ಅಸುರಕ್ಷಿತ ಸೆಕ್ಸ್ ಅನುಭವಿಸುವುದರಲ್ಲಿ ಭಾರತೀಯರೇ ಎಲ್ಲರಿಗಿಂತ ಮುಂದಿದ್ದಾರೆ ಎಂದು ಅಂತಾರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ. ಕಳೆದ ಏಪ್ರಿಲ್ ಮೇ ತಿಂಗಳಿನಲ್ಲಿ ಎನ್ ಜಿಒವೊಂದ ನಡೆಸಲಾದ ಸಮೀಕ್ಷೆಯಲ್ಲಿ ಈ ವಿಷಯ ಹೊರ ಬಿದ್ದಿದೆ.
ಭಾರತದ ಶೇ.72 ರಷ್ಟು ಯುವ ಜನಾಂಗ ಅಸುರಕ್ಷಿತ ಲೈಂಗಿಕತೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಮಾತ್ರ ಆನಂದ ಹೊಂದಲು ಸಾಧ್ಯ. ಕಾಂಡೋಮ್ ಬಳಕೆಯಿಂದ ಸುರಕ್ಷೆ ಸಿಕ್ಕರೂ ಮಜಾ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಶೇ. 40 ರಷ್ಟು ಮಂದಿ ಹೇಳಿಕೆ ಪ್ರಕಾರ, ಅವಶ್ಯಕತೆ ಬಿದ್ದಾಗ ಗರ್ಭ ನಿರೋಧಕ ವಿಧಾನ ಅನುಸರಿಸಲು ಸಾಧ್ಯವಾಗುತ್ತಿಲ್ಲ. ಅಗತ್ಯ ಮಾತ್ರೆಗಳು ಸಿಗುತ್ತಿಲ್ಲವಂತೆ.
ಬೇಡದ ಗರ್ಭಧಾರಣೆ ಸಮಸ್ಯೆ ಎದುರಿಸಿರುವುದನ್ನು ಶೇ.36 ರಷ್ಟು ಮಂದಿ ಒಪ್ಪಿಕೊಂಡಿದ್ದಾರೆ. ಸುರಕ್ಷಿತ ಲೈಂಗಿಕತೆ ವಿಧಾನ ಅನುಸರಿಸದೆ ತಪ್ಪು ಮಾಡಿದ ಪಾಪಪ್ರಜ್ಞೆ ಇಂಥವರಲ್ಲಿ ಕಾಡುತ್ತಿದೆ.
ಈ ಸಮೀಕ್ಷೆಯ ಒಟ್ಟಾರೆ ಅಭಿಪ್ರಾಯದಂತೆ ಜನರಿಗೆ ಲೈಂಗಿಕತೆ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಅಸುರಕ್ಷಿತ ಲೈಂಗಿಕತೆಯ ದುಷ್ಪರಿಣಾಮಗಳ ಬಗ್ಗೆ ಹಲವರಿಗೆ ತಿಳಿದೇ ಇಲ್ಲ. ಹಿರಿಯರಾಗಲಿ, ಶಿಕ್ಷಣ ಸಂಸ್ಥೆಗಳಲ್ಲಿ ಆಗಲಿ ಯುವ ಜನಾಂಗಕ್ಕೆ ಸೆಕ್ಸ್ ಬಗ್ಗೆ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಬೇಡದ ಗರ್ಭ ಹೊತ್ತುಕೊಳ್ಳುವುದು, ಗುಪ್ತರೋಗಕ್ಕೆ ಈಡಾಗುವುದು ಮುಂತಾದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಿದೆ. ಭಾರತದಲ್ಲಿ ಸೆಕ್ಸ್ ಶಿಕ್ಷಣ ಕಡ್ಡಾಯಗೊಳಿಸದಿದ್ದರೆ ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.