ಇದಲ್ಲದೆ ಗರ್ಭದಾರಣೆ ತಡೆಗಟ್ಟಲು ಕೂಡಾ ಕಾಂಡೋಮ್ ಬಳಸುವುದುಂಟು. ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕವಾದ ವಿವಿಧ ಪ್ಲೇವರ್ ಗಳ ಕಾಂಡೋಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಹೆಚ್ ಐವಿ, ಎಸ್ ಟಿಡಿ ಅಥವಾ ಗರ್ಭದಾರಣೆ ತಡೆಗಟ್ಟುವಲ್ಲಿ ಕಾಂಡೋಮ್ ಗಳು ಶೇ.85 ರಷ್ಟು ಮಾತ್ರ ಯಶಸ್ವಿಯಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗರ್ಭಧಾರಣೆ ತಡೆ: ಸಂಭೋಗದ ಸುಖ ಹೊಂದುವ ದಂಪತಿಗಳು ವಾಟರ್ ಫ್ರೂಫ್, ಎಲಾಸ್ಟಿಕ್ ಕಾಂಡೋಮ್ ಗಳನ್ನು ಕಾಂಡೋಮ್ ಬಳಸಿದ್ದರೂ, ವೀರ್ಯಾಣುವನ್ನು ಸ್ತ್ರೀಯರ ಯೋನಿಗೆ ಸಾಗಿ ಬಿಟ್ಟು, ಬೇಡದ ಗರ್ಭದಾರಣೆಯ ಭಯ ಆವರಿಸಿದರೆ, ಲೈಂಗಿಕ ಕ್ರಿಯೆಯ ನಂತರ ಜನನ ಸ್ತ್ರೀಯರು ನಿಯಂತ್ರಣ ಗುಳಿಗೆ ನುಂಗುವುದು ಉತ್ತಮ.
ಆದರೆ, ಯಾವ ಮಾತ್ರೆ, ಎಷ್ಟು ಬಾರಿ ತೆಗೆದುಕೊಳ್ಳಬೇಕು, ಯಾವ ಕಾಲಕ್ಕೆ ಎಂಬುದನ್ನು ನಿಮ್ಮ ಡಾಕ್ಟರ್ ನಿಂದ ಕೇಳಿ ತಿಳಿದುಕೊಳ್ಳಿ. ಈ ವಿಷಯದಲ್ಲಿ ನಾಚಿಕೆಪಟ್ಟುಕೊಂಡರೆ, ಅನುಭವಿಸಿ. ಆದರೆ, ಕಾಂಡೋಮ್ ಕೈಲಿ ಆಗದ ಕೆಲ್ಸ ಮಾತ್ರೆಯಿಂದ ಸಾಧ್ಯ ಎಂಬ ಖುಷಿಯಲ್ಲಿ ಸದಾ ಗುಳಿಗೆ ನುಂಗುತ್ತಿದ್ದರೆ ಮುಂದೆ ನಿಮ್ಮ ಗರ್ಭಾಶಯಕ್ಕೆ ಭಾರಿ ತೊಂದರೆ ಉಂಟಾಗಿ ಗರ್ಭಧಾರಣೆ ಅಸಾಧ್ಯವಾಗುವ ಅಪಾಯವಿದೆ.
ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಮಾತ್ರೆಗೆ ಮನಸೋಲದ, ನಿಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಕೂತು, ಚರ್ಚಿಸಿ ಸೂಕ್ತ ಗುಳಿಗೆ ಪಡೆಯಿರಿ. ಕೆಲವೊಮ್ಮೆ ಈ ಮಾತ್ರೆಗಳಿಂದ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಆಗುವುದುಂಟು. ಅದಕ್ಕೆ ಹೆಚ್ಚು ಚಿಂತಿಸಬೇಡಿ.
ಲೈಂಗಿಕ ಸೋಂಕು ತಡೆ: erpes(ಸರ್ಪಸುತ್ತು), gonorrhea, syphilis, chlamydia ಅಥವಾ trichomoniasis ಮುಂತಾದ ಸೆಕ್ಸುಯಲಿ ಟ್ರಾನ್ಸ್ ಮಿಟೆಡ್ ಡಿಸೀಸ್(STDs) ಗಳನ್ನು ಲ್ಯಾಟೆಕ್ಸ್ ಅಥವಾ ಪಾಲಿಯೂರೆಥಾನ್ ನಿಂದ ಮಾಡಲ್ಪಟ್ಟ ಕಾಂಡೋಮ್ ಗಳು ಸುಲಭವಾಗಿ ಪ್ರತಿರೋಧ ಒಡ್ಡಿ ತಡೆಗಟ್ಟುತ್ತವೆ.
ಆದರೆ, ಚರ್ಮದಿಂದ ಚರ್ಮಕ್ಕೆ ಘರ್ಷಣೆ ಉಂಟಾದಾಗ ಹರಡುವ genital warts ಮುಂತಾದ ಸಾಂಕ್ರಾಮಿಕ ವೈರಾಣು ಸೋಂಕುಗಳಿಂದ ತಡೆಗಟ್ಟಲು ಸಾಧ್ಯವಿಲ್ಲ. [ಅನಲ್, ಓರಲ್ ಸೆಕ್ಸ್ ಮಾಡುವುದರಿಂದ human papillomavirus ಮೂಲಕ ಹರಡುವ ಈ ಸಾಂಕ್ರಾಮಿಕ ಸೋಂಕು] ಆದ್ದರಿಂದ ಪ್ರಾಣಿಜನ್ಯ ಜೀವಕೋಶ(ಉದಾ: lamb intestine)ಗಳಿಂದ ಮಾಡಲ್ಪಟ್ಟ ಕಾಂಡೋಮ್ ಗಳನ್ನು ಆದಷ್ಟು ಬಳಸಬೇಡಿ. ಐಎಸ್ ಒ ಪ್ರಮಾಣ ಪತ್ರ ಪಡೆದ ನಂಬಬಲ್ಲ ಸಂಸ್ಥೆಯ ಕಾಂಡೋಮ್ ಬಳಸಿ. ಬಳಸಿದರೆ ಲೈಂಗಿಕ ಸೋಂಕು ತಡೆಯಿಲ್ಲದೆ ನಿಮ್ಮ ಮೇಲೆ ದಾಳಿ ಮಾಡುವುದಂತೂ ಖಂಡಿತ.
HIV ತಡೆ: ಒಂದರ ಮೇಲೆ ಇಪ್ಪತ್ತು ಕಾಂಡೋಮ್ ಹಾಕಿಕೊಂಡರೂ HIV ನುಸುಳಿಬಿಡುತ್ತದೆ. ದಂಪತಿಗಳಲ್ಲಿ ಯಾರಿಗಾದರೂ HIV ಸೋಂಕು ತಗುಲಿದ್ದರೆ, ಯಾವುದೇ ಶಕ್ತಿಯುತ ಕಾಂಡೋಮ್ ಬಳಸಿದರೂ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುತ್ತದೆ. ಆದರೆ ಏನು ಮಾಡುವುದು ಕಾಮಬಾಧೆ ತಡೆಯಲು ಸಾಧ್ಯವಿಲ್ಲ ಎನ್ನುವವರು ಓರಲ್ ಸೆಕ್ಸ್ ಗೆ ಮೊರೆ ಹೋಗಬಹುದು. ಓರಲ್ ಸೆಕ್ಸ್ ನಲ್ಲಿ ಅಪಾಯ ತೀರಾ ಕಮ್ಮಿ.
ಸುರಕ್ಷಿತ ಸಂಭೋಗ: ಸಂಭೋಗಕ್ಕೆ ಯಾವುದೇ ಕಾಲಮಿತಿ, ಮಾನದಂಡ ರೂಪಿಸುವುದು ಅಸಾಧ್ಯ ಎಂಬುದು ತಜ್ಞರ ಅನುಭವದ ಮಾತು. ಎಷ್ಟೇ ಸುರಕ್ಷತಾ ವಿಧಾನ ಅನುಸರಿಸಿದರೂ, ಒಳ್ಳೆ ಕಂಪೆನಿ ಕಾಂಡೋಮ್ ಹಾಕಿಕೊಂಡಿದ್ದರೂ ಕಾಂಡೋಮ್ ಹರಿದುಹೋಗುವುದು ಕಾಮನ್ ಆಗಿಬಿಟ್ಟಿದೆ. ಆದ್ದರಿಂದ ನಿಮ್ಮ ಸಂಭೋಗ ಕ್ರಿಯೆಯ ಯಾವುದೇ ಹಂತದಲ್ಲಿ ಕಾಂಡೋಮ್ ಹರಿದು, ಸುರಕ್ಷಿತ ಲೈಂಗಿಕ ಕ್ರಿಯೆಗೆ ಫುಲ್ ಸ್ಟಾಪ್ ಹಾಕುವ ಪ್ರಸಂಗ ಎದುರಾಗಬಹುದು.
ಸಾಮಾನ್ಯವಾಗಿ ಲಾಟೆಕ್ಸ್ ಕಾಂಡೋಮ್ ಗಳು ಉತ್ತಮ ಬಳಕೆಯುಲ್ಲದ್ದು ಎಂದು ಹೇಳಲಾಗುತ್ತದೆಯಾದರೂ, ಅದು ಹರಿದು ಹೋಗುವುದಿಲ್ಲ ಎನ್ನಲು ಯಾರು ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಈ ಮಾದರಿ ಕಾಂಡೋಮ್ ಗಳು ಕೂಡಾ ಸುಖದ ಸಂಭೋಗದಲ್ಲಿರುವಾಗ ಕಿರಿಕಿರಿ ಉಂಟು ಮಾಡಬಹುದು.