•  

ಮಧುಮಂಚ ಕರೆಯುತಿದೆ ಬಾ ಗೆಳತಿ

Array
First Night love making poem
 
ಮೊದಲರಾತ್ರಿಯ ಮಧುರಮಿಲನದಮೊದಲ ಸುಖದ ಮಧುರಾನುಭವಕೆಮಧುಮಂಚ ಕರೆಯುತಿದೆ ಬಾ ಗೆಳತಿಪ್ರಥಮ ಪ್ರಣಯದ ಪ್ರಥಮ ಚುಂಬನದಪ್ರಥಮ ಸುಖದ ಪ್ರಣಯಾನುಭವಕೆ ಮಧುಮಂಚ ಕರೆಯುತಿದೆ ಬಾ ಗೆಳತಿನಿನ್ನ ಹಣೆಯಲ್ಲಿ ಸಿಂಧೂರವ ನಾ ಇಟ್ಟಾಗನೀನಾದೆ ನನ್ನಲಿ ಆಗ ಸಮಮಾಂಗಲ್ಯದೊಂದಿಗೆ ಬೆಸೆದಾಗ ನಮ್ಮೀ ಬಂಧಗುಣವತಿ ನಿನ್ನಲ್ಲಿ ನಾನಾದೇ ಅನುರಕ್ತಅರ್ಧಾಂಗಿ ಸಪ್ತಪದಿ ಜೊತೆಯಾಗಿ ತುಳಿದಾಗನಾ ನೀ ಬೇರೆಂಬ ಭಾವ ಸರಿಯಿತು ದೂರ ಆಗಮಧುಮಂಚ ಕರೆಯುತಿದೆ ಬಾ ಗೆಳತಿ ಈಗನಿನ್ನ ಬೆಳ್ಳಿ ಕಾಲ್ಗೆಜ್ಜೆಯ ನಾದ, ಕೈ ಬಳೆಮಾಡಿದ ಮಾತಲ್ಲದ ಮಾತಿನ ಸದ್ದುನೀ ಜಡೆಯಲ್ಲಿ ಮುಡಿದ ಮಲ್ಲಿಗೆ, ನನ್ನಮನವ ಸೆಳೆದಿದೆ ನಿನ್ನೆಡೆಗೆ ಮೆಲ್ಲಗೆಎದುರಲಿ ನಿಂತು ನಗು ಚೆಲ್ಲಿತು ಸುಮ ನಿನ್ನಿಂದ ಈ ಬಾಳೆಲ್ಲಾ ಘಮನೋಡು ಕೋಣೆಯ ತುಂಬಾ ಗಂಧದ ಪರಿಮಳ ಘಮ ಘಮಸದ್ದೆಯಿಲ್ಲದೆ ನಡೆಯಬೇಕಿದೆ ನಿನ್ನ ನನ್ನ ಸಮಾಗಮ ಮಧುಮಂಚ ಕರೆಯುತಿದೆ ಬಾ ಗೆಳತಿ ಕೆನೆಭರಿತ ಹಾಲನು ಹಿಡಿದು ಬಲಗಾಲಿಟ್ಟುಮನದೊಳಗೆ ನಡೆದು ಬಂದ ಮಧುಮತಿಮನದಲಿ ತಳ ಮಳ ತುಂಬಿಕೊಂಡು ಕಪ್ಪು ಕಾಡಿಗೆ ತೀಡಿದ ಕಣ್ಣಿಂದ ನೆಲವನ್ನೇ ನೋಡುತಾ ಎದುರಲಿನಿಂತ ಶೀಲವತಿಮೊಗ್ಗಿನ ಮನಸುಗಳು ಹೂವಾಗಿ ಅರಳಬೇಕಿದೆಮೃದುಸುಮವೇ, ನಿನ್ನ ಸೇರಲು ನೀಡುವೆಯಾಅನುಮತಿಮಧುಮಂಚ ಕರೆಯುತಿದೆ ಬಾ ಗೆಳತಿ ನಿನ್ನ ಕೆಂದುಟಿಯ ಮೆಲಿನ ಸಿಹಿ ಜೇನುಸವಿದಾಗ ತಾನೇ ಧನ್ಯ ನಾನುಕುಡಿನೋಟದಿ ನೀ ಕೊಟ್ಟಾಗ ರತಿಸುಖಕೆ ಅನುಮತಿಯಶುರುವಾಯಿತು ಅಲ್ಲೇ ಅಂಕೆ ಶಂಕೆ ಇಲ್ಲದ ನವ ದಾಂಪತ್ಯಮಧುಮಂಚ, ನಮ್ಮೀ ಈ ಪ್ರಪಂಚ ಜೊತೆಗೆ ಮಧುಮಂಚದ ಸವಿಗಾನಸವಿದಷ್ಟು ಸುಖ, ಬೆರೆತಷ್ಟು ಹಿತ ಬೆಚ್ಚನೆಯ ಈ ಗೂಡಲಿಇಲ್ಲಿಂದಲೇ ಶುರುವಾಗಲಿ ನಮ್ಮೀ ಈ ಜೀವನಪಥಮಧುಮಂಚ ನಲಿಯುತಿದೆ ನೋಡು ನೀ ಗೆಳತಿ
English summary
A poem on Husband and Wife intimate scenes on first night by KR Ravindra.

Get Notifications from Kannada Indiansutras