ಮೂಡ್ ಆಫ್ ಆಗಿಬಿಟ್ಟರೆ ಮಲ್ಲಿಗೆಯಾಗಬೇಕಾದ ಮನಸು ಕ್ಷಣಾರ್ಧದಲ್ಲಿ ಬಾಡಿದ ಹೂವಿನಂತಾಗಬಹುದು. ಒಂದು ಸಣ್ಣ ತಪ್ಪಿನಿಂದಾಗಿ ಪುಟಿದೇಳಬೇಕಾದ ಸ್ಫೂರ್ತಿಯ ಚಿಲುಮೆ ಬತ್ತಿದ ಬಾವಿಯಂತಾಗಬಹುದು. ಆ ಅಮೃತ ಘಳಿಗೆಯಲ್ಲಿ ಪ್ರೇಮದ ಕಾರಂಜಿಯನ್ನು ಚಿಮ್ಮಿಸುವ ಬಟನ್ ನಮ್ಮ ಕೈಯಲ್ಲೇ ಇರುತ್ತದೆ. ಕಟ್ಟಿಗೆಯ ಬೊಡ್ಡೆಯೊಂದಿಗೆ ಸರಸ ಸಲ್ಲಾಪವಾಡುವುದು ಸಾಧ್ಯವೆ?
ಮೈಥುನದ ಸಮಯದಲ್ಲಿ ಪುರುಷರು ಜಾಸ್ತಿ ಚಿಂತಿಸಲು ಹೋಗುವುದಿಲ್ಲ. ಆದರೆ, ಏನೋ ಮಾಡಲು ಹೋಗಿ ಏನೋ ಆದಾಗ ಪುರುಷ ಪುಂಗವ ಬಿಲ ಸೇರಿದ ಹಾವಿನಂತಾಗಿಬಿಡುತ್ತಾನೆ. ಕೆರಳುವುದು, ಅರಳುವುದು, ಬುಸುಗುಡುವುದು ಇನ್ನಾವಾಗಲೋ? ಗಂಡಸಿನಲ್ಲಿ ಪ್ರೇಮ ವಿರಹ ತಂದಿಡುವ ಅಂತಹ ಸಂಗತಿಗಳು ಯಾವುದು? ಒಂದೊಂದಾಗಿ ನೋಡೋಣ ಬನ್ನಿ.
ಸಲ್ಲದ ಹೋಲಿಕೆ : ಎಲ್ಲ ಬೆರಳುಗಳು ಒಂದೇ ಆಗಿರುವುದಿಲ್ಲವಾದ್ದರಿಂದ ನಿಮ್ಮ ಗಂಡ ಮತ್ತೊಮ್ಮ ಪುರುಷನೊಂದಿಗೆ ಹೋಲಿಸಿಕೊಳ್ಳುವುದನ್ನು ಸಹಿಸುವುದಿಲ್ಲ. ಹಾಸಿಗೆಯ ಮೇಲೆ ಪವಡಿಸಿದ ಸಂದರ್ಭದಲ್ಲಿ ಇದು ಸರ್ವಥಾ ಸಲ್ಲ. ಪುರುಷನ ಪೌರುಷ ಉಕ್ಕುವಂತೆ ಉತ್ತೇಜನ ನೀಡುವಂತಹ ಮಾತನ್ನಾಡುವುದು ನಾರಿಯ ಕರ್ತವ್ಯ. ಏನಾದರೂ ಕುಂದುಕೊರತೆಗಳಿದ್ದರೆ ಮಾತನಾಡಿ ಬಗೆಹರಿಸುವತ್ತ ಚಿತ್ತ ಹರಿಸಬೇಕು. ಅದು ಬಿಟ್ಟು ತೆಗಳಲು ಶುರುಮಾಡಿದರೆ ನಷ್ಟ ಹೆಂಡತಿಗೇ.
ಒಲ್ಲದ ಕಚ್ಚುವಿಕೆ : ಮಹಿಳೆಯರು ದೇಹದ ಅನೇಕ ಭಾಗಗಳಲ್ಲಿ ಕಚ್ಚುವುದನ್ನು ಮತ್ತು ಕಚ್ಚಿಸಿಕೊಳ್ಳುವುದನ್ನು ಇಷ್ಟಪಟ್ಟರೆ ಪುರುಷರು ಕಚ್ಚುವುದನ್ನು ಇಷ್ಟಪಟ್ಟರೆ, ಕಚ್ಚಿಸಿಕೊಳ್ಳುವುದನ್ನು ಅಷ್ಟೊಂದು ಇಷ್ಟಪಡುವುದಿಲ್ಲ. ಹಾಗಾಗಿ, ಅನುಮತಿ ಪಡೆದೆಯೇ ಮುದ್ದುಮುದ್ದಿಸುತ್ತಲೇ ಕಚ್ಚುವ ಕಾಯಕಕ್ಕೆ ನಲ್ಲೆ ತೊಡಗಬೇಕು. ನಲ್ಲ ಒಲ್ಲೆ ಎಂದರೆ ಅಲ್ಲೇ ಬಿಟ್ಟುಬಿಡು ಮೊಲ್ಲೆ. ಇಷ್ಟವಿಲ್ಲದ ಜಾಗದಲ್ಲಿ ಕಚ್ಚಿದರೆ ಅಥವಾ ಗಾಯವಾದರೆ ಅಲ್ಲಿಗೆ ಅಂದಿನ ಕಾಮಕೇಳಿಗೆ ತಿಲಾಂಜಲಿ ಇಟ್ಟಂತೆಯೆ.
ಸ್ಪಂದಿಸದ ಸಂಗಾತಿ : ಪ್ರೇಮದ ಕರೆಗೆ, ಸಲ್ಲಾಪದ ಪಿಸುಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಸುಖದ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ. ಗಂಡನ ಆಸೆಯಂತೆ ಹೆಂಡತಿ ಸ್ಪಂದಿಸದಿದ್ದಾಗ ಮೂಡು ಹಾಳಾಗಿ ಇಡೀ ರಾತ್ರಿ ಪರಿತಪಿಸುವಂತಾಗುತ್ತದೆ. ಗಂಡನ ಆಸೆಗಳನ್ನು ಪೂರೈಸುವುದು, ಬೇಡಿಕೆಗೆ ತಕ್ಕಂತೆ ಒಗ್ಗಿಕೊಳ್ಳುವುದು ಹೆಣ್ಣಿಗೆ ನಿಜಕ್ಕೂ ಲಾಭದಾಯಕ. ಸಹಜವಾದ ಹೆಣ್ತನ ಮತ್ತು ಅಣತಿಯಂತೆ ನಡೆಯುವ ಗುಣ ಗಂಡನನ್ನು ಹಾಸಿಗೆಯಲ್ಲಿ ಹುಚ್ಚೆಬ್ಬಿಸುವಂತೆ ಮಾಡುತ್ತವೆ.
ಗುಪ್ತ ಸ್ಥಳದಲ್ಲಿ ಅನಗತ್ಯ ಕೂದಲು : ಹೆಂಗಸಿನ ಗುಪ್ತ ಸ್ಥಳದಲ್ಲಿ ಕೂದಲು ಇರುವುದು ಮತ್ತು ಸ್ವಚ್ಛವಿಲ್ಲದಿರುವುದನ್ನು ಯಾವ ಗಂಡಸೂ ಇಷ್ಟಪಡುವುದಿಲ್ಲ. ಈ ಸಂಗತಿ ಗಾಳಿ ತುಂಬಿಕೊಂಡ ಬಲೂನನ್ನು ಸೂಜಿ ಚುಚ್ಚಿದಂತೆ ಚುಚ್ಚಿಬಿಡುತ್ತದೆ. ಕಾಮೋತ್ಕಟತೆ ಉತ್ತುಂಗಕ್ಕೇರಿದಾಗ ಜರ್ರನೆ ಜಾರಿಬಿಡುತ್ತದೆ. ಪುರುಷ ಇದ್ದಕ್ಕಿದ್ದಂತೆ ಅನ್ಯಮನಸ್ಕನಾಗುತ್ತಾನೆ.