•  

ಧುಮ್ಮಿಕ್ಕುವ ಕಾಮಕ್ಕೆ ಅಣೆಕಟ್ಟೆಯೊಡ್ಡುವ ವಿಚಿತ್ರ ಹವ್ಯಾಸ

Array
Weird Sex Habits That Can Annoy You
 
ಎರಡು ಮನಸುಗಳು, ದೇಹಗಳು ಮೆಚ್ಚುವಂತೆ ಲೈಂಗಿಕ ಕ್ರಿಯೆ ನಡೆಸುವುದು ಎಲ್ಲ ಸಂದರ್ಭದಲ್ಲಿ ಸಾಧ್ಯವಾಗುವುದೇ ಇಲ್ಲ. ಅವರವರ ಮೂಡಿನ ಮೇಲೆ, ಸಂಗಾತಿ ತೋರುವ ಆಸಕ್ತಿಯ ಮೇಲೆ, ಕೋಣೆಯಲ್ಲಿರುವ ವಾತಾವರಣದ ಮೇಲೆ ರತಿಸುಖದ ಯಶಸ್ಸು ಮತ್ತು ಸೋಲು ಅವಲಂಬಿತವಾಗಿರುತ್ತದೆ. ಕಾಮಾಕಾಂಕ್ಷೆ ತುತ್ತತುದಿ ತಲುಪಿ ಇನ್ನೇನು ಧುಮುಕಬೇಕು ಅನ್ನುವ ಹೊತ್ತಿಗೆ ಸಂಗಾತಿ ವಿಚಿತ್ರ ನಡವಳಿಕೆಗಳಿಂದ ಎಲ್ಲವೂ ಠುಸ್ ಆಗಿರುತ್ತದೆ.

ಇದೆಲ್ಲದರ ಜೊತೆಗೆ ಗಂಡಾಗಲಿ ಹೆಣ್ಣಾಗಲಿ ರತಿಕ್ರೀಡೆಯಾಗುವಾಗ ಕೆಲ ವಿಚಿತ್ರ ಹವ್ಯಾಸಗಳನ್ನು ಹೊಂದಿರುತ್ತಾರೆ. ಒಬ್ಬರ ಹವ್ಯಾಸಗಳು ಇನ್ನೊಬ್ಬರಿಗೆ ರೇಜಿಗೆ ಉಂಟು ಮಾಡಿದರೂ, ಅಂಥವುಗಳ ಬಗ್ಗೆ ತಗಾದೆ ಎತ್ತದೆ ಸಕಾರಾತ್ಮಕವಾಗಿ ಸ್ವೀಕರಿಸಿದಾಗ ರಾತ್ರಿ ರಂಗೇರಿಬಿಡುತ್ತದೆ, ನಡುರಾತ್ರಿಯಲ್ಲೇ ಕಾಮನಬಿಲ್ಲು ಹೆದೆಯೇರಿಬಿಡುತ್ತದೆ.

ಕಣ್ಣುಮುಚ್ಚಿದರೆ ಎಲ್ಲವೂ ಕತ್ತಲೆಯಾದರೂ ಕೆಲವರಿಗೆ ಟ್ಯೂಬ್ ಲೈಟಿನಲ್ಲೇ ಲೈಂಗಿಕ ಸುಖ ಅನುಭವಿಸಬೇಕು ಎಂಬ ಆಸೆಯಿರುತ್ತದೆ. ಕೆಲವರಿಗೆ ಮೈಮೇಲೆ ಧರಿಸಬೇಕಾದ ಯಾವುದೇ ಬಟ್ಟೆ ಇಲ್ಲದಿದ್ದರೂ ಸಂಗಮಿಸುವಾಗ ಕಾಲುಚೀಲ ಧರಿಸಿರಬೇಕು ಎಂದು ಇಚ್ಛೆಪಟ್ಟಿರುತ್ತಾರೆ. ಇನ್ನು ಕೆಲವರಿಗೆ ಎಸಿ ತಂಪಿನಲ್ಲಿ ಹಾಸಿಗೆಯ ಮೇಲೆ ಹೊರಳಾಡಿದಾಗ ಮಾತ್ರ ಮೂಡು ಬರುತ್ತದೆ. ಇನ್ನು ಹಲವರಿಗೆ ದೇಹದ ಕೆಲ ಪ್ರದೇಶದಲ್ಲಿ ಚುಂಬಿಸಿದಾಗ ಮಾತ್ರ ಕಾಮ ಸೆಟೆಯುತ್ತದೆ.

ಕೆಲ ಹೆಂಗಸರಿಗೆ ದೇಹದ ಕೆಲ ಭಾಗಗಳು ಸೆಕ್ಸ್ ಕೆಟಲಿಸ್ಟ್ ಆಗಿ ವರ್ತಿಸುತ್ತವೆ. ಕತ್ತು, ಬೆನ್ನಿನ ಮೇಲ್ತುದಿ, ತುಟಿಯ ಒಳಪದರ, ಕಂಕುಳಲ್ಲಿನ ಕೂದಲಿನ ಭಾಗ, ಹೊಕ್ಕಳು ಚುಂಬಿಸುವುದು ಸ್ತನದ ತೊಟ್ಟು, ಕಾಲಿನ ಪಾದ, ಬೆನ್ನಿನ ಕೆಳಗಿನ ಜಾರುಬಡಿ ಕಚ್ಚುವುದು... ಹೀಗೆ ಅಂಥ ಭಾಗಗಳ ಮೇಲೆ ನವಿಲಿನ ಗರಿಯ ನಲಿದಾಟ ಆದಾಗಲೇ ಕಾಮ ಕಿತ್ತುಕೊಂಡು ಬರುತ್ತದೆ. ಗಂಡಸಿಗೆ ಇದು ಇಷ್ಟವಿಲ್ಲದಿದ್ದರೂ ತನ್ನ ಸಂಗಾತಿಗಾಗಿ ಕೆಲವನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ.

ಗಂಡಸಿನಲ್ಲಿಯೂ ಅಷ್ಟೇ ಪೊದೆಯಂತಹ ತಲೆಕೂದಲಿನ ಮೇಲಿನ ಬೆರಳಿನ ಆಟ, ಹೊಕ್ಕಳಿಂದ ಆರಿಂಚು ಕೆಳಗಿನ ಗೊಂಬೆಯೊಡನೆ ಚುಂಬನಾಟ, ನಾಲಿಗೆಯೊಡನೆ ಸರಸ. ಜೊತೆಗೆ ವಿಭಿನ್ನ, ವಿಚಿತ್ರ ಭಂಗಿಗಳಲ್ಲಿ ಲೈಂಗಿಕ ಸಂಪರ್ಕ ಹೊಂದುವ ಆಕಾಂಕ್ಷೆಯೂ ಕೆಲವರಲ್ಲಿರುತ್ತದೆ. ಎಂಥ ಚಳಿ ಇದ್ದರೂ ಐಸ್ ಕ್ಯೂಬ್ ಬಳಸಿ ಸಂಗಾತಿಯ ಸ್ತನದ ಜೊತೆ ಆಟವಾಡಿದರೆ ಕೆಲವರಿಗೆ ಕಾಮ ಗರಿಗೆದರಿಬಿಡುತ್ತದೆ.

ಇವುಗಳಲ್ಲಿ ಕೆಲವು ವಿಚಿತ್ರವಾಗಿ ಕಂಡರೂ ಅಂತಹ ಅಸಹ್ಯಕರವಾಗಿರುವುದಿಲ್ಲ. ಆಗ, ಸಲ್ಲದ ಕಾರಣಗಳನ್ನು ನೀಡಿ ಧುಮುಕಬೇಕಾದ ನೀರಿಗೆ ಅಣೆಕಟ್ಟೆಯೊಡ್ಡುವ ಬದಲು, ಮನಸೋಯಿಚ್ಛೆ ಹರಿಯಲು ಅವಕಾಶ ಮಾಡಿಕೊಡಬೇಕು, ನೀರಿನಲ್ಲಿ ನಾವೂ ನೀರಾದಾಗಲೇ ಆ ಕ್ಷಣದ ಕಾಮನೆಯ ಸುಖವನ್ನು ಅನುಭವಿಸಲು ಸಾಧ್ಯ.

English summary
While having sex, you do several things that can be interesting or annoying to your partner. You either do something that can excite your partner or do some weird activity that can surprise him or her. But you have to allow them as they are and enjoy sex.

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more