•  

ಮಗು ಹೆಣ್ಣೊ-ಗಂಡೊ ಎಂದು ಹೇಳುವ 5 ಊಹೆಗಳು

Array
ಗರ್ಭಿಣಿಯೆಂದು ಗೊತ್ತಾದಾಗ ಮನೆಯವರಿಗೆ ಹೊಟ್ಟೆಯಲ್ಲಿರುವ ಮಗು ಹೆಣ್ಣೊ-ಗಂಡೊ ಅಂತ ತಿಳಿಯುವ ತವಕ. ಮಗು ಹುಟ್ಟುವವರೆಗೆ ಕಾಯುವ ಬದಲು ಹೊಟ್ಟೆಯಲ್ಲರುವಾಗಲೆ ಹೊಟ್ಟೆಯನ್ನು ನೋಡಿ ಹೆಣ್ಣು ಅಥವಾ ಗಂಡು ಅಂತ ಹೇಳುವುದು ಜಾಸ್ತಿ. ಇಂತಹ ಊಹೆಗಳಲ್ಲಿ ಕೆಲವೊಂದು ನಿಜವಾಗುವುದು. ಆ ಊಹೆಗಳ ಬಗೆ ತಿಳಿಯಲು ಮುಂದೆ ಓದಿ.1. ಹೊಟ್ಟೆ: ಗರ್ಭಿಣಿಯರ ಹೊಟ್ಟೆ ನೋಡಿ ಮಗು ಹೆಣ್ಣೊ ಅಥವಾ ಗಂಡೊ ಎಂದು ಹಿರಿಯರು ಹೇಳಿದ್ದನ್ನು ಕೇಳಬಹುದು. ಕೆಳ ಹೊಟ್ಟೆ ಹೆಚ್ಚು ಉಬ್ಬು ಕೊಂಡಿದ್ದರೆ ಗಂಡು ಮಗುವೆಂದು, ತುಂಬಾ ಹೊಟ್ಟೆಯಿದೆ ಎಂದಾದರೆ ಹೆಣ್ಣು ಮಗುವೆಂದು ಊಹಿಸಿತ್ತಾರೆ. ಆದರೆ ಈ ಊಹೆ ತಪ್ಪಾಗುವ ಸಾದ್ಯತೆ ಕೂಡ ಇರುತ್ತದೆ.2.ತಿನ್ನುವ ಬಯಕೆ: ಗರ್ಭಿಣಿಯರಿಗೆ ತಿನ್ನುವ ಬಯಕೆ ಹೆಚ್ಚು. ಖಾರ ಮತ್ತು ಸಿಹಿ ತಿನ್ನುವ ಬಯಕೆ ಇದ್ದರೆ ಹೆಣ್ಣು ಮಕ್ಕಳಾಗುತ್ತದೆ. ಗಂಡು ಮಗುವಾದರೆ ಹುಳಿ ತಿನ್ನಬೇಕು ಅನಿಸುತ್ತದೆ, ಸಿಹಿ ಅಷ್ಟಾಗಿ ತಿನ್ನುವುದಿಲ್ಲ. ಆದರೆ ಕೆಲವರಿಗೆ ಸಿಹಿ, ಹುಳಿ ಅಂತ ಪ್ರತ್ಯೇಕವಾದ ಬಯಕೆ ಇರುವುದಿಲ್ಲ. ಅದ್ದರಿಂದ ಈ ಊಹೆಗಳು ಸರಿಯೆಂದು ಹೇಳಲು ಬರುವುದಿಲ್ಲ. 3. ಸ್ತನದ ಗಾತ್ರ: ಬಲಬದಿಯ ಸ್ತನದ ಗಾತ್ರ ದೊಡ್ಡದಾಗಿದ್ದರೆ ಗಂಡು ಮಗುವೆಂದು ಹೇಳುತ್ತಾರೆ. ಅದರೆ ಅನೇಕ ಮಹಿಳೆಯರ ಬಲ ಮತ್ತು ಎಡ ಬದಿಯ ಸ್ತನಗಳು ಒಂದೇ ಗಾತ್ರದಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ಈ ಊಹೆ ಕೂಡ ಎಷ್ಟರ ಮಟ್ಟಿಗೆ ಸರಿಯೆಂದು ಹೇಳಲು ಸಾಧ್ಯವಿಲ್ಲ.4. ಮಕ್ಕಳ ಹತ್ತಿರ ಕೇಳುವುದು: ಈ ಊಹೆ ವಿನೋದವಾಗಿದ್ದರು ಕೆಲವೊಮ್ಮೆ ಸತ್ಯವಾಗುತ್ತದೆ. ಅದೇನಪ್ಪ ಅಂದರೆ ಹಣ್ಣು ಮತ್ತು ಹೂ ತಟ್ಟೆಯಲ್ಲಿ ಇಟ್ಟು, ಮಕ್ಕಳ ಹತ್ತಿರ ಅದರಲ್ಲಿ ಒಂದು ತೆಗೆಯಲು ಹೇಳುವುದು. ಆ ಮಗು ಹೂ ತೆಗೆದರೆ ಹೆಣ್ಣು ಅಂದೂ, ಹಣ್ಣು ತೆಗೆದರೆ ಗಂಡು ಎಂದು ಹೇಳಲಾಗುವುದು. ಇನ್ನು ಕೆಲವರು ಮಕ್ಕಳ ಹತ್ತಿರ ಹೊಟ್ಟೆ ಮುಟ್ಟಿ ನೋಡಿ ಹೇಳಲು ಹೇಳುತ್ತಾರೆ.5. ಪಾದ: ತಣ್ಣನೆಯ ಪಾದಗಳನ್ನು ಹೊಂದಿರುವ ಮಹಿಳೆಯರಿಗೆ ಗಂಡು ಮಗುವಾಗುತ್ತದೆ ಎಂಬ ಊಹೆ ಕೂಡ ಇದೆ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಈ ಮೇಲಿನಂತೆ ಹೇಳುವುದನ್ನು ಕೇಳಬಹುದು. ಆದರೆ ಈ ಎಲ್ಲಾ ಊಹೆಗಳ ಎಲ್ಲಾ ಬಾರಿ ನಿಜವಾಗುವುದಿಲ್ಲ, ಎಲ್ಲಾ ಬಾರಿ ಸುಳ್ಳಾಗುವುದಿಲ್ಲ.
English summary
Prediction need not be always right. If any one in you family become pregnant, the granny of your home may tell certain prediction regarding sex of the foetus. Here is some prediction of those.

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more