•  

ಮಹಿಳೆಯರಿಗೆ ಸೆಕ್ಸ್ ಗಿಂತ ಕಂಪ್ಯೂಟರ್ ಗೇಮ್ಸ್ ಇಷ್ಟವಂತೆ!

Array
ಲಂಡನ್, ಜುಲೈ 16: ಹಾಯ್ ಹುಡುಗರೇ, ನೀವು ಆಕೆಗೆ ಅತ್ಯುತ್ತಮ ಬಾಯ್ ಫ್ರೆಂಡ್ ಆಗಲು ಇಚ್ಚಿಸುವಿರಾ? ಹಾಗಾದರೆ ಆಕೆಗೆ ಸ್ವಲ್ಪ ಕಂಪ್ಯೂಟರ್ ಗೇಮ್ ಗಳನ್ನು ಉಡುಗೊರೆಯಾಗಿ ನೀಡಿ. ಅರೇ ಕನ್ ಫ್ಯೂಸ್ ಆಗಿದ್ದೀರಾ? ವಿಷ್ಯ ಏನಪ್ಪ ಅಂದ್ರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಮಹಿಳೆಗೆ ಸೆಕ್ಸಿಗಿಂತ ಗೇಮ್ಸ್ ಅಂದ್ರೆ ಇಷ್ಟವೆಂದು ತಿಳಿದುಬಂದಿದೆ!ಡೊರಿಟೊಸ್ ನಡೆಸಿದ ನೂತನ ಸಮೀಕ್ಷೆಯಲ್ಲಿ ಭಾಗವಹಿಸಿದ ಹೆಚ್ಚಿನ ಮಹಿಳೆಯರು ಸೆಕ್ಸಿಗಿಂತ ಆಟವಾಡುವುದು ಇಷ್ಟವೆಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 49ರಷ್ಟು ಮಹಿಳೆಯರು ಇಂಟರ್ ನೆಟ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದಾರೆಂಬ ಆಘಾತಕಾರಿ ವಿಷ್ಯವೂ ಬೆಳಕಿಗೆ ಬಂದಿದೆ. ಆಸಕ್ತಿದಾಯಕ ವಿಷಯವೆಂದರೆ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 50ರಷ್ಟು ಪುರುಷರು ಕೂಡ ಆನ್ ಲೈನ್ ಗೇಮ್ಸ್ ಅಡಿಕ್ಟ್ ಆಗಿದ್ದಾರೆ. ಇವರು ತಮ್ಮ ಶೇಕಡಾ 22.3ರಷ್ಟು ಸಮಯವನ್ನು ಆನ್ ಲೈನ್ ಗೇಮ್ಸ್ ಗಾಗಿ ಮೀಸಲಿಡುತ್ತಿದ್ದರಂತೆ. ಆದರೆ ಮಹಿಳೆಯರು ದಿನದ ಶೇ 23.2ರಷ್ಟು ಸಮಯವನ್ನು ಆನ್ ಲೈನ್ ಗೇಮ್ಸ್ ಗಾಗಿ ಮೀಸಲಿಡುತ್ತಾರಂತೆ!ಹೆಚ್ಚಿನ ಮಹಿಳೆಯರು ತಮ್ಮಲ್ಲಿರುವ ಗ್ಯಾಜೆಟ್ ಗಳಲ್ಲಿ ಆಟವಾಡುತ್ತ ಸಮಯ ಕಳೆಯುತ್ತಾರೆ. ಉಳಿದಂತೆ ಐದು ಜನರಲ್ಲಿ ಒಬ್ಬಾಕೆ ಬೆಡ್ ರೂಂ ಆಟದಲ್ಲೂ ಹೆಚ್ಚು ಕಳೆಯುತ್ತಾಳೆ ಎಂದು ಡೈಲಿ ಮೈಲ್ ವರದಿ ಮಾಡಿದೆ. "ಈಗ ಜನರು ಮೊಬೈಲ್ ಒತ್ತುತ್ತ ಊಟ ಮಾಡುತ್ತಾರೆ. ಕಂಪ್ಯೂಟರ್ ಅಥವಾ ಟೆಲಿವಿಷನ್ ನೋಡುತ್ತ ಹೆಚ್ಚಿನ ಸಮಯ ಕಳೆಯುತ್ತಾರೆ. ತಮ್ಮ ಫೇಸ್ ಬುಕ್, ಆರ್ಕುಟ್, ಟ್ವಿಟ್ಟರ್ ಸ್ನೇಹಿತರೊಂದಿಗೆ ಹೆಚ್ಚು ಕನೆಕ್ಟ್ ಆಗಿರಲು ಬಯಸುತ್ತಾರೆ. ಮತ್ತೆ ಸಮಯ ಉಳಿದರೆ, ಮನಸ್ಸು ಬಂದರೆ ಮಾತ್ರ ಸೆಕ್ಸ್ ನಲ್ಲಿ ತೊಡಗುತ್ತಾರೆ" ಎಂದು ರಿಲೆಷನ್ ಷಿಪ್ ಥೆರಪಿಸ್ಟ್ ರೊಗ್ಲಾಸ್ ವೆಯಿಸ್ ಅಭಿಪ್ರಾಯಪಡುತ್ತಾರೆ.
English summary
Guys, if you want to be a 'good' boyfriend, just give some computer games as gifts to your girlfriend! Confused? A new study revealed that women prefer games over sex!

Get Notifications from Kannada Indiansutras