ನಿಜ ಹೇಳಬೇಕೆಂದರೆ, ಸಂಗಾತಿಯೊಡನೆ ಅವಿಸ್ಮರಣೀಯ ಅನುಭವ ಪಡೆಯಲು ಬೇಸಿಗೆಯ ರಜಾ ಸಮಯಕ್ಕಿಂತ ಇನ್ನೊಂದು ಸಮಯ ದಕ್ಕಲಾರದು. ಗರಿಷ್ಠ ಮಟ್ಟದಲ್ಲಿ ಬೇಸಿಗೆಯ ಸಮಯವನ್ನು ಸದುಪಯೋಗಪಡಿಸಿಕೊಂಡು ಮಿಲನ ಮಹೋತ್ಸವ ಆಚರಿಸಿಕೊಳ್ಳಲು ಸ್ವಲ್ಪಮಟ್ಟಿಗೆ ಪ್ಲಾನಿಂಗ್ ಬೇಕಾಗುತ್ತದೆ. ಈ ಪ್ರವಾಸವನ್ನೇ ಇನ್ನೊಂದು ಮಧುಚಂದ್ರವೆಂದು ಭಾವಿಸಿ ತಯಾರಿಯಲ್ಲಿ ತೊಡಗಿಕೊಳ್ಳಿ.
ಬೇಸಿಗೆ ಪ್ರವಾಸ : ಮಕ್ಕಳಿದ್ದರೂ ಆಯಿತು ಮಕ್ಕಳನ್ನು ಬಿಟ್ಟಾದರೂ ಆಯಿತು ಬೇಸಿಗೆಯ ರಜಾದಿನಗಳನ್ನು ಕಳೆಯಲು ಅತ್ಯಂತ ರೋಮ್ಯಾಂಟಿಕ್ ಆಗಿರುವ ಸ್ಥಳವನ್ನು ಅಥವಾ ದುಬಾರಿಯಾದರೂ ಆಯಿತು ಒಂದು ಒಳ್ಳೆಯ ರೆಸಾರ್ಟನ್ನು ಆಯ್ದುಕೊಳ್ಳಿ. ಹಚ್ಚಹಸಿರಿನ ಕಾಡು ಅಥವಾ ಸಮುದ್ರತಟವಿರುವ ಸ್ಥಳ ರೋಮಾನ್ಸ್ ಮಾಡಲು ಅತ್ಯಂತ ಸೂಕ್ತವಾದ ಸ್ಥಳಗಳು. ಎತ್ತರದಿಂದ ಧುಮುಕುವ ಸುಖದ ಅಲೆಗಳಿಗೆ ಮೈಯೊಡ್ಡಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಿ.
ಸಿದ್ಧತೆ : ಬಟ್ಟೆಗಳಿಗೆ ಇಂತಹ ಪ್ರವಾಸದಲ್ಲಿ ಅಷ್ಟು ಮಹತ್ವ ಇರುವುದಿಲ್ಲವಾದರೂ, ಅವಳಿಗಿಷ್ಟವಾದ ಬಟ್ಟೆ ನೀವು, ನಿಮಗಿಷ್ಟವಾದ ಬಟ್ಟೆ ಆಕೆ ಹೊಂದಿಸಿಕೊಳ್ಳಲಿ. ದೇಹವನ್ನು ಆದಷ್ಟು ಸುಂದರವಾಗಿ ಮಾಡಿಕೊಳ್ಳಲು ಏನೇನು ಸಲಕರಣೆಗಳು, ಕ್ರೀಮ್ ಇತ್ಯಾದಿಗಳು ಬೇಕೋ ಹೊಂದಿಸಿಕೊಂಡುಬಿಡಿ. ಎರಡು ದೇಹಗಳ ಮಿಲನ ಸಮಯದಲ್ಲಿ ಘಮಲಿನ ನಶೆ ಏರುವಂತೆ ಸಾಮಾನು ಸರಂಜಾಮುಗಳು ನಿಮ್ಮ ಬ್ಯಾಗು ಸೇರಲಿ. ಖಾಸಗಿ ಸ್ಥಳಗಳಲ್ಲಿನ ಕೂದಲು ತೆಗೆದರೆ ಇನ್ನೂ ಒಳ್ಳೆಯದು.
ಸರ್ಪ್ರೈಸ್ ನೀಡಿರಿ : ಬಾಳಸಂಗಾತಿ ಊಹಿಸಿಕೊಳ್ಳಲು ಸಾಧ್ಯವಾಗದಂತಹ ಉಡುಗೊರೆಯನ್ನು ಖರೀದಿಸಿ ಬಚ್ಚಿಟ್ಟುಕೊಂಡಿರಿ. ಆಶ್ಚರ್ಯ ಅಧಿಕವಾದಷ್ಟೂ ಸಂಗಾತಿ ಸುಖವನ್ನು ಮೊಗೆಮೊಗೆದು ಕೊಡುತ್ತಾಳೆ ಅಥವಾ ಕೊಡುತ್ತಾನೆ. ನೋಡಿದರೆ ಪುಟಿದೇಳುವಂತಹ ಒಳಉಡುಪನ್ನು ಗಿಫ್ಟಾಗಿ ನೀಡಿದರೆ ಹೇಗೆ? ಇದೊಂದು ಸಲಹೆಯಷ್ಟೆ. ಆಯ್ಕೆ ಮಾತ್ರ ನಿಮ್ಮದು. ಹಾಗೆಯೆ, ಕೆಲ ಪೋಲಿ ಪುಸ್ತಗಳನ್ನು ಇಟ್ಟುಕೊಂಡಿರಿ.
ಮುನ್ನೆಚ್ಚರಿಕೆ ತೆಗೆದುಕೊಳ್ಳಿ : ಇದು ಸರಸಮಯ ಸಮಯವನ್ನು ಕಳೆಯಲ್ಲಿಕ್ಕಾಗಿಯೇ ನೀವು ಆಯ್ದುಕೊಂಡಿರುವ ಪ್ರವಾಸವಾದರೂ, ಮಕ್ಕಳನ್ನು ಪಡೆಯುವ ಇರಾದೆ ಈಗಲೆ ಇಲ್ಲದಿದ್ದರೆ ಬೇಕಾಗುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಕಾಂಡೋಮ್ ಅಥವಾ ವೈದ್ಯರು ಸೂಚಿಸಿರುವ ಮಾತ್ರೆಗಳನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳಲು ಮರೆಯಬೇಡಿ. ಮರೆತು ಕಾಮಕೇಳಿಯಲ್ಲಿ ತೊಡಗಿ ನಂತರ ಮರುಗಬೇಡಿ. ಈ ಅಡೆತಡೆಗಳೇನೇ ಇದ್ದರೂ ರಜೆಯ ಪ್ರತಿಯೊಂದು ಘಳಿಗೆ ಸದುಪಯೋಗಪಡಿಸಿಕೊಳ್ಳಲು ಮರೆಯಬೇಡಿ.