•  

ಕೇಳಿದ್ಯಾ, ಯೋನಿ ಕುಗ್ಗಿಸುವ ಜೆಲ್ ಬಂದಿದೆಯಂತೆ!

Array
Would you like to become virgin again?
 
ಅಚ್ಚುಕಟ್ಟಾಗಿ ಸೀರೆಯುಟ್ಟ ಸಹಧರ್ಮಿಣಿ ತನ್ನ ಗಂಡನಿಗಾಗಿ ಟಿಫಿನ್ ಕ್ಯಾರಿಯರ್ ಹಿಡಿದುಕೊಂಡು ಬರುತ್ತಿರುತ್ತಾಳೆ. ಅದು ತುಂಬಿದ ಕುಟುಂಬ. ಅತ್ತೆ, ಮಾವ, ಮೈದುನಂದಿರು, ನಾದಿನಿ, ಮಕ್ಕಳು ಎಲ್ಲರೂ ತಮ್ಮತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಕೆಲವರು ಪೇಪರ್ ಓದುತ್ತಿದ್ದರೆ, ಕೆಲವರು ಗಡ್ಡ ಬೋಳಿಸುತ್ತಿರುತ್ತಾರೆ, ಕೆಲವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುತ್ತಾರೆ.

ಗಂಡನಿಗೆ ಇನ್ನೇನು ಹೆಂಡತಿ ಕ್ಯಾರಿಯರ್ ಕೊಡಬೇಕು, ಅಷ್ಟರಲ್ಲಿ ಮೋಹದ ಪಾಶ ಬೀಸಿಬಿಡುತ್ತಾಳೆ. ಗಂಡ ಕೆಲಸಕ್ಕೆ ಹೋಗುವುದು ಬಿಟ್ಟು ಸೂಜಿಗಲ್ಲನ್ನು ಅಯಸ್ಕಾಂತ ಸೆಳೆದಂತೆ ಹೆಂಡತಿಯ ಮೋಹಪಾಶದ ವಶವಾಗಿಬಿಡುತ್ತಾನೆ. ಎಲ್ಲರೆದುರೇ ಗಂಡಹೆಂಡತಿಯರಿಬ್ಬರ ಕಾಮೋತ್ಕಟತೆಯ ನರ್ತನ ಶುರುವಾಗಿಬಿಡುತ್ತದೆ.

ಹೆಂಡತಿ, "ನಾನು ಮತ್ತೆ ಕನ್ಯೆಯಾಗಿದ್ದೇನೆ. ಹೌದು ಇದು ನಿಜ. ಮೊತ್ತಮೊದಲ ಬಾರಿಗೆ ಮಾಡುತ್ತಿದ್ದೇನೋ ಎಂದೆನಿಸಲು ಆರಂಭಿಸಿದೆ" ಎಂದು ವೈಯಾರದಿಂದ ಡಾನ್ಸ್ ಮಾಡಲು ಶುರುಮಾಡುತ್ತಾಳೆ. ಹೆಂಡತಿಯ ತಾಳಕ್ಕೆ ತಕ್ಕಂತೆ ಗಂಡ ಹೆಜ್ಜೆ ಹಾಕುತ್ತಾನೆ. ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡು, ಕಣ್ಣಲ್ಲಿ ಕಾಮನೆ ತುಂಬಿಕೊಂಡ ಹೆಂಡತಿ, ಕೆರಳಿದ ನಾಗರದಂತಾಗಿರುವ ಗಂಡನ ಸರಸ ಸಲ್ಲಾಪ ಎಲ್ಲರೆದುರೇ ಆರಂಭ.

ಮಾವ ಬಾಯಲ್ಲಿದ್ದ ಕಾಫಿಯನ್ನು ಪುಸಕ್ಕನೆ ಉಗುಳಿರುತ್ತಾನೆ, ಒಬ್ಬ ಮೈದುನನ ಹುಬ್ಬು ಏರಿರುತ್ತದೆ, ಇನ್ನೊಬ್ಬ ಶೇವಿಂಗ್ ಮಾಡುತ್ತಿರುವುದನ್ನು ಮರೆತು ಬಿಟ್ಟಗಣ್ಣು ಬಿಟ್ಟು ನೋಡುತ್ತಿರುತ್ತಾನೆ, ಮತ್ತೊಬ್ಬ ಗಂಡಹೆಂಡತಿಯರ ಶೃಂಗಾರನೃತ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿರುತ್ತಾನೆ, ನಾಚಿಕೆಯಿಂದ ನಾದಿನಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯುವುದಿಲ್ಲ. 'ಅತ್ತೆಯೆದಿರು ಹೀಗೆ ನರ್ತಿಸಲು ಸಂಕೋಚ ಬರದೇನು' ಎಂದು ಆಕೆಯೇ ಕೇಳುವಂತೆ ಆ ಹಿರಿಯರೆದುರೇ ಇವರ ನೃತ್ಯ ಮುಂದುವರಿಯುತ್ತದೆ.

ಕಡೆಗೆ ಹೆಂಡತಿಯನ್ನು ಸೊಂಟದ ಕೆಳಗಿನಿಂದ ಹಿಡಿದೆತ್ತಿ ಇನ್ನೇನು ಶಯನಗೃಹದತ್ತ ಹೆಜ್ಜೆ ಹಾಕಬೇಕು ಜಾಹೀರಾತು ಕೊನೆಯ ಹಂತಕ್ಕೆ ಬರುತ್ತದೆ. ಎಲ್ಲರೆದಿರು ಮಗ ಸೊಸೆಯದು ಇದೇನು ಹುಚ್ಚಾಟ ಎಂದು ಮುಖ ಸಿಂಡರಿಸಿದ್ದ ಅತ್ತೆಯೇ ಲ್ಯಾಪ್ ಟಾಪ್ ನಲ್ಲಿ 18Again ಎಂಬ ವೆಬ್ ಸೈಟನ್ನು ತೆಗೆದುಕೊಂಡು ಕುಳಿತಿರುತ್ತಾಳೆ. ಹೆಂಡತಿಯ ಹೆಗಲ ಮೇಲೆ ಗಂಡನ ಕೈಬಂದು ಕುಳಿತಿರುತ್ತದೆ. ಮುಂದೇನಾಗುತ್ತದೆಂದು ನಿಮ್ಮ ಊಹೆಗೆ ಬಿಟ್ಟಿದ್ದು.

ಇದು ಅಂತಿಂಥ ಉತ್ಪನ್ನದ ಜಾಹೀರಾತಲ್ಲ. ಹಿಗ್ಗಿಹೋಗಿರುವ ಯೋನಿಯನ್ನು ಮತ್ತೆ ಬಿಗಿಯಾಗಿಸುವ ಜೆಲ್ ಜಾಹೀರಾತು. ಯೋನಿಯನ್ನು ಹೇಗಿದ್ದರೂ ಬೆಳ್ಳಗಾಗಿಸಿದ್ದೀರಿ. ಇನ್ನು ಅದನ್ನು ಬಿಗಿಯಾಗಿಸಿ ಮತ್ತು ಹದಿನೆಂಟರ ಹರೆಯಕ್ಕೆ ಜಾರಿರಿ ಎಂಬುದು ಜಾಹೀರಾತಿನ ಆಶಯ. ಈ ಜೆಲ್ಲನ್ನು ಬಳಸಿದರೆ ಯೋನಿಯನ್ನು ಬಿಗಿಯಾಗಿಸಿಕೊಂಡ ಹೆಂಡತಿಯೊಡನೆ ಮೊದಲ ಬಾರಿಗೆ ಕೂಡಿಕೊಳ್ಳುತ್ತಿರುವ ಅನುಭವ ಪಡೆಯುತ್ತೀರಿ ಎಂದು ಇದು ಹೇಳುತ್ತದೆ. ಮಹಿಳೆಯ ಕನ್ಯಾತನವನ್ನು ಪರೀಕ್ಷಿಸುವ ಜಮಾನಾ ಅಲ್ಲವೇ ಅಲ್ಲ. ಹೆಂಡತಿ ಕನ್ಯಾತನ ಕಳೆದುಕೊಂಡಿದ್ದರೂ ಮೊದಲ ರಾತ್ರಿ ಮಿಲನ ಮಹೋತ್ಸವ ನಡೆಸುವಾಗ ಮೊದಲ ಸಲ ಆದ ಅನುಭವವೇ ಆಗುತ್ತದಂತೆ!

ಈಗಾಗಲೆ ಯೋನಿಯನ್ನು ಬೆಳ್ಳಗಾಗಿಸುವ ಜೆಲ್‌ಗಳು ಮಾರುಕಟ್ಟೆಗೆ ಬಂದಿವೆ. ಕನ್ಯಾಪೊರೆ ಹರಿದಿದೆ ಎಂದು ಮದುವೆಗೆ ಸಿದ್ಧರಾಗುತ್ತಿರುವ ಕನ್ಯೆಯರು ಚಿಂತಿಸುವ ಅಗತ್ಯವೂ ಇಲ್ಲ. ಕನ್ಯಾಪೊರೆಯನ್ನು ಮತ್ತೆ ಕೂಡಿಸುವ ಕಿಟ್ ಕೂಡ ಮಾರಾಟಕ್ಕೆ ಲಭ್ಯವಿವೆ. ಈಗ ಹಿಗ್ಗಿದ ಯೋನಿಯನ್ನು ಕುಗ್ಗಿಸುವ ಜೆಲ್ ನಿಮ್ಮ ಮುಂದಿದೆ. ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು. ಆದರೆ, ಮುಂದೆ ಇನ್ನೂ ಏನೇನು ಬರುತ್ತವೆ ಎಂದು ಬಲ್ಲವರು ಯಾರು? [ಕಾಮದ ಅಮಲೇರಿಸುವ ಟಿವಿ ಜಾಹೀರಾತುಗಳು]

English summary
Would you like to become virgin again? Would you like to feel like you are doing it first time? Then you have gel which can tighten you vagina and make you feel you are just 18-year-old again. Innovation at it's best.

Get Notifications from Kannada Indiansutras