುಲಿದಂತೆ. ಯಾವುದೇ ತಂಟೆ ತಕರಾರು ಇರುವುದಿಲ್ಲ. ಪೊಲೀಸರ ಕಾಟವಂತೂ ಇಲ್ಲವೇ ಇಲ್ಲ. ಅಟ್ ಲೀಸ್ಟ್ ಹಾಗಂತ ಭಾವಿಸಿದ್ದಾರೆ ಮುಂಬೈನ ಅಂತರ್ಜಾಲಿ ಸೆಕ್ಸ್ ವ್ಯಾಪಾರಿಗಳು.

ಸುಶಿಕ್ಷಿತ ಯುವತಿಯರು ಇದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ತಮ್ಮದೇ ವೆಬ್ ಸೈಟ್ ಗಳನ್ನು ನಿರ್ಮಿಸಿಕೊಂಡು ಸೆಕ್ಸ್ ದಂಧೆ ನಡೆಸುವುದು ಇವರಿಗೆ ಸರಕ್ಷಿತ ತಾಣಗಳಾಗಿವೆ. ಅದರಲ್ಲೆ ಸರ್ವಸ್ವವನ್ನೂ ಒಂದೇ ನೋಟದಲ್ಲಿ ದಾಖಲಿಸಿಬಿಟ್ಟರಾಯಿತು. ಮುಖ್ಯವಾಗಿ ಭಾವಚಿತ್ರ, ವೀಡಿಯೊ ತುಣುಕು, 36C-24-36 9 ಚಹರೆ ವಿವರ, ವಯಸ್ಸು, ಮಾರುಕಟ್ಟೆ ದರ, ಸೇವಾ ವಿವರ ಇವಿಷ್ಟನ್ನೂ ನೀಡಿದರೆ ಮುಂದಿನದೆಲ್ಲ ಸಲೀಸು.

ಗಂಟೆ ಸೇವೆಗೆ 10,000 ರುಪಾಯಿಯಿಂದ ಹಿಡಿದು ಇಡೀ ದಿನದ ಸೇವೆಗೆ 4 ಲಕ್ಷ ರು.ವರೆಗೂ ಲಭ್ಯ. ನೆಟ್ ಸೆಕ್ಸ್ ವಹಿವಾಟು ವಾರ್ಷಿಕ ವಹಿವಾಟು ಅಂದಾಜು 1,000 ಕೋಟಿ ರು. ದಾಟಿದೆ. ವಿದ್ಯಾಧರಿಗಳೇ ಈ ದಂಧೆಗೆ ಇಳಿದಿದ್ದಾರೆ. ಅನೇಕರಿಗೆ ಇದು ಪಾರ್ಟ್ ಟೈಂ ಜಾಬ್. ಆದರೆ ಫುಲ್ ಕಮಾಯಿ. ದಲ್ಲಾಳಿ, ವಿಟಪುರುಷರ ಗೋಳು ಇಲ್ಲಿಲ್ಲ. ಅವರಿಗೆ ಕಮಿಷನ್ ಸುರಿಯುವ ಮಾತೇ ಇಲ್ಲ. ಎಲ್ಲ ನೇರ ನೇರ . ಖುಲ್ಲಂ ಖುಲ್ಲಾ.

'ನಾನು ಗಣ್ಯರಿಗಷ್ಟೇ ಸೀಮಿತ. ಗುಣಮಟ್ಟದ (!?) ವೈಯಕ್ತಿಕ ಸಾಂಗತ್ಯ ಬಯಸುವವರಿಗೆ ಹೇಳಿ ಮಾಡಿಸಿದಂತಿದೆ. ನನ್ನ ರಸಿಕ ಗ್ರಾಹಕರಿಗೆ ಅತ್ಯಂತ ಗುಪ್ತ, ವಿಶ್ವಸನೀಯ ಸೇವೆ ನೀಡುತ್ತೇನೆ. ನಾನು ಬಿಸಿರಕ್ತದವಳು. ಹಾಟ್ ಅಂಡ್ ಸ್ಪೈಸಿ. ಪ್ರವಾಸ ಸಾಂಗತ್ಯಕ್ಕೂ ನಾನು ಸಿದ್ಧ. ನಾನು ಪದವಿ ಶಿಕ್ಷಣವನ್ನೂ ಪಡೆದಿದ್ದೇನೆ. ಸೋ, ನಿಮ್ಮ ಬಿಸಿ ಬಿಸಿನೆಸ್ ಟ್ರಿಪ್ ಗೆ ನಾನು ಅತ್ಯುತ್ತಮ ಆಯ್ಕೆ' ಹೀಗೆ ಸಾಗುತ್ತದೆ ಒಂದು ವಿವರ. ಯಾವ ರಸಿಕ ಶಿಖಾಮಣಿ ಇದಕ್ಕೆ ಮರುಳಾಗುವುದಿಲ್ಲ ನೀವೇ ಹೇಳಿ?

'ನಾನು ವಿನೋದ ವಿಲಾಸಿ. ಮುಕ್ತ ಮನಸ್ಸಿನವಳು. ತಬ್ಬಿಕೊಳ್ಳುವುದು, ಅಪ್ಪಿಕೊಳ್ಳುವುದು, ಮುತ್ತುಗರೆಯುವುದು, ಪ್ರಚೋದನಕಾರಿ ಆಟಗಳು... ಹೀಗೆ ನೀವೇ ಏನೇ ಹೇಳಿ, ಏನೇ ಮಾಡಿ... ಎಲ್ಲವೂ ನಿಮ್ಮನ್ನು ಸಂತೋಷ ಪಡಿಸುವುದಕ್ಕಾಗಿಯೇ ಅಲ್ಲವೇ!? ಸೋ ತಡವೇಕೆ?' ಎಂದು ಉಲಿಯುತ್ತದೆ ಮತ್ತೊಂದು ವೆಬ್ ಸೈಟ್.

English summary
Facing the heat from cops, sex trade in Mubai has shifted its base to the internet. Educated girls from the city looking to make a quick buck through prostitution. The Internet-savvy women have now taken to setting up their own websites to solicit customers, complete with a marketing pitch, photographs, list of services offered and even a rate chart.
Story first published: Friday, April 15, 2011, 11:09 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more