•  

ಮತ್ತೇರಿಸುವ ಮುತ್ತಿನ ಸುತ್ತ ತಮಾಷೆಯ ಸಂಗತಿಗಳು

Array
Fun facts about kissing
 
ಮುತಿನಲ್ಲಿ ಮಧುವಿದೆ, ಪ್ರೀತಿಯಿದೆ, ಆಳವಾದ ಬಂಧವಿದೆ, ಕಂದಕಗಳನ್ನು ಸೇರಿಸುವ ಶಕ್ತಿಯಿದೆ. ಚುಂಬನದಲ್ಲಿ ಆಸೆಯ ಭಾವವಿದೆ, ತಮಾಷೆಯಿದೆ. ಆತ್ಮೀಯತೆಯಿಂದ ನೀಡುವ ಚುಂಬನದಲ್ಲಿ ಆರೋಗ್ಯದ ಗುಟ್ಟು ಕೂಡ ಅಡಗಿಕೊಂಡಿದೆ ಎಂದರೆ ನಂಬಲೇಬೇಕು.

ಮತ್ತೇರಿಸುವ ಮುತ್ತನ್ನು ಗಂಡುಹೆಣ್ಣು ಇಂದು ನಿನ್ನೆ ಕಂಡುಕೊಂಡ ಸಂಗತಿಯಲ್ಲ. ಆಡಂ ಮತ್ತು ಈವ್ ಒಬ್ಬರಿಗೊಬ್ಬರು ಆಕರ್ಷಿತರಾದ ಕ್ಷಣದಿಂದ ಮುತ್ತು ಜಾಗತಿಕವಾಗಿ ಜಾರಿಯಲ್ಲಿದೆ. ಪ್ರೀತಿಯನ್ನು ತೋರ್ಪಡಿಸಿಕೊಳ್ಳಲು ಗಂಡುಹೆಣ್ಣು ಕಂಡುಕೊಂಡ ಅತ್ಯಂತ ಸಹಜವಾದ ಕ್ರಿಯೆ ಚುಂಬನ. ಚುಂಬನದ ಜೊತೆ ಇನ್ನೂ ಅನೇಕ ಸಂಗತಿಗಳು ತಳಕುಹಾಕಿಕೊಂಡಿವೆ.

1. ಪ್ಯಾಷನೇಟ್ ಆಗಿ ಒಂದು ನಿಮಿಷಗಳ ಕಾಲ ಗಂಡು ಹೆಣ್ಣಿನ ಅಧರಅಧರಗಳು ಕೂಡಿದರೆ 26 ಕ್ಯಾಲೋರಿ ಸುಟ್ಟುಹೋಗಿರುತ್ತದೆ. ಸೋ, ಜಿಮ್‌ಗೆ ಹೋಗದೆಯೆ ಮುದ್ದಿನ ಸಂಗಾತಿಗೆ ಮುತ್ತಿಡುವ ಮುಖಾಂತರ ತೂಕವನ್ನು ಕೂಡ ಕಳೆದುಕೊಳ್ಳಬಹುದು.

2. ಒಂದು ಸಮೀಕ್ಷೆಯ ಪ್ರಕಾರ ಕಿಸ್ ಕೊಡುವಾಗ ಶೇ.37ರಷ್ಟು ಪುರುಷರು ಕಣ್ಣು ತೆರೆದಿರುತ್ತಾರೆ.

3. ಮುತ್ತಿಡುವಾಗ ಪುರುಷರು ಕಲ್ಪನೆಯಲ್ಲಿ ಕಳೆದುಹೋಗಿಬಿಡುತ್ತಾರೆ. ಆದರೆ, ಮಹಿಳೆಯರು ಇನ್ನಷ್ಟು ಬೇಕು ಎಂದು ಹಂಬಲಿಸುತ್ತಾರೆ.

4. ಚುಂಬಿಸುವಾಗ ಅನೇಕ ಗಂಡಂದಿರು ಹೆಂಡತಿಯ ಕೂದಲು ಅಡ್ಡಬರುವುದನ್ನು ಇಷ್ಟಪಡುವುದಿಲ್ಲ.

5. ಚುಂಬನ ಕ್ರಿಯೆ ನಿರಂತರವಾಗಿದ್ದರೆ ಮುಖದ ಮೇಲೆ ನೆರಿಗೆಗಳು ಹೆಚ್ಚಾಗಿ ಬರುವುದಿಲ್ಲ. ಮುಖದಲ್ಲಿರುವ ಸ್ನಾಯುಗಳು ಚುಂಬಿಸುವಾಗ ಹೆಚ್ಚು ಕ್ರಿಯಾಶೀಲವಾಗಿರುತ್ತವೆ.

6. ಪ್ರಾಚೀನ ಕಾಲದಲ್ಲಿ ಈಜಿಪ್ತರು ತುಟಿಯ ಬದಲು ಮೂಗಿನಿಂದ ಚುಂಬಿಸುತ್ತಿದ್ದರು.

7. ಹಲವಾರು ಶತಮಾನಗಳ ಹಿಂದೆ ಇಟಲಿಯಲ್ಲಿ ಯಾರಾದರೂ ಚುಂಬಿಸುವವರು ಸಿಕ್ಕುಬಿದ್ದರೆ ಮದುವೆಯಾಗಲೇಬೇಕಿತ್ತು.

English summary
Kissing is something passionate and eternal. A small or a big kiss has a lot of impact not only in the relationship but also in health. It is believed that kissing helps to lose weight as it burns calories while love making. Some fun facts about kissing.
Story first published: Tuesday, March 13, 2012, 15:25 [IST]

Get Notifications from Kannada Indiansutras