•  

ಪ್ರೇಮಿಗಳ ದಿನದಂದು ಕಾಮನ ಹಬ್ಬ ಆಚರಿಸಿ

Array
Spice Up Romance
 
ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದ್ದ ಹಾಗೆ ಪ್ರೇಮಿಗಳ ಮನಸ್ಸಿನಲ್ಲಿ ಹುಚ್ಚು ಕಾಮನೆಗಳು ಹಲವು ಭಾವನೆಗಳು ಗರಿಗೆದರಿ ನರ್ತಿಸತೊಡಗುತ್ತದೆ. ಪರಸ್ಪರ ಒಬ್ಬರನೊಬ್ಬರು ಮೆಚ್ಚಿಸಲು ತರಾವತಿ ಗಿಫ್ಟ್, ಗ್ರೀಟಿಂಗ್ ಗಳನ್ನು ನೀಡುವುದು ಕಾಮನ್.

ಆದರೆ, ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಜಮಾನದಲ್ಲಿ ವ್ಯಾಲೆಂಟೈನ್ಸ್ ಡೇ ಬರೀ ಪ್ರೇಮಿಗಳ ದಿನವಷ್ಟೇ ಆಗದೆ ಕಾಮನ ಹಬ್ಬ ಆಚರಿಸುವ ದಿನವಾಗಿ ಕೂಡಾ ಕೆಲ ಪ್ರೇಮಿಗಳು ಆಚರಿಸುತ್ತಾರೆ. ಕಾಮನ ಬಲೆಗೆ ಬಿದ್ದು ಒದ್ದಾಡಿದರೆ ಪ್ರೇಮ ಸಂಬಂಧ ಗಟ್ಟಿಗೊಳ್ಳುತ್ತದೆ ಎಂಬ ಹುಚ್ಚು ಕಲ್ಪನೆಯಲ್ಲಿ ಪ್ರೇಮಿಗಳು ತೇಲುತ್ತಿರುತ್ತಾರೆ. ಸತಿ ಪತಿಗಳ ಸಮಾಗಮಕ್ಕೆ ಪ್ರೇಮಿಗಳ ದಿನ ಪೂರಕ ವಾತವಾರಣ ಅಗತ್ಯ.

ಪ್ರೇಮಿಗಳ ದಿನದಂದು ಸಂಗಾತಿಯನ್ನು ಸಂಭೋಗಿಸುವ ಕಲ್ಪನೆ ಹಾಗಿರಲಿ, ಸರಸಕ್ಕೆ ಎಳೆದರೆ ಸಾಕು ನಿಮ್ಮ ಪ್ರೇಮ ಸಾರ್ಥಕ ಎನ್ನಬಹುದು. ಆದರೆ, ಸ್ವಲ್ಪ ಸಲಹೆ, ಸೂಚನೆ ಪಾಲಿಸಬೇಕಾಗುತ್ತದೆ ಇಲ್ಲದಿದ್ದರೆ ಪ್ರೇಮ, ಕಾಮದ ನಡುವೆ ಇರುವ ಸಣ್ಣ ಎಳೆ ಮೆಲ್ಲಗೆ ಸರಿಯುವುದು ಗೊತ್ತಾಗುವುದೇ ಇಲ್ಲ.

ರೆಡ್ ರೂಂ: ಇದೇನು ರೆಡ್ ರೂಮ್..ಲವ್ ಬಣ್ಣ ಪಿಂಕ್ ಅಲ್ಲವೇ ಎನ್ನಬಹುದು. ಆದರೆ, ಮೊದಲ ಬಾರಿಗೆ ಕಾಮನನ್ನು ಕೆರಳಿಸಲು ಕೆಂಪು ಬಣ್ಣವೇ ಸೂಕ್ತ. ಕೆಂಪು ಬಣ್ಣದ ಸಿಲ್ಕ್ ಬೆಡ್ ಶೀಟ್ ಹಾಸಿ, ಮೆತ್ತನೆ ತಲೆದಿಂಬು ಹೃದಯವನ್ನು ಸೆಳೆಯುವಂತಿರಲಿ. ಸಂಭೋಗಕ್ಕೂ ಮುನ್ನ ಮನಸ್ಸು ಉದ್ರೇಕಗೊಂಡು ಕ್ರಿಯೆ ಶುರು ಮಾಡಲು ಸೂಕ್ತವಾದ ಪರಿಸರ ನಿರ್ಮಿಸುವುದು ಮುಖ್ಯ.

ಸುಗಂಧಿತ ಮೇಣದ ಬತ್ತಿ: ಸುಗಂಧ ಪರಿಮಳ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಸಂಗಾತಿ ಬೆವರಿನ ವಾಸನೆಯಲ್ಲಿ ತೋಯುವ ಮೊದಲು ಸುಗಂಧ ದ್ರವ್ಯದ ಘಮಲು ಮನಸ್ಸನ್ನು ತಣಿಸುತ್ತದೆ. ಬಣ್ಣ ಬಣ್ಣದ ಸುಗಂಧಭರಿತ ಮೇಣದ ಬತ್ತಿಯನ್ನು ಅಲಂಕಾರಿಕವಾಗಿ ಜೋಡಿಸಿ ಬೆಳಗಿಸಿದರೆ ಸಂಗಾತಿಯ ಮನ ಗೆಲ್ಲುವುದು ಸುಲಭ. ಸಾಮಾನ್ಯವಾಗಿ ಹುಡುಗಿಯರ ಮನಸ್ಸು ಮೇಣದಂತೆ ಕರಗಿ ಸುಗಂಧದಂತೆ ನಿಮ್ಮ ಕಡೆಗೆ ಹರಡುತ್ತದೆ.

ಕೆಂಪು ಗುಲಾಬಿ: ಪ್ರೀತಿಯ ಸಂಕೇತವಾದ ಕೆಂಪು ಗುಲಾಬಿಯನ್ನು ಕಾಮನ ಆಟದಲ್ಲಿ ಸೂಕ್ತವಾಗಿ ಬಳಸಬಹುದು. ಹಾಸಿಗೆಯನ್ನು ಅಲಂಕರಿಸಲು ಕೆಂಪು ಗುಲಾಬಿ ಬೇಕೇ ಬೇಕು. ಗುಲಾಬಿಯ ಪಕಳೆಗಳನ್ನು ಸಂಗಾತಿ ಮೇಲೆ ಎರಚುತ್ತಾ, ಕಚಗುಳಿ ಇಡುತ್ತಾ ಕಾಮಕೇಳಿಗೆ ಇಳಿಯುವುದು ಸಾಮಾನ್ಯ ಕ್ರಿಯೆ.

ಚಾಕಲೇಟ್ : ಚಾಕಲೇಟ್ ಇಷ್ಟ ಇರುವವರಿಗೆ ಮಾತ್ರ ಈ ಪ್ರಯೋಗ ಇಷ್ಟವಾಗಬಹುದು. ಸಂಗಾತಿಗೆ ಇಷ್ಟವಾದ ಚಾಕಲೇಟ್ ಕೇಕ್, ದೊಡ್ಡ ಚಾಕಲೇಟ್ ಬಳಸಿ ಕಾಮ ಕೆರಳಿಸಬಹುದು. ಪ್ರಣಯಕ್ಕೆ ಆಹ್ವಾನ ನೀಡಲು ಪ್ರೇಮಿಗಳು ಚಾಕಲೇಟ್ ಗಿಫ್ಟ್ ನೀಡಬಹುದು.ಒಬ್ಬರ ಮೇಲೆ ಒಬ್ಬರು ಚಾಕಲೇಟ್ ಮೆತ್ತುತ್ತಾ ಚುಂಬಿಸುತ್ತಾ ಮೂಡ್ ತರಸಿಕೊಳ್ಳಬಹುದು.

ಪ್ರಣಯ ಗೀತೆ, ನರ್ತನ: ಪ್ರಣಯ ಗೀತೆ ಹಾಕಿಕೊಂಡು ಸಂಗಾತಿಯನ್ನು ಮೆಚ್ಚಿಸಲು ನರ್ತಿಸುವುದು ಹಳೆ ಐಡಿಯಾ ಆದರೂ ಹೆಚ್ಚು ಪರಿಣಾಮಕಾರಿ. ನಿಮ್ಮ ಹುಚ್ಚು ಕುಣಿತಕ್ಕೆ ಆಕೆ ಮನಸೋತು ನಿಮ್ಮ ಕಡೆ ತಕ್ಷಣವೇ ವಾಲಬಹುದು. ಜೋಡಿಯಾಗಿ ನರ್ತಿಸುವಾಗ ಮೆ ಸುರಿದರೆ ಇನ್ನೂ ಕಿಚ್ಚು ಹೆಚ್ಚುತ್ತದೆ. ಕುಣಿತದಲ್ಲಿ ಮೈಕೈ ಸೋಕಿಸುತ್ತಾ ಸ್ಪರ್ಶ ಸುಖ ಅನುಭವಿಸಿ ಹಾಸಿಗೆ ಎಳೆದೊಯ್ಯಬಹುದು.

ಸತಿ ಪತಿಗಳು ಪ್ರೇಮಿಗಳ ದಿನದಂದು ತಮ್ಮದೇ ಆದ ರೀತಿಯಲ್ಲಿ ಕೈಗೆಟುಕುವ ಬಜೆಟ್ ನಲ್ಲಿ ಬೆಚ್ಚನೆಯ ರೂಮ್ ನಲ್ಲಿ ಪ್ರಣಯ ಜೋಡಿಗಳಂತೆ ಹಾಡಿ ನಲಿದರೆ ಅಲ್ಲಿಗೆ ಪ್ರೇಮಿಗಳ ದಿನ ಸಾರ್ಥಕತೆ ಪಡೆಯುತ್ತದೆ.

English summary
Valentine's day is coming close. How are you planning to spice up romance with your partner? If you don't have any plans to have a sensually romantic session with your partner, then here are few ideas to make this valentine's day special. Read on...
Story first published: Friday, February 10, 2012, 17:12 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more