•  

ಮೊದಲ ಮಿಲನ ಮಹೋತ್ಸವದ ತಪ್ಪು ಕಲ್ಪನೆಗಳು

Array
Myths about first sex
 
ಮೊತ್ತಮೊದಲ ಬಾರಿಗೆ ಮೊದಲ ರಾತ್ರಿ ಗಂಡು ಹೆಣ್ಣು ಸಂಧಿಸುವಾಗ ಸಹಜವಾಗಿ ಇಬ್ಬರಲ್ಲೂ ಒಂದು ಬಗೆಯ ಭಯ, ಕಾತುರತೆ, ರೋಮಾಂಚನ ಇದ್ದೇ ಇರುತ್ತದೆ. ಮೊದಲನೇ ಬಾರಿ ಹೇಗೋ ಏನೋ ಎಂಬ ದುಗುಡವೂ ಹೊಟ್ಟೆಯಲ್ಲಿ ಕಚಗುಳಿ ಇಡುತ್ತಿರುತ್ತದೆ. ಅಷ್ಟೇ ಏಕೆ, ಅನೇಕ ತಪ್ಪು ಕಲ್ಪನೆಗಳು ಕೂಡ ಮನೆ ಮಾಡಿರುತ್ತವೆ. ಈ ತಪ್ಪುಕಲ್ಪನೆಗಳೇ ಮತ್ತಷ್ಟು ಹೆದರಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಕ್ಷಣದ ರೋಮಾಂಚನವನ್ನು ಕಿತ್ತುಕೊಂಡುಬಿಡುತ್ತದೆ. ಹಾಗಾಗಿ, ಮೊದಲ ಬಾರಿಗೆ ಸಂಭೋಗಿಸುವಾಗ ಈ ಕೆಳಗಿನ ಅಂಶಗಳ ಬಗ್ಗೆ ಗಮನವಿಟ್ಟರೆ ಉತ್ತಮ.

ರಕ್ತಸ್ರಾವ ಆಗಲೇಬೇಕು : ಮೊದಲ ಬಾರಿ ಕೂಡಿಕೊಂಡಾಗ ರಕ್ತಸ್ರಾವವಾದರೆ ಮಾತ್ರ ಹೆಣ್ಣು ಇನ್ನೂ ಕನ್ಯೆಯಾಗಿದ್ದಾಳೆ ಎಂಬ ತಪ್ಪುಕಲ್ಪನೆ ಅನೇಕ ಗಂಡಸರಲ್ಲಿರುತ್ತದೆ. ಆದರೆ, ಎಲ್ಲ ಮಹಿಳೆಯರಲ್ಲಿಯೂ ರಕ್ತಸ್ರಾವವಾಗಿರುವುದಿಲ್ಲ. ಸಂಧಿಸುವಾಗ ಕನ್ಯಾಪೊರೆ ಹರಿಯುವ ಸಾಧ್ಯತೆಗಳಿರುತ್ತದೆ, ಆಗ ರಕ್ತಸ್ರಾವವಾಗುತ್ತದೆ. ಕನ್ಯಾಪೊರೆ ಹರಿದಾಗ ಕೆಲ ಬಾರಿ ರಕ್ತಸ್ರಾವ ಕೂಡ ಆಗುವುದಿಲ್ಲ. ಆ ಭಾಗದಲ್ಲಿ ರಕ್ತನಾಳಗಳು ಹೆಚ್ಚಾಗಿದ್ದಲ್ಲಿ ಮಾತ್ರ ರಕ್ತಸ್ರಾವವಾಗುತ್ತದೆ. ಇಂದಿನ ದಿನಗಳಲ್ಲಿ ಮದುವೆಯಾಗುವ ಮೊದಲೇ ಕನ್ಯಾಪೊರೆ ಹರಿದಿರುವ ಸಾಧ್ಯತೆಗಳೂ ಇರುತ್ತವೆ. ಆಗ ಸಹಜವಾಗಿ ರಕ್ತಸ್ರಾವ ಆಗುವುದಿಲ್ಲ.

ತುಂಬಾ ನೋವಾಗುತ್ತದೆ : ಇದು ಮತ್ತೊಂದು ತಪ್ಪು ಕಲ್ಪನೆ. ಇದು ಅವರವರ ಭಾವನೆಗಳ ಮೇಲೆ ಅವಲಂಬಿತವಾಗಿರುತ್ತದೆ. ತಪ್ಪುಕಲ್ಪನೆ ಇದ್ದಷ್ಟೂ ಮೊದಲ ಬಾರಿ ಸಂಭೋಗಿಸುವಾಗ ಹೆದರಿಕೆ ಮತ್ತೂ ಹೆಚ್ಚುತ್ತದೆ. ಪುರುಷರ ಜನನಾಂಗ ಸ್ತ್ರೀಯರ ಜನನಾಂಗದಲ್ಲಿ ತೂರಿಕೊಂಡಾಗ ಕನ್ಯಾಪೊರೆ ಹರಿಯದಿರುವುದು ಮತ್ತು ನವೆಯಾಗುವುದು ಸಹಜ. ಅದಕ್ಕೂ ಮೊದಲೇ ಸೈಕ್ಲಿಂಗ್, ಸ್ಟ್ರೆಚಿಂಗ್‌ನಂಥ ಕೆಲ ವ್ಯಾಯಾಮಗಳನ್ನು ಮಾಡಿ ಕನ್ಯಾಪೊರೆ ಹರಿದುಕೊಂಡರೆ ನೋವಾಗುವುದು ತುಸು ಕಡಿಮೆಯಾಗುತ್ತದೆ. ಸಂಭೋಗಿಸುವಾಗ ನೋವಾಗುತ್ತಿದ್ದರೆ ಮೊದಲೇ ಮಾತಾಡಿಕೊಂಡರೆ ನಿಧಾನವಾಗಿ ಕ್ರಿಯೆ ಮಾಡಿ ನೋವು ಕಡಿಮೆ ಮಾಡಿಕೊಳ್ಳಬಹುದು.

ಯೋನಿಯ ಉರಿತ ಮತ್ತು ನೋವು ಆತಂಕಕಾರಿ : ಸಂಭೋಗವನ್ನು ಮೊದಲ ಬಾರಿ ಮಾಡುತ್ತಿರುವುದರಿಂದ ಗಂಡಸರ ಜನನಾಂಗ ಯೋನಿಯನ್ನು ಸೇರಿದಾಗ ಮತ್ತು ನಂತರದ ಘರ್ಷಣೆಯಿಂದ ನೋವಾಗುವುದು ಮತ್ತು ಮೂತ್ರ ವಿಸರ್ಜನೆ ಮಾಡುವಾಗ ಉರಿ ಏಳುವುದು ಸಹಜ. ಇದು ಕೆಲ ದಿನಗಳ ಮಾತ್ರ ಇರುತ್ತದೆ. ಇದರಿಂದ ಹೆದರುವ ಅಗತ್ಯವಿಲ್ಲ. ಆ ಉರಿ ಮತ್ತು ನೋವು ಕಡಿಮೆಯಾಗುವವರೆಗೆ ಸಂಭೋಗಿಸದಿದ್ದರೆ ಆಯಿತು. ಯೋನಿಯ ಒಳಭಾಗ ಒಣವಾಗಿರುವುದರಿಂದ ಉರಿಯುವುದು. ಒಂದು ವಾರದ ನಂತರವೂ ಇದೇ ಸ್ಥಿತಿ ಮುಂದುವರೆದರೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಶ್ರೇಯಸ್ಕರ.

ಸಂಭೋಗದ ನಂತರ ಮೂತ್ರ ವಿಸರ್ಜಿಸಿದರೆ ಗರ್ಭಧಾರಣೆಯಾಗುವುದಿಲ್ಲ : ಪ್ರಥಮ ಬಾರಿ ಗಂಡ ಹೆಂಡತಿ ಕೂಡಿಕೊಳ್ಳುವಾಗ ಮಕ್ಕಳು ಬೇಡವೆಂದಿದ್ದರೆ ಕಾಂಡೋಮ್ ಉಪಯೋಗಿಸಬೇಕು ಎಂದು ಯೋಚಿಸಿರುವುದಿಲ್ಲ. ಮೊದಲ ಸಂಭೋಗದ ಹುರುಪಿನಲ್ಲಿ ಮತ್ತು ಉತ್ಸಾಹದಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಾಮಕ್ರೀಡೆಯಲ್ಲಿ ತೊಡಗಿಬಿಡುತ್ತಾರೆ. ಯೋನಿಯಲ್ಲಿ ಸ್ರವಿಸಿದ ವೀರ್ಯವನ್ನು ಮೂತ್ರ ವಿಸರ್ಜನೆ ಮಾಡುವ ಮುಖಾಂತರ ಹೊರಹಾಕಿ ಗರ್ಭಧಾರಣೆಯನ್ನು ತಪ್ಪಿಸಬಹುದು ಎಂಬ ತಪ್ಪು ಕಲ್ಪನೆ ಅನೇಕ ಮಹಿಳೆಯರಲ್ಲಿ ಇರುತ್ತದೆ. ಇದು ತಪ್ಪುಕಲ್ಪನೆ. ವೀರ್ಯ ಅಂಡಾಣುವನ್ನು ಕೂಡಿಕೊಂಡರೆ ಗರ್ಭ ಧರಿಸುವ ಸಾಧ್ಯತೆ ಖಂಡಿತ ಇರುತ್ತದೆ. ಆದ್ದರಿಂದ ಕಾಂಡೋಮ್ ಧರಿಸಿ ಮಿಲನ ಮಹೋತ್ಸವ ಆಚರಿಸಿಕೊಳ್ಳುವುದು ಉತ್ತಮ.

English summary
When you have sex, you feel happy but also get tensed. This is more common among couples who are doing it for the first time. Why? Simply because there are many myths that can scare you and keep you in fear till you get your next period.
Story first published: Monday, July 16, 2012, 15:08 [IST]

Get Notifications from Kannada Indiansutras