ಸಂಗಾತಿಯನ್ನು ಸೆಳೆಯಲು ಸ್ವಪ್ರತಿಷ್ಠೆ ಬಿಟ್ಟು, ಸುಂದರ ಉಡುಗೆ ತೊಟ್ಟು, ಆತುರಕ್ಕೆ ಬ್ರೇಕ್ ಹಾಕಿ, ಸ್ಪರ್ಶದಲ್ಲೇ ಎಲ್ಲಾ ಇದೆ ಎಂದು ಮುನ್ನುಗ್ಗಿದರೂ ಪ್ರಯೋಜನವಾಗಲಿಲ್ಲ ಎಂದು ಮಾನಿನಿಯರು ದೂರುವುದಿದೆ.
ಮಾದಕತೆ ಎಂಬ ಟಾನಿಕ್ ಕುಡಿದು, ನಗ್ನತೆ ಎಂಬ ವಿಶ್ವರೂಪ ದರ್ಶನವನ್ನು ನಿಮ್ಮ ಸಂಗಾತಿಗೆ ತೋರಿಸುವ ಮುನ್ನ ಆತನನ್ನು ನಿಮ್ಮ ವಶಕ್ಕೆ ಸೆಳೆದುಕೊಳ್ಳುವುದು ಮುಖ್ಯ. ಆದರೆ, ಹೇಗೆ ಎಂಬ ಚಿಂತೆ ಬಿಡಿ.. ಇಲ್ಲಿರುವ ಕೆಲ ಉಪಾಯವನ್ನು ಅನುಸರಿಸಿ, ಆನಂದಿಸಿ
ತುಟಿಯೇ ಮಾದಕ ಅಸ್ತ್ರ: ಈ ಮುಂಚಿನ ಲೇಖನಗಳಲ್ಲಿ ಸೂಚ್ಯವಾಗಿ ತಿಳಿಸಿದಂತೆ ಮತ್ತೆ ಮತ್ತೆ ಅದೇ ವಿಷ್ಯವನ್ನು ಒತ್ತಿ ಒತ್ತಿ ಹೇಳಬೇಕಾಗಿದೆ. ಚುಂಬನ ಹಾಗೂ ಸ್ಪರ್ಶ ಎಲ್ಲವನ್ನು ಎಲ್ಲರನ್ನೂ ಕರಗಿಸುವ ಬ್ರಹ್ಮಾಸ್ತ್ರಗಳು. ನಿಮ್ಮ ಮಾದಕ ತುಟಿಗಳನ್ನು ಅಲಂಕರಿಸುವುದಕ್ಕಿಂತ ಬಳಸುವ ರೀತಿಯನ್ನು ಅರಿತುಕೊಳ್ಳಿ.
ಹಿಂದಿನ ಲೇಖನಗಳಲ್ಲಿ ತಿಳಿಸಿದ ಚುಂಬನಗಳನ್ನು ಪ್ರಯತ್ನಿಸಿ. ಒಂದೆರಡು ಸುತ್ತು ಹೆಚ್ಚು ಲಿಪ್ ಸ್ಟಿಕ್ ಹಚ್ಚಿಕೊಳ್ಳಿ.. ಪಳ ಪಳ ಹೊಳೆಯುವ ಮಾದಕವಾಗಿ ತುಟಿ ಕಚ್ಚಿದರೆ ಪುರುಷ ಆಯಸ್ಕಾಂತದಂತೆ ಅಂಟಿಕೊಳ್ಳುವುದು ದಿಟ.
ಭಾವ ಭಂಗಿ: ನಿಮ್ಮ ಮೈಬಣ್ಣಕ್ಕಿಂತ ನಿಮ್ಮ ಮೈಮಾಟ ಇಲ್ಲಿ ಹೆಚ್ಚು ಪ್ರಯೋಜನಕಾರಿ. ನಿಮ್ಮ ದೇಹದ ಬಗ್ಗೆ ನಿಮಗೆ ಗರ್ವವಿರಲಿ. ನಿಮ್ಮ ಅಗಾಂಗಗಳನ್ನು ವರ್ಣನೆಗೆ ಆಸ್ಪದ ಕೊಡಿ. ಸ್ಥೂಲಕಾಯರಾಗಲಿ, ಕೃಶದೇಹಿಗಳಾಗಲಿ, ಕಂಫರ್ಟ್ ಆಗಿ ಇದ್ದೀನಿ ಎಂಬ ಭಾವನೆ ನಿಮ್ಮ ಸಂಗಾತಿಗೆ ಮೂಡಿಸಿ.
ನಿಮ್ಮ ನಡೆ, ನೋಟ, ಭಂಗಿಗಳು ಮಾದಕವಾಗಿರಲಿ, ಪ್ರತಿ ಹೆಜ್ಜೆಯೂ ಏನೋ ಹೇಳಲಾಗದ ಭಾವನೆಯನ್ನು ಹೊರಸೂಸುವಂತಿರಲಿ. ಮೂಕನಾದ ಪತಿ ಕೂಡಾ ಕಾಳಿದಾಸನಂತೆ ಕಾವ್ಯ ಲಹರಿ ಹರಿಸುವ ಶಕ್ತಿ ನಿಮ್ಮ ದೇಹಸೌಂದರ್ಯಕ್ಕಿದೆ ಎಂಬುದನ್ನು ನಂಬಿ.
ನೋ ಸೀಕ್ರೇಟ್ ಪ್ಲೀಸ್: ನಿಮ್ಮ ಸೌಂದರ್ಯವನ್ನು ಮುಚ್ಚಿಡಲು ಯತ್ನಿಸಬೇಡಿ. ಡೀಪ್ ನೆಕ್ ಬ್ಲೌಸ್, ಪಾರದರ್ಶಕ ಉಡುಪು, ಆಕರ್ಷಕ ಒಳ ಉಡುಪು, ಸೌಂದರ್ಯಕ್ಕೆ ತಕ್ಕ ಅಲಂಕಾರ ಎಲ್ಲವೂ ಇರಲಿ. ಆದರೆ, ಕಪ್ಪು ಬಣ್ಣ ಮುಚ್ಚಿಡಲು ಹೆಚ್ಚು ಮೇಕಪ್, ದೇಹ ತೂಕ ಬಚ್ಚಿಡಲು ಯತ್ನಿಸುವುದು, ದೇಹದ ಸಮಸ್ಯೆ, ನ್ಯೂನ್ಯತೆ ಬಗ್ಗೆ ಮುಚ್ಚಿಡುವುದು ಮಾತ್ರ ಅಪಾಯಕಾರಿ.
ಕೇಶರಾಶಿಗೆ ಮನ ಸೋಲದವರಿಲ್ಲ: ಜೋಡಿ ಜಡೆ, ಕುಚ್ಚು, ಬೈತಲೆ, ನೋ ಬೈತಲೆ, ಬಾಬ್ ಕಟ್, ಮುಂಗುರುಳು, ಏನಾದರೂ ವೇಷ ಹಾಕಿ ಕೂದಲ ಸೌಂದರ್ಯಕ್ಕೆ ಪತಿರಾಯ ಮರಳಾಗುವಂತೆ ಮಾಡಿ. ಸ್ವಲ್ಪ ಬುದ್ಧಿ ಖರ್ಚು ಮಾಡಿ ಆತನಿಗೆ ಒಪ್ಪುವ ಕೇಶ ವಿನ್ಯಾಸವನ್ನು ರೂಪಿಸಿಕೊಳ್ಳಿ. ಆತ ನಿಮ್ಮ ಕೂದಲೊಡನೆ ಆಟವಾಡಲು ಬಿಡಿ. ಸಿಕ್ಕಾಗುತ್ತದೆ, ನೆತ್ತಿ ನೋವುತ್ತದೆ ಎಂದು ದೂರಬೇಡಿ. ನೋವಿನಲ್ಲೂ ಸುಖವಿದೆ ಎಂಬುದನ್ನು ಮರೆಯಬೇಡಿ.
ಪುರುಷ ಸಿಂಹ ಎಷ್ಟಾದರೂ ನೀಡುವುವನು, ನಿಮ್ಮ ಕೆಲಸ ಪಡೆಯುವುದು. ನಿಮಗೆ ಬೇಕಾದ್ದು ಪಡೆಯುವ ಬಗೆ ನಿಮಗೆ ಬೇರೊಬ್ಬರಿಂದ ಕಲಿತು ಕೊಳ್ಳುವ ಕಲೆಯಲ್ಲ. ಅಭ್ಯಾಸ ದಿಂದ ರೂಢಿಸಿಕೊಳ್ಳಬೇಕಾದ್ದು, ಆದರೂ, ಆರಂಭ ಶೂರತ್ವ ಹೊಂದಿರುವ ಪತಿಗಳನ್ನು ಸಾವಧಾನವಾಗಿ ಸಂಭಾಳಿಸಿಕೊಂಡರೆ ನಿಮ್ಮ ಸ್ವರ್ಗಸುಖಕ್ಕೆ ಯಾರೂ ಅಡ್ಡಿಯಾಗುವುದಿಲ್ಲ.