ಲೈಂಗಿಕ ಸುಖದ ಗೌರಿಶಿಖರವೇರಲು ಯಾವುದೇ ವಯಾಗ್ರಾದ ಅಗತ್ಯತೆಯೇ ಇಲ್ಲ. ಅಥವಾ ಕಾಮಕೌತುಕವನ್ನು ಉತ್ತೇಜಿಸುವ ಟಾನಿಕ್, ಔಷಧಿಗಳಿಗೆ ಮೊರೆ ಹೋಗುವ ಅಗತ್ಯವೂ ಇಲ್ಲ. ಬದಲಿಗೆ, ನಿಸರ್ಗವೇ ಲೈಂಗಿಕತೆಯ ಆನಂದ ಪಡೆಯಲು ದಾರಿ ಮಾಡಿಕೊಟ್ಟಿದೆ. ನಮಗೆ ಆಯಾ ಕಾಲದಲ್ಲಿ ದೊರೆಯುವ ಅನೇಕ ಹಣ್ಣು, ತರಕಾರಿ, ಸಾಂಬಾರ ಪದಾರ್ಥಗಳೇ ಮಿಡಿವ ಮನಗಳನ್ನು ಕೆರಳಿಸಬಲ್ಲವು, ಸುಖದ ಲೋಲುಪತೆಯಲ್ಲಿ ತೇಲಾಡಿಸಬಲ್ಲವು.
ಲೈಂಗಿಕ ಆರೋಗ್ಯವನ್ನು ಸದಾಕಾಲ ಕಾಪಾಡಿಕೊಳ್ಳಲು ಅತ್ತಿ ಹಣ್ಣಿಗಿಂತ ಅತ್ಯುತ್ತಮವಾಗಿ ಹಣ್ಣು ಇನ್ನೊಂದಿಲ್ಲ. ಔದುಂಬರ ಎಂದೂ ಕರೆಯಲಾಗುವ ಅತ್ತಿ ಹಣ್ಣು ಅನೇಕ ಖನಿಜ ಪದಾರ್ಥಗಳ ಆಗರ. ಮ್ಯಾಗನೀಸ್, ಮ್ಯಾಗ್ನೇಶಿಯಂ, ವಿಟಾಮಿನ್ ಈ, ಜಿಂಕ್ ಈ ಹಣ್ಣಿನಲ್ಲಿ ಹೇರಳವಾಗಿವೆ. ಇದನ್ನು ನಿಯಮಿತವಾಗಿ ತಿಂದವ ಮೂಡಿಲ್ಲ ಅಂತ ಎಂದೂ ದೂರುವುದಿಲ್ಲ.
ಇನ್ನು ಬೇಸಿಗೆಯಲ್ಲಿ ಹೇರಳವಾಗಿ ದೊರೆಯುವ ಕಲ್ಲಂಗಡಿ ಇದ್ದರೆ ವಯಾಗ್ರಾ ಏಕೆ ಬೇಕು ಹೇಳಿ. ಕಲ್ಲಂಗಡಿಯನ್ನು ನಿಸರ್ಗವೇ ನೀಡಿದ ವಯಾಗ್ರಾ ಎಂದೂ ಕರೆಯುತ್ತಾರೆ. ಕಲ್ಲಂಗಡಿಯಲ್ಲಿರುವ ಸಿಟ್ರುಲೈನ್ ಎಂಬ ಪದಾರ್ಥ ರಕ್ತ ನಾಳಗಳನ್ನು ಕೇಳಿಯ ಸಮಯದಲ್ಲಿ ಸಕ್ರೀಯವಾಗಿರಿಸುತ್ತದೆ. ಕಲ್ಲಂಗಡಿ ರಸ ಸರಸಮಯ ಗಳಿಗೆಯನ್ನು ಸವಿನೆನಪಾಗಿಸದಿದ್ದರೆ ಕೇಳಿ!
ಚಿಟಿಕೆಯಷ್ಟು ಮೆಣಸಿನಪುಡಿ ನಾಲಿಗೆಯ ಕೆಳಗಿಟ್ಟುಕೊಂಡರೆ ಮುತ್ತಿನ ಮತ್ತು ಗಮ್ಮತ್ತಾಗಿರುತ್ತದೆ. ನಿಮಿರುವಿಕೆ ದೀರ್ಘಕಾಲವಿರುತ್ತದೆ ಮತ್ತು ಮೈಬಿಸಿ ಏರಿ ದೇಹಗಳನ್ನು ಕಾಮಕೇಳಿಗೆ ಹುರಿಗೊಳಿಸುತ್ತದೆ.
ಗಿಣ್ಣು ಸ್ಖಲನಕ್ಕೆ ಅಗತ್ಯವಾಗಿರುವಂಥ ಎಂಡಾರ್ಫಿನ್ ಎಂಬ ಪದಾರ್ಥವನ್ನು ಚಾಕಲೇಟಿಗಿಂತ ಹತ್ತುಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. ಗಿಣ್ಣು ತಿಂದರೆ ಕಾಮಕೇಳಿಗೆ ನಿರಾಸಕ್ತಿ ಹತ್ತಿರ ಬರಲಾರದು ಅಣ್ಣ.
ಕಾಮಕೇಳಿಯಲ್ಲಿ ದ್ರಾಕ್ಷಿ ಹಣ್ಣು ಮಾಡುವ ಮೋಡಿ ನೀವೆಲ್ಲ ಬಲ್ಲಿರಿ. ಇದರಿಂದ ತಯಾರಿಸಿರುವ ಶಾಂಪೇನ್ ಅಲ್ಪಪ್ರಮಾಣದಲ್ಲಿ ಹೀರಿದರೆ ಹಾಸಿಗೆಯಲ್ಲಿ ಮುಂದೆ ನಡೆಯುವುದೆಲ್ಲ ಸರಾಗ. ವೈನ್ ಗಿಂತ ವೇಗವಾಗಿ ಶಾಂಪೇನ್ ರಕ್ತದಲ್ಲಿ ಕೂಡಿಕೊಳ್ಳುವುದರಿಂದ ಸುಖದ ತುದಿಗೇರಲು ಹೆಚ್ಚಿನ ಪ್ರಯಾಸ ಪಡಬೇಕಾಗಿಯೇ ಇಲ್ಲ ಎನ್ನುತ್ತದೆ ವೈದ್ಯಕೀಯ ಸಂಶೋಧನೆಯೊಂದು.