•  

ಮೊದಲ ರಾತ್ರಿ

Array
Poetic experience of honeymoon couple
 
ಮೊದಲರಾತ್ರಿಯ ಮಧುರಯಾತನೆ ಮನಸ್ಸುಗಳು ಮಧುರಮೀಲನಕೆ
ಶ್ರೀಕಾರವಾಡಲಿ|
ಸ್ಪರ್ಶದಲಿ ಮೃದುತನವಿರಲಿ, ಚುಂಬನದೀ ಅಧರ ಅಮೃತ ಸವಿಯಲಿ|
ಅವಳ ಕಿರುಗೆಜ್ಜೆಯ ಸದ್ದು ಹೃದಯವ ಮೀಟಲಿ, ಬೆರಳಿಗಿಟ್ಟ ಮುತ್ತು ಆ ಕೆಂದಾವರೆ
ಮೊಗದಲಿ ಲಜ್ಜೆಯ ನಾಟ್ಯವಾಡಿಸಲಿ|

ಆ ಗುಲಾಬಿಯ ಕೆನ್ನೆ ಸೋಕಲು ಮನ್ಮಥನ ಬಾಣ ತಾಕಿದ
ರತಿಯಂತೆ ಅವಳಂದವೆಲ್ಲಾ ಆ ಕ್ಷಣ ಗರಿಬಿಚ್ಚಲಿ|
ಮೂಗಿನ ಬೊಟ್ಟು ಮನಸ್ಸನು ಸೂಜಿಗಲ್ಲಿನಂತೆ ಸೆಳೆಯಲಿ, ಕಣ್ಣಿಗೆ ತೀಡಿದ ಕಾಡಿಗೆ
ಕಾಮವನ್ನು ಪ್ರಚೋದಿಸಲಿ|

ಹಣೆಗಿಟ್ಟ ಕುಂಕುಮ ಅನುರಾಗದ ದೀಪವಾಗಲಿ, ಆ ಕ್ಷಣ ಜಾರುವ ಅವಳ ಸೀರೆ
ಜನ್ಮಗಳ ಬಂಧನಕೆ ಸಾಕ್ಷಿಯಾಗಲಿ|
ಸರಸ ಸವಿಯೂಟವಾಗಲಿ-ವಿರಸ ವಿನೋದವಾಗಲಿ
ಹಾಲು-ಹಣ್ಣು-ಹಂಪಲ ಸಮಯಸಮಯಕೆ ದೇಹಲಾಸ್ಯವ ನೀಗಿಸಲಿ|

ಸರಸವಿರಲಿ, ಕ್ಷಣಕಾಲ ಅಲ್ಲಿ ವಿರಸ ಕೂಡ ಮೂಡಲಿ
ಮುದಡಿದ ತಾವರೆ ಮುತ್ತಿಡಲು ಮತ್ತೆ ಅರಳಿ ನಲಿಯಲಿ|
ನಗುವಿರಲಿ, ನಲಿವಿರಲಿ ಮಧುಚಂದ್ರದ ಆ ರಸಗಳಿಗೆ ಮನಸಿನಲಿ
ಯಾವ ಶಂಕೆ ಮೂಡಿಸದಿರಲಿ|

ಆಸೆಯಿರಲಿ, ಅನುರಾಗವಿರಲಿ ಮಧುರಮಿಲನದ ರಸಕ್ಷಣವದು ರಾಗ-ದ್ವೇಷ ರಹಿತ
ನಾಳೆಯ ಬಾಳಿಗೆ ನಾಂದಿಯಾಡಲಿ|

&13;

Story first published: Friday, November 6, 2009, 12:33 [IST]

Get Notifications from Kannada Indiansutras