•  

ಕಿಸ್ ಹೊಡೆಯುವುದು ಹೇಗೆ? ತಗೊಳ್ಳಿ ಟಿಪ್ಸ್ !

Array
Kissing tips
 
ಹೌದು ಕಿಸ್ಸಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಆದರೆ, ಕಿಸ್ ಹೊಡೆಯುವುದು ಹೇಗೆ? ತಗೊಳ್ಳಿ ಟಿಪ್ಸ್. ಬೇರೆ ಬೇರೆ ಕಿಸ್ಸಿಂಗ್ ವಿಧಾನಕ್ಕೆ ಬೇರೆ ಬೇರೆ ವಿಧಾನ ಅನುಸರಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಮುಂದುವರೆಸಿ...

* ಫ್ರೆಂಚ್ ಕಿಸ್: ಆಡು ಭಾಷೆಯಲ್ಲಿ ಸ್ಮೂಚ್ ಎಂದೇ ವರ್ಲ್ಡ್ ಫೇಮಸ್. ಬಹು ಜನಪ್ರಿಯ ಕಿಸ್ಸಿಂಗ್ ವಿಧಾನ ಕೂಡಾ ಇದಾಗಿದೆ. ಸ್ಮೂಚ್ ಹೊಡೆಯೋಕೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಜೇನು ತುಂಬಿದ ಕೆಳತುಟಿ ಹಾಗೂ ಮೇಲ್ತುಟಿಯನ್ನು ಒಮ್ಮೆಗೆ ಹೀರಿದರೆ ಸಾಕು. ಅವಳ ತುಟಿಗಳೆರಡು ಪೂರ್ಣವಾಗಿ ನಿಮ್ಮ ತುಟಿಯ ಹಿಡಿತಕ್ಕೆ ಬಂದರೆ ಅಲ್ಲಿಗೆ ಕಿಸ್ ನ ಮತ್ತೇರಿದೆ ಎಂದರ್ಥ.

* ಇಂಡಿಯನ್ ಕಿಸ್: ಇದು ಯಾವ ರೀತಿ ಕಿಸ್ ಸ್ಟೈಲ್ ಎಂದು ಯೋಚಿಸಬೇಡಿ. ಹಳೆ ಬಾಲಿವುಡ್ ಸಿನಿಮಾಗಳನ್ನು ನೋಡಿದರೆ ಸಾಕು ಈ ವಿಧಾನ ತಕ್ಷಣಕ್ಕೆ ತಿಳಿದು ಬಿಡುತ್ತದೆ. ಹೀರೋ ಹೀರೋಯಿನ್ ಬೆಳ್ಳಿ ಪರದೆಗೆ ಹಿಂಮುಖವಾಗಿ ನಿಂತು ಕಿಸ್ ಮಾಡಲು ಶುರು ಮಾಡುತ್ತಾರೆ. ಹೀರೋ ಎಡಗಡೆಯಿಂದ ಬಲಗಡೆ ಮತ್ತೆ ಬಲಗಡೆಯಿಂದ ಎಡಗಡೆಗೆ ವಾಲುತ್ತಾ ಹೀರೋಯಿನ್ ತುಟಿಯ ಜೇನು ಸವಿಯುತ್ತಿರುತ್ತಾನೆ. ಈ ವಿಧಾನ ತುಂಬಾ ಪ್ರಚೋದನಕಾರಿ ಹಾಗೂ ದೀರ್ಘಕಾಲದ್ದಾಗಿರುತ್ತದೆ.

* ಅಮೆರಿಕನ್ ಕಿಸ್ : ಫ್ರೆಂಚ್ ಕಿಸ್ ಮಾದರಿಯಲ್ಲೇ ಜನಪ್ರಿಯವಾಗಿರುವ ಈ ವಿಧಾನದಲ್ಲಿ ನಾಲಗೆಗೆ ಹೆಚ್ಚು ಕೆಲಸವಿಲ್ಲ. ತುಟಿಗೆ ತುಟಿ ಹಚ್ಚಿದರೂ ಗಾಢತೆ ಇರುವುದಿಲ್ಲ. ರೋಮಾನ್ಸ್ ಗೆ ಮುನ್ನುಡಿಯಂತೆ ಅಧರಕ್ಕೆ ಅಧರ ಸೇರಿಸಿ ಕಣ್ಮುಚ್ಚಿಕೊಳ್ಳುವುದು ಈ ಸ್ಟೈಲ್ ನ ವಿಶೇಷ. ಫ್ರೆಂಚ್ ಕಿಸ್ ನಂತೆ ದೀರ್ಘ ಕಾಲಕ್ಕೆ ಸರಿ ಹೊಂದದ ಈ ಕಿಸ್, ಚುಟುಕಾಗಿ ಮುಗಿಸಿಬಿಡಬಹುದಾದ ಸಿಂಪಕ್ ಕಿಸ್.

* ಚೈನೀಸ್ ಕಿಸ್: ಬೆಡ್ ರೂಮ್ ಗೆ ಮಾತ್ರ ಸೀಮಿತವಾಗಿದ್ದ ಪ್ರಾಚೀನ ಚೀನಾ ಕಿಸ್ಸಿಂಗ್ ಪದ್ದತಿ ಈಗ ಸಾರ್ವಜನಿಕವಾಗಿದೆ. ಅಮೆರಿಕನ್ ಕಿಸ್ ಗಿಂತೂ ಶಾರ್ಟ್ ಅಂಡ್ ಸ್ವೀಟ್ ಆಗಿ ಚೈನೀಸ್ ಕಿಸ್ ಮುಗಿಸಬಹುದು. ತುಟಿಗೆ ತುಟಿ ಹಚ್ಚುವುದನ್ನು ಚೀನಿಯರು ಅಷ್ಟು ಇಷ್ಟ ಪಡುವುದಿಲ್ಲ. ಸೋ., ಚೀನಿ ಬೆಡಗಿಯನ್ನು ಚುಂಬಿಸುವ ಮೊದಲು ಯೋಚಿಸಿ. ಗಲ್ಲಕ್ಕೆ, ಕೆನ್ನೆಗೆ ಮತ್ತೊಂದು ಎಂದು ಚೀನಿ ಹುಡುಗಿ ಜೊತೆ ಹಾಡಿ ನಲಿಯ ಬಹುದು ಅಷ್ಟೇ.

ಕಿಸ್ ಹೊಡೆಯೋದು ಹೇಳಿಕೊಟ್ಟು ಕಲಿಯುವ ವಿದ್ಯೆ ಅಲ್ಲ ಎಂಬುದು ನಮ್ಮ ಚುಂಬನಾಚಾರ್ಯ, ಮುತ್ತು ಮಿನಿಸ್ಟರ್ ರೊಬ್ಬರ ಅನುಭವಾಮೃತ. ಆನ್ ಲೈನ್ ನಲ್ಲಿ ಸರ್ಚ್ ಮಾಡಿ ಕಿಸ್ಸಿಂಗ್ ವಿಡಿಯೋ ನೋಡಿ ತಿಳಿಯಬಹುದಾದರೂ ಕಿಸ್ ಮಾಡುವುದು ಒತ್ತಡ ನಿವಾರಣೆ, ಮುಂದಿನ ಸುಖಭೋಗದ ನಾಂದಿಗೆ ಎಂಬ ಅರಿವು ಇದ್ದರೆ ಸಾಕು.

ಬಲವಂತವಾಗಿ ತುಟಿ ಕಚ್ಚಿದರೋ ಜೋಕೆ. ಮತ್ತೊಮ್ಮೆ ತುಟಿಗೆ ತುಟಿ ಸೇರಿಸಲು ಹೋದರೆ ಆಕೆ ಈರುಳ್ಳಿ ಕಚ್ಚಿ ನಿಮ್ಮನ್ನು ದೂರ ಓಡಿಸಬಲ್ಲಳು.

English summary
Art Of Kissing : Take a look to know how to kiss with these kissing tips and enjoy your first lip lock with partner. Kissing has a lot to do in building a connection between the boy and girl. When a couple kiss, it resolves all the lack of communication between them. Women of today would want a partner who is a great kisser so guys need to learn how to kiss.
Story first published: Friday, November 25, 2011, 13:58 [IST]

Get Notifications from Kannada Indiansutras