•  

ಕುಡಿತದಿಂದ ಕಾಮಕ್ಕೆ ಸಿಗುತ್ತೆ ಸಕತ್ ಕಿಕ್

Array

'ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು..' ಇದು ನಿಜವೋ ಇಲ್ಲವೋ ಕುಡಿತ ರುಚಿ ಉಳ್ಳ ಮಹಿಳೆಯರೇ ಹೇಳಬೇಕು. ಆದರೆ, ಕುಡಿತದಿಂದ ಕಾಮಕ್ಕಂತೂ ಸಕತ್ ಕಿಕ್ ಸಿಗುತ್ತದೆ. ಕುಡಿದ ಮೇಲೆ 'ಅಮಲೋ.. ಅಮಲೋ.. ಅಮಲೋ.. ಗೆಳತಿ ನೀನು ಸಿಗಲು..' ಎನ್ನುತ್ತಾ ಸೆಕ್ಸ್ ಅನುಭವಿಸಬಹುದು.

ಇನ್ನು ಮೊದಲ ಕಾಮದಾಟದಲ್ಲಿ ಬಹುತೇಕ ಮಂದಿ ನಾಚಿ ನೀರಾಗಿ, ತನು ಮನ ಅರ್ಪಿಸಲು ಸಿದ್ಧವಾಗುವ ಮುನ್ನ ಎರಡೆರಡು ಬಾರಿ ತಪ್ಪು ಹೆಜ್ಜೆ ಇಡುವುದಿದೆ.

ಸಂಗಾತಿ ಎದುರಲ್ಲೇ ಇದ್ದರೂ ನಗ್ನಳಾಗಲು ಮಹಿಳೆಯರು ಹಿಂಜರೆಯುವುದಿದೆ. ಮಹಿಳೆಯರಿಗೆ ಪ್ರಥಮ ಬಾರಿಗೆ ಕನ್ಯತ್ವ ಕಳೆದುಕೊಳ್ಳುವ ಅದೇನೋ ಭೀತಿ.. ಪುರುಷರಿಗೆ ತಮ್ಮ ಶಿಶ್ನದ ಪೌರುಷ ಪರೀಕ್ಷೆಯ ಕಾತುರ ಇದ್ದೇ ಇರುತ್ತದೆ.

Love Making in drunk state
 

ಈಗ ಕಾಲ ಬದಲಾಗಿದೆ. ಹಿಂದಿನಂತೆ ಮದುವೆಯಾದ ಹೆಂಗಳೆ ಬೆಳ್ಳಿ ಲೋಟದಲ್ಲಿ ಹಾಲು ತೆಗೆದುಕೊಂಡು ಹೋಗಿ ಗಂಡನಿಗೆ ಕುಡಿಸಿ ನಂತರ ತಾನು ಕುಡಿಯುತ್ತಿದ್ದದ್ದು ಬಹುಶಃ ಸಿನಿಮಾಗಳಿಗೆ ಸೀಮಿತವಾಗುವ ದೃಶ್ಯವಾಗಲಿದೆ.

ಎಷ್ಟೇ ಸಂಪ್ರದಾಯಬದ್ಧರಾದರೂ ಪ್ರಥಮ ರಾತ್ರಿ ನಡೆಯುವುದು ಬಹುತೇಕ ಮಧುಚಂದ್ರ ಪ್ರವಾಸಕ್ಕೆ ಹೋದಾಗ. ಬದಲಾದ ಕಾಲದಲ್ಲಿ ಕೊರೆಯುವ ಚಳಿಯಲ್ಲಿ ಮೈಬಿಸಿ ಮಾಡಿಕೊಳ್ಳುವ ಮೊದಲು ಚಿಲ್ಡ್ ಬಿಯರ್ ಹೊಡೆಯುವ ಬಯಸುವ ಪುರುಷರು, ರೆಡ್ ವೈನ್ ಇದ್ದರೆ ಚೆನ್ನ ಎನ್ನುವ ಸ್ತ್ರೀಯರಿಗೇನೂ ಕಮ್ಮಿಯಿಲ್ಲ.

ಹೌದು, ಪ್ರಜ್ಞಾವಸ್ಥೆಗಿಂತ ಕುಡಿತದ ಅಮಲಿನಲ್ಲಿ ಓಲಾಡುತ್ತಾ, ತೇಲಾಡತ್ತಾ ಮತ್ತೇರುವುದೇ ಚೆನ್ನ ಎಂದು ಕೆಲವರು ಅನ್ನುತ್ತಾರೆ. ಅವರು ಹಾಗೆ ಹೇಳಲು ಕಾರಣವಾದರೂ ಏನು ನೋಡೋಣ ಬನ್ನಿ...

ಆತ್ಮವಿಶ್ವಾಸಕ್ಕೆ ವಾಮಮಾರ್ಗವೂ ಓಕೆ?: ಸಾಮಾನ್ಯವಾಗಿ ಕುಡಿತ ನಿಷಿದ್ಧವಾಗಿರುವ ಫ್ಯಾಮಿಲಿಗಳಿಗೆ ಈ ಲೇಖನ ಕೂಡಾ ಅಪಥ್ಯವಾಗುವುದು ಸಹಜ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬ ಸವೆದ ಮಾತನ್ನು ಮತ್ತೊಮ್ಮೆ ನೆನಪಿಸುತ್ತಾ.. ಕುಡಿತದಿಂದ ಒಂದಷ್ಟು ಮೈ ನಡುಕ, ಗಲಿಬಿಲಿ, ಚಂಚಲತೆ ದೂರಾಗುವಂತೂ ಸತ್ಯ.

ಅದರಲ್ಲೂ ಮಹಿಳೆಯರಿಗೆ ಮೊದಲ ಕಾಮದಾಟಕ್ಕೂ ಮುನ್ನ ಎಷ್ಟೇ ಸರ್ಕಸ್ ಮಾಡಿಸಿದರೂ ಕಸರತ್ತು ಹೇಳಿಕೊಟ್ಟರೂ ಮಾನಸಿಕವಾಗಿ ದೃಢತೆ, ವಿಶ್ವಾಸ ಇನ್ನೂ ಬಂದಿರುವುದಿಲ್ಲ. ಈ ಸಂದರ್ಭದಲ್ಲಿ ಗಂಡು ಪ್ರಾಣಿ ತನ್ನ ಸಂಗಾತಿಯನ್ನು ಹತ್ತಿರ ಕೂಡಿಸಿಕೊಂಡು ಆಕೆಯ ಮನದಲ್ಲಿರುವ ಭಯವನ್ನು ದೂರಾಗಿಸಬೇಕು. ಆಕೆಯ ಕಾಲೇಜು ದಿನಗಳನ್ನು ನೆನಪಿಸುತ್ತಾ ಬ್ಯಾಚುಲರ್ಸ್ ಪಾರ್ಟಿ ಯ ಸಂಭ್ರಮದ ಮೂಡ್ ಗೆ ಕರೆದೊಯ್ದರೆ ಅರ್ಧ ಕೆಲಸ ಆದಂತೆ.

ಆದರೂ ವಿಶ್ವಾಸ ಮೂಡದಿದ್ದರೆ 'ಲೆಟ್ಸ್ ಹಾವ್ ಎ ಡ್ರಿಂಕ್ಸ್ 'ಎಂದು ಆಫರ್ ಮಾಡುವುದರಲ್ಲಿ ತಪ್ಪೇನಿಲ್ಲ. ಇದೇನಪ್ಪ.. ಮೊದಲ ರಾತ್ರಿ ದಿನವೇ ಗಂಡ ಹೆಂಡತಿ ಕೂತು ಹೆಂಡ ಕುಡಿಯುವುದೇ ಎನ್ನು ಮೂಗು ಮುರಿಯಬೇಡಿ.. ಉದ್ರೇಕಕಾರಿ ಕಾಮಕ್ಕೂ ಮುನ್ನ ಲೈಟಾಗಿ ಡ್ರಿಂಕ್ಸ್ ಆರೋಗ್ಯಕ್ಕೂ ಒಳ್ಳೆಯದು. ಇದಕ್ಕೆ ದೊಡ್ಡ ಡಾಕ್ಟರ್ ಗಳ ಸರ್ಟಿಫಿಕೇಟ್ ಕೂಡಾ ಇದೆ.

ಆಲ್ಕೋಹಾಲ್ ಉದ್ರೇಕಕಾರಿ(aphrodisiac) : ಕುಡಿತದಿಂದ ಮನುಷ್ಯ ತನ್ನ ಸಮತೋಲನ ಕಳೆದುಕೊಳ್ಳುತ್ತಾನೆ ಎನ್ನುವುದು ನಿಜವಾದರೂ ಕುಡಿತಕ್ಕೂ ಮುನ್ನ ಮನದಲ್ಲಿ ಸಂಗಾತಿಯ ರೂಪು ಮನೆ ಮಾಡಿದ್ದರೆ, ನಶೆ ಹೆಚ್ಚಾಗುತ್ತಿದ್ದಂತೆ ಕಾಮೋದ್ರೇಕ ಹೆಚ್ಚಾಗುತ್ತದೆ.

ಒಂದೆರಡು ಪೆಗ್ ಆದರೂ ಸರಿ.. ಕಿಸ್ ಮಾಡಲು ಸಂಭೋಗಕ್ಕೆ ತೊಡಗಲು ಒಳ್ಳೆ ಇಂಧನವಾಗಬಲ್ಲುದು. ಅದರಲ್ಲೂ ವೈನ್ ಅಂತೂ ನೈಸರ್ಗಿಕ ಸಂಭೋಗಕ್ಕೆ ಉತ್ತೇಜಕವಾಗಿದೆ. ಒಂದು ಲೋಟ ವೈನ್ ಕುಡಿದು ಆಮೇಲೆ ಕಾಮಕೇಳಿಗೆ ಇಳಿದು ನೋಡಿ ನಿಮ್ಮ ಕಾರ್ಯಕ್ಷಮತೆ ಹೇಗೆ ಹೆಚ್ಚುತ್ತದೆ ಎಂಬುದು ಸ್ವತಃ ತಿಳಿಯುತ್ತದೆ.

ಕಂಫರ್ಟ್ ನೆಸ್ ಉಂಟಾಗುತ್ತದೆ:
ಮುಜುಗರವಿಲ್ಲದೆ ಯಾವುದೇ ಬಂಧವಿಲ್ಲದೆ, ಸ್ವಚ್ಛಂದವಾಗಿ ಕಾಮದ ನಿಜ ಸುಖವನ್ನು ಅನುಭವಿಸಲು ಮದ್ಯ ಸಹಕಾರಿಯಾಗುತ್ತದೆ. ಮದ್ಯದ ನಶೆ ಏರುತ್ತಿದ್ದಂತೆ ಅರಿವಿಲ್ಲದಂತೆ ಕಾಮ ಕ್ರಿಯೆಯಲ್ಲಿ ತೊಡಗುವ ದೇಹಕ್ಕೆ ಚಂಚಲ ಮನಸ್ಸಿನ ಯಾವ ಕಿರಿಕಿರಿಯೂ ಇರುವುದಿಲ್ಲ. ಸಂಗಾತಿ ಜೊತೆ ಕಂಫರ್ಟ್ ನೆಸ್ ಜೊತೆ ಕಿಕ್ ನೀಡುತ್ತದೆ ಒಂದು ಗ್ಲಾಸ್ ಮದ್ಯ. ಮದ್ಯ ಎಂದರೆ ಆಲ್ಕೋಹಾಲ್ ಉಳ್ಳ ಯಾವುದೇ ದ್ರವವಾಗಬಹುದು. ರಾಮರಸ, ಸೋಮರಸವಾದರೂ ಸರಿ.. ಮದ್ಯಬೆರತ ಚಾಕಲೋಟ್ ಆದರೂ ಸರಿ. ಕಿಕ್ ಅಂತೂ ತಪ್ಪಿದ್ದಲ್ಲ.

ಸ್ವರ್ಗಕೆ ಕಿಚ್ಚು: ಸರಳ, ಸರಾಗ ಸಂಭೋಗಕ್ಕೆ ಮದ್ಯದ ಇಂಧನ ಬೆರೆತ ಮೇಲೆ ನೋವಿನ ಲಕ್ಷಣವೂ ಇಲ್ಲದೆ ಮನಸೋ ಇಚ್ಛೆ ದಣಿವಾರದಂತೆ ಕಾಮಕ್ರೀಡೆಯಲ್ಲಿ ತೊಡಗಬಹುದು. ನಿಮ್ಮ ಸಂಗಾತಿ ಎಷ್ಟು ಉದ್ರೇಕಕಾರಿ ಯಾವ ಪರಿ ದೇಹದ ಮೇಲೆ ಗುರುತು ಮೂಡಿಸಿದ್ದಾನೆ ಎಂಬುದೂ ಕೂಡಾ ತಿಳಿಯದಂತೆ ಕಾರ್ಯ ನಡೆದು ಬಿಟ್ಟಿರುತ್ತದೆ. ಸುಖದ ಸೋಪಾನವೇ ತುಂಬಿಬಿಡುತ್ತದೆ. ಕಾಮದಿಂದ ಆಗುವ ನೋವಿಗೆ ಹೆದರುವವರು, ಸಂಗಾತಿಯ ಪೌರುಷದ ಬಗ್ಗೆ ಅಂಜಿಕೆ ಉಳ್ಳವರಿಗೆ ಮದ್ಯವೇ ಗುರುವಾಗಬಲ್ಲುದು.

ಪೆಗ್ ಮೇಲೆ ಪೆಗ್ ಏರಿಸಿಕೊಂಡು ಸೆಕ್ಸ್ ಅನುಭವಿಸುವ ಮೊದಲು ನಿಮ್ಮ ಸಂಗಾತಿಗೆ ಇದು ಒಪ್ಪಿಗೆ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡರೆ ಒಳ್ಳೆಯದು. ಬೇಕಾದರೆ ವೈದ್ಯರ ಸಲಹೆ ಪಡೆದು ಮದ್ಯದ ಪ್ರಮಾಣ, ಅಗತ್ಯತೆಯ ಬಗ್ಗೆ ಅರಿವು ಪಡೆದು ಮುಂದುವರೆಯಬಹುದು. ಸದ್ಯಕ್ಕೆ ಮಗು ಬೇಡ ಎನ್ನುವ ದಂಪತಿ ಕುಡಿದು ಕಾಮಕ್ರಿಯೆ ಇಳಿದಿರುವುದೇ ಉತ್ತಮ.

ಕುಡಿದ ಮೇಲೆ ಅಮಲಿನಲ್ಲಿ ಯಾವ ನಿರ್ಧಾರಗಳು, ಯೋಚನೆಗಳು ನೆನಪಿರುವುದಿಲ್ಲ. ಕೊನೆಯದಾಗಿ ಸ್ಮಾಲ್(ಕಡಿಮೆ ಪ್ರಮಾಣ) ಮದ್ಯ ತೊಗೊಳ್ಳಿ ಲಾರ್ಜ್(ದೊಡ್ಡದಾಗಿ) ಆಗಿ ಸುಖ ಅನುಭವಿಸಿ..

English summary
Having since in a drunken state is better when compared to the conscious state. According to few, having since in a drunken state is better when compared to the conscious state. Well, find out the reasons to know why sex rocks when you are drunk.
Story first published: Tuesday, May 29, 2012, 22:11 [IST]
Please Wait while comments are loading...

Get Notifications from Kannada Indiansutras