* ಅನಂಗ
ಒಟ್ಟಿಗೆ ಸಮಯ ಕಳೆಯಲು ಸಾಧ್ಯವಿಲ್ಲ ಎನ್ನುವ ಮಾತು ದುರ್ದೈವ. ಒಟ್ಟಿಗಿದ್ದು ಸಮಯ ಹಂಚಿಕೊಳ್ಳಲಿಲ್ಲ ಎಂಬುದು ದೌರ್ಭಾಗ್ಯ. ಸುರತ ಕ್ರಿಯೆಗೆ ಮುನ್ನ ಒಂದು ವಿಷಯ ಅವಶ್ಯ. ನಿಮ್ಮ ಸಮಸ್ಯೆಗಳನ್ನು ದೂರವಿಡಿ. ಸಂತಸ ಸಮಯದಲ್ಲಿ ಸಂಕಟಗಳನ್ನು ಹಂಚಿಕೊಳ್ಳಬೇಡಿ. ಹಾಗಂತ, ಸಮಸ್ಯೆಗಳನ್ನು ನಿಮ್ಮಲ್ಲೇ ಇಟ್ಟುಕೊಂಡು ಕೊರಗಬೇಡಿ. ಬೇರೆ ಯೋಚನೆ ಇಲ್ಲದೆ ಮುಂದುವರೆಯಿರಿ.
ರಾತ್ರಿ ಎಲ್ಲಾ ಜಾಗರಣೆ ಆದರೂ ಅಡ್ಡಿಯಿಲ್ಲ. ಟೆಂಟ್ವಿ20 ಮ್ಯಾಚ್ ಬದಲು ಟೆಸ್ಟ್ ಮ್ಯಾಚ್ ಆಡಿ. ನಿಮ್ಮವರ ಭಾವನೆ ಒಟ್ಟಿನಲ್ಲಿ ಮ್ಯಾಚ್ ಆಗಿ ಸಾಕು. ಮಿಸ್ ಮ್ಯಾಚ್ ಆದರೆ ಟೆಸ್ಟ್ ಮ್ಯಾಚ್ ನೀರಸ ಡ್ರಾ ಆದಂತೆ. ಫಲಿತಾಂಶ ಬರಲಿ. ಈ ಕ್ರಿಯೆಯಲ್ಲಿ ಶುದ್ಧವಾಗಿರುವುದು ಅತೀ ಅವಶ್ಯ.(ಆದರೆ, ಕೆಲವರಿಗೆ ಸಂಗಾತಿಯ ಬೆವರ ವಾಸನೆಯಲ್ಲೇ ಉದ್ರೇಕತೆ ಸಿಗುವುದೆಂದರೆ ನೋ ಪ್ರಾಬ್ಲಂ). ಬೇಕಾದರೆ ನಿಮ್ಮ ನೆಚ್ಚಿನ ಹೀರೋ ಹೀರೋಯಿನ್ ಗಳನ್ನು ಕಲ್ಪಿಸಿಕೊಂಡು ಕಾಮ ಕ್ರೀಡಾಂಗಣಕ್ಕೆ ಜಿಗಿಯಿರಿ.
ಉದ್ರೇಕತೆ
ಉಲ್ಲಾಸದಿಂದ ಆರಂಭವಾದ ಆಟ, ಪರಸ್ಪರ ಕೀಟಲೆ, ಸುದೀರ್ಘ ಚುಂಬನ, ಸೋಲು ಗೆಲುವಿನ ನಡುವೆ ಸಾಗಿ ಉದ್ರೇಕದ ಪರಮಾವಧಿಯನ್ನು ತಲುಪಲಿ. ನೆನಪಿಡಿ, ಉದ್ರೇಕದ ಪರಮಾವಸ್ಥೆಯೇ ಕಾಮಕೇಳಿಯ ಕೊನೆಯ ಹಂತವಲ್ಲ. ರೇಸ್ ನಲ್ಲಿ ಅದು ಒಂದು ಪಿಟ್ ಸ್ಟಾಪ್ ಅಷ್ಟೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಮೈದಾನಕ್ಕೆ ಇಳಿಯಬಹುದು. ನಿಮ್ಮ ಆಟದಲ್ಲಿ ವೈವಿಧ್ಯತೆಯಿರಲಿ, ಹೊಸ ಬಗೆಯ ಕೂಡುವಿಕೆಯ ಪ್ರಯೋಗಗಳಿಗೆ ಮೊದಲು ಮಾಡಿ. ಹೆಣ್ಣು ಎಂದಿದ್ದರೂ ಹಿಂಬಾಲಕಿ. ಗಂಡಸರೇ, ನೀವಾಗಿ ಮುಂದುವರೆಯದಿದ್ದರೆ ನಿಮಗೆ ಲಾಸ್. ಹೊಸ ಪ್ರಯೋಗ ಮಾಡಿ, ವಿವಿಧ ಭಂಗಿಗಳನ್ನು ಪ್ರಯತ್ನಿಸಿ. ಕಾಮಸೂತ್ರದ ಪ್ರಥಮ ಪಾಠಗಳನ್ನು ಅರಿತ ನಂತರ ಅವುಗಳ ಅಭ್ಯಾಸದಲ್ಲಿ ನಿರತರಾಗಿ.
ಗಮನವಿರಲಿ
ಪುರುಷರೇ ನಿಮ್ಮ ಕ್ರಿಯೆಯಲ್ಲಿ ನಿಮಗೆ ಗಮನವಿರಲಿ. ನೀವು ಮುಂದುವರೆದಂತೆ ಹೆಣ್ಣು ನಿಮಗೆ ತನ್ನನು ಅರ್ಪಿಸಿಕೊಳ್ಳುವುದು ನಿಜವಾದರೂ, ಸಿಕ್ಕಿದ ಅವಕಾಶವನ್ನು ಸಾವಕಾಶವಾಗಿ ಬಳಕೆ ಮಾಡಿ. ಆತುರವಾಗಲಿ, ಅತಿಯಾದ ಪ್ರಕ್ರಿಯೆಯಲ್ಲಿ ತೊಡಗುವ ಮೊದಲು ನಿಮ್ಮ ಗಮನ ಬೇರೆಡೆ ಹರಿಸಿ. ಚುಂಬನವಾಗಲಿ, ಸ್ಪರ್ಶವಾಗಲಿ, ಸಂಭೋಗದ ಭಂಗಿಯಾಗಲಿ ಯಾವುದೇ ಕ್ರಿಯೆಯಾಗಲಿ ಅತಿಯಾಗದಿರಲಿ. ನೆನಪಿರಲಿ, ಹೆಣ್ಣು ಈ ಕ್ರೀಡೆಯಲ್ಲಿ ವೈವಿಧ್ಯತೆ ಬಯಸುತ್ತಾಳೆ. ನಿಮ್ಮ ಗಮನ ಹೊಸ ಸಾಧ್ಯತೆಗಳತ್ತ ಇರಲಿ. ಒಂದೇ ವಿಧಾನ ಕಡೆಗೆ ನಿಮಗೂ ಬೋರ್ ಆಗಬಹುದು.
ಮಾದಕ ದ್ರವ್ಯದಿಂದ ದೂರವಿರಿ
ಮೊದಲೇ ಹೇಳಿದಂತೆ ಶುದ್ಧತೆ ಮುಖ್ಯ. ಕ್ರೀಡೆಗೆ ಇಳಿದ ಮೇಲೆ ಅಶುದ್ಧರಾಗುವುದು ಬೇರೆ ವಿಚಾರ. ಆದರೆ, ಮಾದಕ ದ್ರವ್ಯ, ಮದ್ಯ, ಮಾಂಸ, ಅತಿ ವಾಸನೆಯುಕ್ತ ಆಹಾರ ಸೇವನೆ ಮಾಡಿ ನೀವು ಸುಸ್ತಾಗಿ ನಿಮ್ಮವರನ್ನು ಸುಸ್ತಾಗಿಸಿ ಪಡೆದಿದ್ದು ಮಾತ್ರ ಸೊನ್ನೆ ಎಂಬಂತೆ ಮಾಡಿಕೊಳ್ಳಬೇಡಿ. ಧೈರ್ಯ ಬರಲು ಮದ್ಯಕ್ಕೆ ಮೊರೆ ಹೋಗಬೇಕಾಗಿಲ್ಲ. ಇಲ್ಲಪ್ಪಾ ನನಗೆ ಆಗೋದಿಲ್ಲ ಎಂದು ಒಂದೆರಡು ಪೆಗ್ ಏರಿಸಿ ಫೀಲ್ಡ್ ಗೆ ಎಂಟ್ರಿ ಕೊಟ್ಟು , ಸೆಕ್ಸ್ ಮ್ಯಾರಾಥಾನ್ ಓಟದ ಮೊದಲ ಸುತ್ತಿನಲ್ಲೆ ಮುಗ್ಗರಿಸಿದರೆ, ಮಾನಿನಿಯ ಮುನಿಸನ್ನು ಎದುರಿಸಬೇಕಾದೀತು. ಎಚ್ಚರ!
ಸೃಜನಶೀಲತೆ ಕ್ರಿಯಾಶೀಲತೆಯೆ ಸುಖದ ಮಂತ್ರ
ನಿಮ್ಮ ನೆಚ್ಚಿನ ಹೀರೋ, ಹೀರೋಯಿನ್ ಗಳಾಗಿ ವರ್ತಿಸುವುದು, ಕಣ್ಣು ಪಟ್ಟಿ ಹಾಕಿಕೊಂಡು ಹುಡುಗಾಟ ಆಡುವುದು, ಚುಂಬನದ ಲೆಕ್ಕ ವಿರಿಸುವುದು... ಇತ್ಯಾದಿ ಹೊಸ ಹೊಸ ಬಗೆ ಆಟಗಳು ದೀರ್ಘ ಸುಖಕ್ಕೆ ನಾಂದಿ ಹಾಡುತ್ತವೆ. ತುಂಟಾಂಟದ ಜತೆಗೆ ಹುಸಿ ಮುನಿಸಿನ ಜಗಳವೂ ಓಕೆ. ಚಾಕೋಲೆಟ್, ಐಸ್ ಕ್ರೀಮ್, ಆಹಾರ ಪದಾರ್ಥಗಳನ್ನು ಮೈಮೆತ್ತಿಕೊಂಡು ತಿಂದು ಮುಗಿಸಬಹುದು. ಪರಸ್ಪರ ಸಂತಸ ಮುಖ್ಯ. ಆಟ ಆಡುವ ಬಗೆ ಅವರವರ ಬುದ್ಧಿ ಮಟ್ಟಕ್ಕೆ ಬಿಟ್ಟಿದ್ದು. ದಣಿವಾದಾಗ ಹೀರಲು ಪಕ್ಕದಲ್ಲಿ ತಣ್ಣೀರಿರಲಿ. ಶಕ್ತಿ ಮೀರಿ ಪ್ರಯತ್ನಿಸಿ, ನೋವು ಅನುಭವಿಸಬೇಡಿ. ಆಗಾಗ ವಿಶ್ರಾಂತಿ ಪಡೆದು ಮುಂದುವರೆಸಿ. ಸುರತ ಜಗತ್ತಿನ ಅತ್ಯುತ್ತಮ ಜೋಡಿ ನಾವೇ ಎಂಬ ಭಾವನೆಯಿದ್ದರೆ ಮುಂದೆ ಎಲ್ಲವೂ ಸುಖ್ಯಾಂತ.. ಅಲ್ಲಲ್ಲ ಸುಖದ ಆರಂಭ!
&13;