ಮೊದಲ ರಾತ್ರಿಯೆಂದರೆ ಅದೇನೋ ಶತ್ರು ಸೈನ್ಯದ ಮೇಲೆ ಮೊದಲ ಸಾರಿ ದಂಡಯಾತ್ರೆಗೆ ಸಿದ್ಧನಾದ ಸೈನಿಕನಂತೆ ಹುಡುಗನ ಮನಸ್ಸು (ಹಾಗೇ ಹುಡುಗಿರ ಮನಸ್ಸು ಕೂಡ) ಮದುವೆ ಫಿಕ್ಸ್‌ಆದ ಕ್ಷಣದಿಂದಲೇ ಏನೇನೋ ಪೂರ್ವ ತಯಾರಿಗಳ ಲೆಕ್ಕಾಚಾರದಲ್ಲಿ ತೊಡಗುತ್ತದೆ. ಮತ್ತೆ ಕೆಲವರಿಗೆ ಅದೊಂದು ಹತ್ತು ನಿಮಿಷದಲ್ಲಿ ಮುಗಿದೋಗುವ ಕೆಲಸವಷ್ಟೆ. ಮದುವೆ ಎಂದ ಕ್ಷಣ ನಮ್ಮಲ್ಲಿ ಬಣ್ಣ ಬಣ್ಣದ ಕನಸುಗಳು ಮೂಡುತ್ತವೆ, ಆದರೆ ವಾಸ್ತವದಲ್ಲಿ ಮದುವೆಯೆಂದರೆ ಅದೊಂದು ಹೊಣೆಗಾರಿಕೆ ಎಂಬುವುದು ಆ ಕ್ಷಣ ಮನಸಿಗೆ ಹೊಳೆಯುವುದೇ ಇಲ್ಲ.
ಮದುವೆ ಎಂದರೆ ಸಾಧಾರಣವಾಗಿ ತಾಳಿ ಕಟ್ಟುವ ಸಮಯವನ್ನೇ ಪರಿಗಣಿಸುತ್ತಾರೆ. ತಾಳಿ ಕಟ್ಟಿದರೆ ಸತಿ-ಪತಿಗಳಾದರೆಂಬ ಭಾವ ಅನೇಕರಲ್ಲಿದೆ. ವಾಸ್ತವದಲ್ಲಿ ಮದುವೆ ಶಾಸ್ತ್ರದಲ್ಲಿ ತಾಳಿ ಶಾಸ್ತ್ರ ಅವನ-ಅವಳನ್ನು ವರಿಸಿದ್ದಾಳೆಂಬ ಸಂಕೇತ ಮಾತ್ರ. ಅದು ಜಗತ್ತಿನ ಮುಂದೆ, ಹಿರಿಯರ ಮುಂದೆ ಅವರಿಬ್ಬರು ಸತಿ-ಪತಿಗಳಾಗಿ, ಸಪ್ತಪದಿ ತುಳಿದು ಹೊಸ ಬದುಕಿಗೆ ಅಡಿಯಿಟ್ಟರೆಂಬ ಅರ್ಥವದು. ಮದುವೆ ಶಾಸ್ತ್ರಗಳ ಪೈಕಿ ಅತಿ ಮುಖ್ಯವಾದದ್ದು, ನಿಜವಾದ ಅರ್ಥದಲ್ಲಿ ಅವರಿಬ್ಬರು ಮದುವೆಯಾದರು ಎಂಬುವುದುಕ್ಕೆ ಸಾಕ್ಷಿ ಹೆಣ್ಣು-ಗಂಡಿನ ತಲೆಯ ಮೇಲೆ ಜೀರಿಗೆ-ಬೆಲ್ಲ ಇಡುವ ಶಾಸ್ತ್ರ. ಇಲ್ಲಿ ಅವರಿಬ್ಬರು ಪ್ರಾಕೃತಿಕವಾಗಿ ಒಬ್ಬರನ್ನು ಇನ್ನೊಬ್ಬರು ಸಂಪೂರ್ಣವಾಗಿ ವಿಶ್ವಾಸಿಸುವ, ಒಬ್ಬರಿಗೇ ಮತ್ತೊಬ್ಬರು ಜೀವನ ಪೂರ್ತಿ ಜೊತೆಯಾಗಿರುವೆಂದು ಭರವಸೆ ನೀಡುವ ಮಹೂರ್ತವದು. ಅದೇ ನಿಜವಾದ ಮದುವೆಯ ಮೂಹರ್ತ. ಹಾಗೇ ನೀಡಿದ ಮಾತನ್ನು ಪೂರ್ಣಗೊಳಿಸುವ ಕ್ಷಣವೇ ಮೊದಲ ರಾತ್ರಿ.
ಮೊದಲ ರಾತ್ರಿಯೆಂದರೆ ಅನೇಕರಲ್ಲಿ ಅದೇನೋ ಆತಂಕ, ಕೆಲವರಿಗೆ ಮಂಚ ಜೋರಾಗಿ ಅಲುಗಾಡಿದ್ರೆ ಅದನ್ನು ಎಲ್ರೂ ಕೇಳಿಸಿಕೊಂಡ್ರೆ...ಇನ್ನು ಕೆಲವರಿಗೆ ಏನು ಮಾಡದಿದ್ರು ಮಂಚ ಮುರಿದು ಹೋಗುತ್ತೇನೋ ಎಂಬ ಭಯ. ಇನ್ನು ಕೆಲವರ ಮೊದಲ ರಾತ್ರಿ ಹೋಟೆಲ್‌ಗಳಲ್ಲಿ ಆರೆಂಜ್ ಮಾಡಿರುತ್ತಾರೆ. ಅವರ ಆತಂಕವೋ ಎಲ್ಲಾದ್ರೂ ಸಿಸಿ ಕಾಮ್ಯಾರಾ ಇಟ್ಟಿದ್ರೆ...ಇಂತಹ ಆತಂಕಗಳ ಮಧ್ಯೆಯೇ ಆ ರಸಕ್ಷಣಗಳನ್ನು ಸವಿಯದೇ ಕಳೆದುಕೊಳ್ಳುತ್ತಾರೆ. ಅದಕ್ಕೆ ಅದು ' ಪ್ರಥಮ ರಾತ್ರಿಂ ಶೋಭಾನ ಭಗ್ನಂ' ಎಂದೆನ್ನಿಸಿಕೊಳ್ಳುತ್ತೆ. ಮೊದಲ ರಾತ್ರಿಯ ಅರ್ಥ ಹಿರಿಯರು ನಿಗದಿ ಮಾಡಿದ ದಿನದ ರಾತ್ರಿಯೇ ಎಲ್ಲವೂ ಮುಗಿದು ಹೋಗಬೇಕೆಂಬ ಭ್ರಮೆಬೇಡ. ಅದು ಮೊದಲ ಬಾರಿಗೆ ಇಬ್ಬರೂ ಮನಸ್ಸು ತೆರೆದಿಟ್ಟು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸಮಯ. ವಾಸ್ತವದಲ್ಲಿ ಅನೇಕ ಹುಡುಗಿಯರ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತೆ. ಮೊದಲ ಚುಂಬನದ ಕ್ಷಣ ಅವರ ಮನಸ್ಸು ಅವರಿಗೆ ಅರಿವಿಲ್ಲದಂತೆ ಮುಜುಗರಕ್ಕೆ ಒಳಾಗಬಹುದು. ಯಾವುದೋ ಗೊತ್ತಿಲ್ಲ ಆತಂಕ ಕಾಡಬಹುದು (ಇದು ಹುಡುಗರಲ್ಲಿ ಕೂಡ ಹಾಗುತ್ತೆ) ಹಾಗಂತ ಅವಳ (ಅವನ) ಮನಸ್ಸಿನಲ್ಲಿ ಆಸೆಗಳಿಲ್ಲಾಂತ ಅಲ್ಲ. ಅದಕ್ಕೆ ತುಸು ತಾಳ್ಮೆವಹಿಸಿ ಅವಳ ಮನಸ್ಸಿನ ಆತಂಕಗಳನ್ನು ದೂರಮಾಡುವುದು ಹುಡುಗನ ಕರ್ತವ್ಯ.
ನಮ್ಮಲ್ಲಿ ಅನೇಕ ಹುಡುಗರು 'ಆತುರಗೆಟ್ಟ ಆಂಜನೇಯ'ನಂತೆ ವರ್ತಿಸುತ್ತಾರೆ. ಮೊದಲ ರಾತ್ರಿ ಸರಿಯಾದ ಕೋಆಪರೇಷನ್ ಸಿಗಲಿಲ್ಲಾಂತೇಳಿ ಹುಡುಗಿಯನ್ನು ನಿಂದಿಸುವುದು, ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಇದು ಸರಿಯಲ್ಲ ಗೆಳೆಯರೆ (ಕೆಲವೊಂದ್ಸಲ ಹುಡುಗರಿಗೂ ಈ ಅನುಭವವಾಗುತ್ತಿರುತ್ತೋ). ಮೊದಲ ರಾತ್ರಿಯೆಂದರೆ ಯಾವ ರಾತ್ರಿ ಒಂದು ಗಂಡು-ಹೆಣ್ಣು ಪ್ರಕೃತಿಯ ಸಹಕಾರದಿಂದ ಒಂದಾಗುತ್ತರೋ ಅದು ಮೊದಲ ರಾತ್ರಿ. ಮೊದಲ ರಾತ್ರಿಯೆಂದರೆ ಪರಿವರ್ತನೆ ಅದು ಮಾನಸಿಕ, ದೈಹಿಕ, ಶಾರೀರಿಕ ಭಾವಗಳ ಪರಿವರ್ತನೆ.
ಮೊದಲರಾತ್ರಿಯೆಂದರೆ ಅದೊಂದು ಸಂಗಮ. ಅದು ಮೂರು ತತ್ವಗಳು ಮಹಾಸಂಗಮ. ಗಂಡು ಪುರುಷತತ್ವಕ್ಕೂ, ಹೆಣ್ಣು ಸ್ತ್ರಿ ತತ್ವಕ್ಕೂ ಹಾಗೇ ಸುತ್ತಿಲಿನ ಪರಿಸರ ಪ್ರಕೃತಿ ತತ್ವಕ್ಕೂ ಪ್ರತೀಕ. ಇವು ಮೂರು ಸೇರಿದಾಗ ಮಾತ್ರ ಅದೊಂದು ಮೊದಲರಾತ್ರಿ. ಅದಕ್ಕೆ ಕೇವಲ ಹೆಣ್ಣು ಮತ್ತು ಗಂಡು ಮಾತ್ರವಲ್ಲ ಅವರೊಂದಿಗೆ ಪ್ರಕೃತಿ ಕೂಡ ಸಹಕರಿಸದರೆ ಮಾತ್ರವೇ ಆ ರಸಕ್ಷಣ ಆನಂದಮಯವಾಗುವುದು. ಮೊದಲ ರಾತ್ರಿಯ ಸಂಗಮ ಮಧುರವಾಗಿಸಲು ಮೊದಲು ಮನಸ್ಸುಗಳ ನಡುವಿನ ಅಂತರ ದೂರವಾಗಬೇಕು. ಆತಂಕ ಅನುಮಾನಗಳ ಮಧ್ಯೆ ಯಾವತ್ತು ರಸಕ್ಷಣಕ್ಕೆ ಕೈಹಾಕಬೇಡಿ. ಮನಸ್ಸುಗಳ ಪರಸ್ಪರ ಸಹಕರಿಸಿದ ಕ್ಷಣವೇ ಮೊದಲರಾತ್ರಿ. ಅದೇ ಆನಂದ ರಾತ್ರಿ.