ಕ್ವೀನ್ಸ್ ಲ್ಯಾಂಡ್ ಜೂ 28: ಶೀತಕ್ಕೆ ಯಾವುದೆ ಔಷಧಿ ಇಲ್ಲ, ಏನೇ ಸಾಹಸ ಪಟ್ಟರೂ ಒಂದು ವಾರ ಕಾಡದೆ ಬಿಡದು ಎಂಬ ನಂಬಿಕೆ ಸುಳ್ಳಾಗುವ ಸುದ್ದಿಯೊಂದು ಹೊರಬಿದ್ದಿದೆ. ಮಹಿಳೆಯ ಸೆಕ್ಸ್ ಹಾರ್ಮೋನ್ ಗಳು ಶೀತ, ನೆಗಡಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದಂತೆ. ಮಹಿಳೆಯರು ಹಾಗೂ ಪುರುಷರಲ್ಲಿ ನೆಗಡಿ ಹರಡುವ ರೈನೋ ವೈರಸುಗಳ ವಿರುದ್ಧ ದೇಹದ ನಿರೋಧಕ ಶಕ್ತಿ ಹೆಚ್ಚಿಸಲು ಈ ಹಾರ್ಮೊನುಗಳು ಸಹಾಯಕವಾಗಿದೆಯಂತೆ. ನೆಗಡಿ ವಿರುದ್ಧ ಜಯ ಸಾಧಿಸುವಳ್ಲಿ ಪುರುಷರಿಗಿಂತ ಮಹಿಳೆಯರೇ ಮೇಲುಗೈ ಸಾಧಿಸಿದ್ದರೆ ಎಂದು ಸಂಶೋಧಕರು ಹೇಳುತ್ತಾರೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಯ ವಿಜ್ಞಾನಿಗಳು ಈ ಮಹತ್ವದ ಸಂಶೋಧನೆ ಮಾಡಿದ್ದಾರೆ. ಯುವಕರ ನಿರೋಧಕ ಶಕ್ತಿಗಿಂತ ಮಹಿಳೆಯರ ಹಾರ್ಮೋನ್ ಗಳು ಹೆಚ್ಚು ಸತ್ವಯುತವಾಗಿ ನೆಗಡಿ ವೈರಸ್ ವಿರುದ್ಧ ಹೋರಾಡಬಲ್ಲದಾಗಿದೆ. ಶೀತ ಬಾಧೆ ಇದ್ದರೂ ಮುಟ್ಟು ತೀರಿದ ನಂತರ ನೆಗಡಿ ಮಾಯವಾಗುತ್ತದೆ. ಆಸ್ತಮಾ, ಶ್ವಾಸಕೋಶ ಸಂಬಂಧಿತ ರೋಗದಿಂದ ಬಳಲುತ್ತಿದ್ದವರನ್ನು ಅಧಿಕವಾಗಿ ಶೀತ ವೈರಸ್ ಕಾಡುತ್ತದಂತೆ.ಈ ಸದ್ಯಕ್ಕೆ ಮಹಿಳೆಯ ಹಾರ್ಮೋನ್ ನಿರೋಧಕ ಶಕ್ತಿ ಬಳಸಿ, ಕಾಮನ್ ಕೋಲ್ಡ್ ನ ಕೊಲ್ಲಬಲ್ಲ ಔಷಧಿ ತಯಾರಿಸುವಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ.
Indiansutras - Get Notifications. Subscribe to Kannada Indiansutras.
In a major breakthrough, researchers claimed that sex hormone in women can beat common cold in a big manner. The immune system reacts to rhinoviruses, the viruses that cause cold in men and women.