ಮಾನಸಿಕ ಕಾರಣಕ್ಕೆ ಶಿಶ್ನ ನಿಮಿರದೆ ಇರುವುದು ಈಗಾಗಲೇ ತಿಳಿದಿರುವ ವಿಚಾರ. ಇದರ ಹೊರತಾಗಿ ರಕ್ತ ಸಂಚಾರ ಸಮಸ್ಯೆಯಿಂದಲೂ ಉದ್ರೇಕಗೊಳ್ಳದೆ ಇರುವುದು ಈಚಿನ ದಿನಗಳಲ್ಲಿ ಗೊತ್ತಾಗಿದೆ. ಶಿಶ್ನ ಉದ್ರೇಕಗೊಳ್ಳದೆ ಇರುವುದಕ್ಕೆ ರಕ್ತ ಸಂಚಾರ ಸಮಸ್ಯೆಯೇ ಕಾರಣ ಹೌದೇ ಎಂಬ ಪರೀಕ್ಷೆಯನ್ನು ಈ ಡಯಾಗ್ನಸ್ಟಿಕ್ ಕೇಂದ್ರದಲ್ಲಿ ಇದೀಗ ನಡೆಸಲಾಗುತ್ತಿದೆ. ಇದರಿಂದ ಸ್ಪಷ್ಟ ಫಲಿತಾಂಶವೂ ಸಿಗತೊಡಗಿದೆ.
ರಕ್ತ ಸಂಚಾರ ಪರೀಕ್ಷೆ ಎಂದಾಗ ಜನ ಭಯ ಬೀಳುತ್ತಾರೆ. ಈ ಪರೀಕ್ಷೆಗೆ ಇರುವ ಹಲವು ಕ್ರಮಗಳೂ ಇದಕ್ಕೆ ಕಾರಣ ಇರಬಹುದು. ಜನನೇಂದ್ರಿಯಕ್ಕೆ ಸಂಬಂಧಿಸಿದಂತೆ ಇಂತಹ ಪರೀಕ್ಷೆಗೆ ಒಳಪಡುವಾಗ ಇನ್ನಷ್ಟು ಮುಜುಗರ ಅನುಭವಿಸುವ ಸಾಧ್ಯತೆ ಇರುತ್ತದೆ. ಇದೆಲ್ಲದಕ್ಕೆ ಉತ್ತರ ಎಂಬಂತೆ ಇಶಾ ಡಯಾಗ್ನಸ್ಟಿಕ್ಸ್‌ನಲ್ಲಿ ಮ್ಯಾಗ್ನೆಟಿಕ್ ರಿಸೋನನ್ಸ್ ಇಮೇಜಿಂಗ್ (ಎಂಆರ್‌ಐ) ಸ್ಕ್ಯಾನ್ ಮೂಲಕ ಶಿಶ್ನಕ್ಕೆ ಬರುವ ರಕ್ತದ ಸಂಚಾರದ ಪರೀಕ್ಷೆ ನಡೆಯುತ್ತದೆ. ಇಂತಹ ಪರೀಕ್ಷೆ ನಡೆಯುತ್ತಿರುವುದು ವೈಜ್ಞಾನಿಕ ಯುಗದಲ್ಲಿ ಇದೇ ಪ್ರಥಮ ಎಂಬುದು ಈ ಕೇಂದ್ರದ ಹೆಗ್ಗಳಿಕೆ.
ವಿಧಾನ ಹೇಗೆ?
ಮೊದಲು ಸಹಜ ಸ್ಥಿತಿಯಲ್ಲಿ ಇರುವ ಶಿಶ್ನವನ್ನು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಲಾಗುತ್ತದೆ. ಬಳಿಕ ಕೃತಕವಾಗಿ ಉದ್ರೇಕ ತರಿಸುವ ಇಂಜೆಕ್ಷನ್ ನೀಡಿ ಎಂಆರ್‌ಐ ಸ್ಕ್ಯಾನ್ ಮಾಡಲಾಗುತ್ತದೆ. ಬಳಿಕ ಮತ್ತೊಮ್ಮೆ ಸಹಜ ಸ್ಥಿತಿಗೆ ಮರಳಿದ ಶಿಶ್ನದ ಪರೀಕ್ಷೆ ನಡೆಯುತ್ತದೆ. ಸುಮಾರು 40 ನಿಮಿಷಗಳಲ್ಲಿ ಈ ಎಲ್ಲ ಪ್ರಕ್ರಿಯೆ ಮುಗಿಯುತ್ತದೆ. ಈಶಾ ಡಯಾಗ್ನಸ್ಟಿಕ್ಸ್‌ನ ಮುಖ್ಯ ರೇಡಿಯಾಲಜಿಸ್ಟ್ ಡಾ. ಬಾಲಕೃಷ್ಣ ಶೆಟ್ಟಿ ಮತ್ತು ಆಂಡ್ರೋಲಾಜಿಸ್ಟ್ ಡಾ. ವಾಸನ್ ಅವರ ನೇತೃತ್ವದಲ್ಲಿ ಈ ಪರೀಕ್ಷೆಗಳು ಮತ್ತು ಪ್ರಯೋಗಗಳು ನಡೆಯುತ್ತಿವೆ. ಮುಂದೆ ಇಲ್ಲಿ ದೊರೆಯುವ ಸೂಕ್ತ ಚಿಕಿತ್ಸೆ, ಔಷಧ ಸೇವಿಸಿ ಸಮಸ್ಯೆ ಬಗೆಹರಿಸಬಹುದಾಗಿದೆ.
"ಯಾವುದೇ ಸಮಸ್ಯೆಗೆ ಮೊದಲು ನಿಖರ ಕಾರಣ ಗೊತ್ತಾಗಬೇಕು. ಆಗ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ. ಉದ್ರೇಕ ಸಮಸ್ಯೆಗೆ ಮಾನಸಿಕ ದುಗುಡದ ಹೊರತಾಗಿ ಇತರ ಕಾರಣಗಳು, ಅದರಲ್ಲೂ ಮುಖ್ಯವಾಗಿ ಶಿಶ್ನಕ್ಕೆ ರಕ್ತ ಸಂಚಾರ ತೊಂದರೆಯೂ ಕಾರಣ ಎಂದು ಗೊತ್ತಾಗಿರುವುದರಿಂದ, ವ್ಯಕ್ತಿಯಲ್ಲಿ ಈ ಲಕ್ಷಣ ಇದೆಯೇ ಎಂಬುದನ್ನು ನಾವಿಲ್ಲಿ ಎಂಆರ್‌ಐ ಸ್ಕ್ಯಾನ್ ಮೂಲಕ ತಿಳಿದುಕೊಳ್ಳುತ್ತೇವೆ. ಅದು ಹೌದು ಎಂಬ ಫಲಿತಾಂಶ ಸಿಕ್ಕಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ಸಾಧ್ಯವಾಗುತ್ತದೆ" ಎಂದು ಡಾ. ಬಾಲಕೃಷ್ಣ ಶೆಟ್ಟಿ ಹೇಳುತ್ತಾರೆ.
"ಈ ಪರೀಕ್ಷೆಯಿಂದ ಅಡ್ಡ ಪರಿಣಾಮ ಏನೂ ಇಲ್ಲ. ಹೃದಯದಂತಹ ದೇಹದ ಒಳ ಭಾಗದ ಅಂಗಕ್ಕೆ ರಕ್ತ ಸಂಚಾರದ ಸಮಸ್ಯೆ ಎದುರಾದಾಗ ಶಸ್ತ್ರಚಿಕತ್ಸೆಯಂತಹ ಕ್ರಮಗಳು ಅಗತ್ಯವಾಗುತ್ತದೆ. ಆದರೆ ದೇಹದ ಹೊರಭಾಗದಲ್ಲಿರುವ ಅಂಗಗಳಿಗೆ ಫಿಸಿಯೋಥೆರಪಿ, ಲೇಸರ್, ಅಲ್ಟ್ರಾಸೌಂಡ್‌ನಂತಹ ವಿಧಾನಗಳ ಮೂಲಕ ಸೂಕ್ತ ಮತ್ತು ಅಡ್ಡ ಪರಿಣಾಮ ಇಲ್ಲದ ಚಿಕಿತ್ಸೆ ನೀಡಿ ತೊಂದರೆ ಸರಿಪಡಿಸಬಹುದಾಗಿದೆ" ಎಂದು ಡಾ. ಶೆಟ್ಟಿ ವಿವರಿಸುತ್ತಾರೆ.
ಉದ್ರೇಕ ಸಮಸ್ಯೆಗೆ ಈಶಾ ಡಯಾಗ್ನಸ್ಟಿಕ್ಸ್ ಹೊಸ ಔಷಧ ಹುಡುಕುತ್ತಾ ಇಲ್ಲ. ಅದಕ್ಕೆ ನಿರ್ದಿಷ್ಟ ಕಾರಣ ಹುಡುಕುವ ಕೆಲಸವನ್ನಷ್ಟೇ ಇದು ಮಾಡುತ್ತದೆ. ಸ್ಪಷ್ಟ ಕಾರಣ ತಿಳಿದಾಗ ನಿರ್ದಿಷ್ಟವಾಗಿ ಅದೇ ಚಿಕಿತ್ಸೆ ನೀಡಿ ಸಮಸ್ಯೆ ಬಗೆಹರಿಸುವುದು ಸಾಧ್ಯವಾಗುತ್ತದೆ. ರಕ್ತದ ಸಂಚಾರದಲ್ಲಿನ ಸಮಸ್ಯೆಯಿಂದಲೇ ಉದ್ರೇಕ ಸಮಸ್ಯೆ ಎದುರಾಗಿದೆ ಎಂಬುದು ಖಚಿತವಾದರೆ ಅದನ್ನು ಪರಿಹರಿಸಿಕೊಳ್ಳಲು ಹಲವು ಔಷಧಗಳು ಮತ್ತು ಚಿಕಿತ್ಸೆಗಳು ಲಭ್ಯ ಇವೆ. ವಯಾಗ್ರದಂತಹ ತಾತ್ಕಾಲಿಕ ಪರಿಹಾರಗಳ ಬದಲಿಗೆ ದೀರ್ಘ ಕಾಲ ನೆರವಿಗೆ ಬರುವಂತಹ ಉದ್ರೇಕ ಉದ್ದೀಪನ ಚಕಿತ್ಸೆಗಳು ಮತ್ತು ಔಷಧಗಳು ಲಭ್ಯ ಇವೆ. ಈಶಾ ಡಯಾಗ್ನಸ್ಟಿಕ್ಸ್ ತನ್ನ ವಿಶಿಷ್ಟ ಪ್ರಯೋಗ ಮತ್ತು ಚಿಕಿತ್ಸೆಗಳ ಮೂಲಕ ಉದ್ರೇಕ ಸಮಸ್ಯೆ ಇರುವವರಿಗೆ ವರದಾನವಾಗಿ ಪರಿಣಮಿಸಿದೆ.
ವಿಳಾಸ
Dr Balakrishna shetty
ISHA Diagnostics AND RESEARCH PRIVATE LIMITED
#311, Sampige Road, Between 15th & 16th cross,
Malleshwaram, Bangalore - 560 003.
Phone : 080 - 3252 0000