ಹೆಂಗಳೆಯರನ್ನು ಕೆರಳಿಸುವುದು'ಒನ್ ಸಿಂಪಲ್ ಕಿಸ್' ಎನ್ನುವುದನ್ನು ಮಾತ್ರ ಮರೆಯಬೇಡಿ. ಮುತ್ತಿಡುವುದರಲ್ಲಿ ಪರಿಣಿತನಾದವನು ಮಾನಿನಿಯ ನಿದಿರೆ ಸುಲಭದಲ್ಲಿ ಕೆಡಿಸಬಲ್ಲ. ಆದರೆ, ಮುತ್ತು ನೀಡುವುದು ಒಂದು ಕಲೆ. ಅದು ಎಲ್ಲರಿಗೂ ಸುಲಭವಾಗಿ ತಕ್ಷಣಕ್ಕೆ ಸಿದ್ಧಿಸುವುದಿಲ್ಲ.
ಚುಂಬನದಲ್ಲಿ ಹತ್ತು ಹಲವು ಬಗೆ ಹಾಲಿವುಡ್ ನಿಂದ ಹಿಡಿದು ನಮ್ಮ ಸ್ಯಾಂಡಲ್ ವುಡ್ ತನಕ ಚುಂಬನ ದೃಶ್ಯಗಳು ಹಾದು ಹೋದರೂ ಚುಂಬನ ವೈವಿಧ್ಯತೆ, ಚುಂಬನ ಕಲೆಯಲ್ಲಿ ಪರಿಣತಿ ಪಡೆಯುವ ಬಗ್ಗೆ ಸಿನಿಮಾ ಮಂದಿ ಎಂದೂ ಹೇಳುವುದಿಲ್ಲ. ಅವರದ್ದು ಬರೀ ಟಚ್ ಅಂಡ್ ಗೋ ಪಾಲಿಸಿ ಅಷ್ಟೆ.
ಮುತ್ತಿಡುವುದರಿಂದ ಅನೇಕ ದೈಹಿಕ ಬದಲಾವಣೆಗಳಾಗುತ್ತವೆ ಹಾಗೂ ಆರೋಗ್ಯಕ್ಕೆ ಚುಂಬನ ಅವಶ್ಯ. ಅಬಾಲವೃದ್ಧರಾದಿಯಾಗಿ ಎಲ್ಲವೂ ಮುತ್ತಿಡಲು ಅರ್ಹರು ಆದರೆ, ವಿಧಾನ ಮಾತ್ರ ಬೇರೆ ಬೇರೆ.
ಒಪ್ಪಿಗೆ ಇಲ್ಲದೆ ಯಾರಿಗೂ ಕಿಸ್ ಮಾಡಬೇಡಿ. ಯಾರು ಯಾರಿಗೆ ಎಲ್ಲೆಲ್ಲಿ ಮುತ್ತಿಡಬೇಕು ಅಲ್ಲೇ ಮುತ್ತಿಡಿ. ಭಾವನೆಗಳ ಭರದಲ್ಲಿ ಮುನ್ನುಗ್ಗಬೇಡಿ. ಇದು ಅನರ್ಥಕ್ಕೆ ದಾರಿ ಮಾಡಿತು.
ಒತ್ತಡ ನಿವಾರಣೆಗೆ ಮಹಿಳೆಯರು ಚುಂಬನಕ್ಕೆ ಶರಣಾಗುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆ ಹೇಳುತ್ತದೆ. ಮುತ್ತಿನ ಮತ್ತೇರಿಸಿಕೊಳ್ಳುವುದರಲ್ಲಿ ಹೆಂಗಳೆಯರೇ ಹೆಚ್ಚು ಜಾಣೆಯರಂತೆ. ಇರಲಿ ಅವಳು ಮೊದಲು ಕೊಟ್ಟರೆ ಏನು ಇವನು ಕೊಟ್ಟರೆ ಏನು ಮುತ್ತು ಮುತ್ತೇ ಅಲ್ವ.
ಚುಂಬನದ ಹಲವು ವಿಧಾನಗಳು ಹಾಗೂ ಅದನ್ನು ಅಧರಗತ ಮಾಡಿಕೊಳ್ಳುವ ಬಗ್ಗೆ ಸಲಹೆ ಬೇಕೆ ಹಾಗಿದ್ದರೆ ಮುಂದಿನ ಪುಟದ ಕೊಂಡಿಯನ್ನು ಒತ್ತಿ....