•  

ಸಿಂಹಿಣಿಯ ಬೆನ್ನಲ್ಲಿದೆ ಸುಖದ ಕೆರಳಿಕೆ ನರಳಿಕೆ

Array
Sensual spots in Leo women
 
ಸಿಂಹ ರಾಶಿಯ ಹೆಂಡತಿಯನ್ನು ಪ್ರೇಮದಾಟವಾಡಲು ಪಳಗಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಯಾಕೆಂದರೆ, ಸಿಂಹ ರಾಶಿ ಮಹಿಳೆ ಸ್ವಭಾವತಃ ಅಂತಃಕರಣಿ. ಗಂಡನ ಅಣತಿಯಂತೆ, ಬೇಕುಬೇಡಗಳನ್ನು ಅನುಸರಿಸಿಕೊಂಡ ಹೋಗುವ ಬಂಗಾರದಂಥ ಹೆಂಗಸು. ಆದರೆ, ಕೆರಳಿದರೆ ಅಷ್ಟೆ!

ಅಂಥ ಗೃಹಿಣಿಯ ಭಾವನಾತ್ಮಕ ತುಮುಲಗಳನ್ನು ಅರ್ಥೈಸಿಕೊಳ್ಳುವುದು, ಮಾನಸಿಕ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸುವುದು ಕೂಡ ಗಂಡನ ಕರ್ತವ್ಯ. ಇನ್ನೊಂದು ವಿಷಯವೆಂದರೆ ಸಿಂಹಿಣಿ ಮಹತ್ವಾಕಾಂಕ್ಷಿಯಾದರೂ ಅಲ್ಪತೃಪ್ತೆ. ಸುಖ ಇನ್ನಷ್ಟು ಬೇಕು ಮತ್ತಷ್ಟು ಬೇಕು ಎಂದು ಹಪಹಪಿಸದ ಸ್ವಭಾವದವಳು. ಆಕೆ ಕೆರಳದಂತೆ ನೋಡಿಕೊಂಡರಾಯಿತು ಅಷ್ಟೆ.

ಸಿಂಹ ರಾಶಿಯ ಹೆಂಡತಿಯನ್ನು ಲೈಂಗಿಕವಾಗಿ ಉತ್ತೇಜಿಸಬೇಕಿದ್ದರೆ ಅದರ ಮೂಲ ಬೆನ್ನಲ್ಲಿದೆ ಎಂಬುದನ್ನು ಮೊದಲು ತಿಳಿಯಿರಿ. ಇಡೀ ದಿನ ದುಡಿದ ಬೆನ್ನಿಗೆ ಕೊಂಚ ಸಾಂತ್ವನವೂ ಬೇಕಿರುತ್ತದೆ. ಆದ್ದರಿಂದ ಸಿಂಹಿಣಿಯನ್ನು ಮರುಳು ಮಾಡಲು ಬೆತ್ತಲೆ ಬೆನ್ನಹುರಿಗುಂಟ ಬೆರಳಾಡಿಸಿ ಸಾಕು, ಸುಖದ ಕೆರಳಿಕೆ, ನರಳಿಕೆ, ಪುಳಕಗಳು ಆರಂಭವಾಗಿಬಿಡುತ್ತದೆ.

ಬೆನ್ನಿನ ಮೇಲತುದಿಯಿಂದ ಮುತ್ತಿಡುತ್ತ ಪೃಷ್ಠದವರೆಗೆ ಚುಂಬಿಸುವುದು ಆಕೆಗೆ ತುಂಬಾ ಇಷ್ಟ. ನಂತರ ಪೃಷ್ಠದ ಭಾಗದಿಂದ ನಯವಾಗಿ ಬೆನ್ನಮೇಲಿನವರೆಗೆ ಒತ್ತುವುದು ಸುಖದ ಸುಪ್ಪತ್ತಿಗೆ ಹಾಸಿಬಿಡುತ್ತದೆ. ಇನ್ನು ಒಟ್ಟೊಟ್ಟಿಗೆ ಸ್ನಾನ ಮಾಡುವಾಗ ಬೆನ್ನು ಉಜ್ಜಿದರಂತೂ ಮುಗಿದೇ ಹೋಯಿತು, ಮುಂದಿನ ಕೆಲಸ ಸಲೀಸಾಗಿಬಿಡುತ್ತದೆ.

English summary
To ensure that you and your partner have a very good and fulfilling lovemaking session, recognize the sensual spots in your woman, so that she is very excited. A Leo woman's erogenous spot is the back. Just running your fingers along her spine and kissing all the way down to her buttocks, will excite her too much.
Story first published: Friday, September 9, 2011, 11:46 [IST]

Get Notifications from Kannada Indiansutras