•  

ಕಾಮ ಕವನ: ಸಲಾಮು ಎಂದಿದೆ ಈ ನನ್ನ ಹೃದಯಾ

Array
 
ಮೊದಲ ರಾತ್ರಿಯ ಮಧುರಮಿಲನದ, ಮೊದಲ ಸುಖದ ಮಧುರಾನುಭವಕೆ ನಲ್ಲ ತನ್ನ ನಲ್ಲೆಯನ್ನು ರಮಿಸಲು ನಾಲ್ಕಾರು ಪದಗಳನ್ನು ಖರ್ಚು ಮಾಡಿದರೆ ಸಾಕು. ಮುನಿಸಿಕೊಂಡ ರತಿ ದೇವಿ ಮಂಚವೇರಿ ಬಿಡುತ್ತಾಳೆ.

ಆ ಶರಾಬಿ ಕಣ್ಣಿಗೆ...ಆ ಗುಲಾಬಿ ಕೆನ್ನೆಗೆ
ಕೆಂಪಾದ ಸೇಬಿಗೆ...ಮುದ್ದಾದ ಹುಡುಗಿಗೆ
ಆ ಬಂಗಾರಿ ಹೂವಿಗೆ...ಆ ಸಿಂಗಾರಿ ನಗುವಿಗೆ
ಸೊಂಪಾದ ಚೆಲುವಿಗೆ...ಕರ್ಪೂರದ ಗೊಂಬೆಗೆ
ಸಲಾಮು ಎಂದಿಂದೆ ಈ ನನ್ನ ಹೃದಯಾ...

ಆ ಕಣ್ಣಿಗೆ ತೀಡಿದ ಕಾಡಿಗೆ...
ಕರಗದ ಹುಣ್ಣಿಮೆ ರಸಿಕನ ಪಾಲಿಗೆ
ಜರತಾರೆ ಸೀರೆಯ ಅಂಚಿನ ನವಿಲುಗರಿಗೆ...
ನವಿರಾದ ಹೂಕಂಪನ ರಾತ್ರಿಯ ಹೊತ್ತಿಗೆ
ಆ ಸೊಂಟದ ಸುತ್ತಲ್ಲೂ ಸುತ್ತಿದ ಡಾಬಿಗೆ...
ಬಿಗಿಯಾಗಿ ನಿನ್ನ ಅಪ್ಪಿದ ಬಿಗುಮಾನವೇ
ಘಮಘಮಿಸೋ ಗಂಧವ ಪುಸಿಕೊಂಡ ಮೈಯಿಗೆ...
ಮಲ್ಲಿಗೆ-ಸಂಪಿಗೆ ಕಂಪಿನ ಹೂಬಳ್ಳಿಗೆ [ಸಲಾಮು ಎಂದಿಂದೆ ಈ ನನ್ನ ಹೃದಯಾ...]

ಆ ಕೈಯಲ್ಲಿ ಅರಳಿದ ಗೋರೆಂಟಿಗೆ...
ಕೆಂದುಟಿಗೆ ಮುತ್ತನ್ನು ಬೇಡಿದರೆ ಎಲ್ಲಿಲ್ಲದ ನಾಚಿಕೆ
ಮುಂಗುರುಳು ಮಾಡಿದ ಮೋಡಿಗೆ...
ಮತ್ತು ಹೆಚ್ಚಾಗಿ ತಬ್ಬಿಬ್ಬು ನಾನಾಗಿಯೆ
ಆ ಕಾಲಿನ ಬೆಳ್ಳಿಯ ಗೆಜ್ಜೆಗೆ...
ಹಗುರವಾಗಿ ಮೀಟಲು ಸುಖಪುಳಕವೇ ನಿನ್ನೊಳಗೆ
ಮೂಗಿನ ಬೊಟ್ಟಿನ ಮೇಲಿನ ಲಜ್ಜೆಗೆ...
ಮಾತಿಗೆ ನಿಲುಕದ ನಿನ ರೂಪರುಚಿಗೆ [ಸಲಾಮು ಎಂದಿಂದೆ ಈ ನನ್ನ ಹೃದಯಾ]

ಓದುಗರಿಗೆ ಬೋನಸ್ ಕವನ ಇಲ್ಲಿದೆ ರವೀಂದ್ರ ಕೊಟಕಿ ಅವರ ಬರೆದ ''ಮಧುಮಂಚ ಕರೆಯುತಿದೆ ಬಾ ಗೆಳತಿ' ಕವನ ಓದಿ ಆನಂದಿಸಿ

English summary
Kamasutra Kavana, a poem which describes beauty of girl and sensuality of men. Love poetry by Citizen Journalist Ravindra Kotaki.
Story first published: Thursday, December 22, 2011, 12:40 [IST]

Get Notifications from Kannada Indiansutras