•  

ಕಾಮಕೇಳಿ : ನಿಮಗೆ ತಿಳಿಯದ ವಿಚಿತ್ರ ಸಂಗತಿಗಳು

Array

ಕಾಮಸೂತ್ರ ಹುಟ್ಟುಹಾಕಿದ ನಾಡಿನಲ್ಲಿ ಕಾಮಕ್ಕೆ ಬರವೆ? ಜಗತ್ತಿನ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆ ಗಳಿಸಿರುವ ಭಾರತದಲ್ಲಿ ಹೆಚ್ಚಾನುಹೆಚ್ಚು ಲೈಂಗಿಕ ಚಟುವಟಿಕೆಗಳು ನಡೆಯುವುದು ನಾಲ್ಕು ಗೋಡೆಗಳ ನಡುವೆಯೆ. ಆದರೆ, ಪಾಶ್ಚಿಮಾತ್ಯ ಸಂಸ್ಕೃತಿಗೆ ಈಗ ಸಾಕಷ್ಟು ತೆರೆದುಕೊಂಡಿರುವುದರಿಂದ ಮಹಾನಗರಗಳ ತೆರೆದುಕೊಂಡಿರುವ ಪ್ರದೇಶಗಳಲ್ಲಿ ಕೂಡ ಕಾಮಕೇಳಿಯನ್ನು ಮುಕ್ತವಾಗಿ ನೋಡಬಹುದಾಗಿದೆ.

ಮದುವೆ ಎಂಬುದು ಗಂಡುಹೆಣ್ಣುಗಳನ್ನು ಬಂಧಿಸುತ್ತದೆ, ಕಾಮ ಆ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎನ್ನುವ ಮಾತು ಭಾರತದಲ್ಲಿ ಕೂಡ ಹಳೆಯದಾಗಿದೆ. ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಲಿವ್-ಇನ್-ಪಾರ್ಟನರ್ ಶಿಪ್ ಸಾಕಷ್ಟು ಚಿಗಿತುಕೊಳ್ಳುತ್ತಿದೆ. ಗಂಡು ಹೆಣ್ಣು ಒಂದಾಗಿರಬೇಕೆಂದರೆ ಮದುವೆಯಾಗಿರಲೇಬೇಕು ಎಂದೇನು ಇಲ್ಲ ಎಂಬ ಸನ್ನಿವೇಶ ನಮ್ಮ ಭಾರತದಲ್ಲಿಯೇ ನಿರ್ಮಾಣವಾಗಿದೆ.

ಎಷ್ಟೇ ನಿಯಂತ್ರಣಗಳನ್ನು ಒಡ್ಡಿದ್ದರೂ ಪಾರ್ಕುಗಳಲ್ಲಿ, ಕಲ್ಲಬಂಡೆಗಳ ಹಿಂದುಗಡೆ, ಹೋಟೆಲುಗಳ ರೂಮುಗಳಲ್ಲಿ, ರೆಸಾರ್ಟುಗಳಲ್ಲಿ, ಕೆರೆಯ ದಂಡೆಯ ಮೇಲೆ, ಗುಡ್ಡಬೆಟ್ಟಗಳ ಕವಲುಗಳಲ್ಲಿ ಮುಕ್ತವಾಗಿ ಕಾಮಕೇಳಿ ನಡೆಯುತ್ತಿದೆ. ಆದರೆ, ಸಣ್ಣಪಟ್ಟಣಗಳಲ್ಲಿ, ಸಣ್ಣ ಊರುಗಳಲ್ಲಿ, ಹಳ್ಳಿಗಳಲ್ಲಿ ಪರಿಸ್ಥಿತಿ ಬೇರೆಯೇ ಆಗಿರುತ್ತದೆ. ಅವಿಭಕ್ತ ಕುಟುಂಬಗಳು ಅಷ್ಟು ಮುಕ್ತ ಅವಕಾಶವನ್ನು ಒದಗಿಸುವುದಿಲ್ಲ.

ಅಂತೇನಾದರೂ ಅಂದುಕೊಂಡರೆ ಅದೂ ತಪ್ಪು. ಇಂಡಿಯಾ ಟುಡೆ ಮತ್ತು ನೀಲ್ಸನ್ ನಡೆಸಿದ 'ಬಿಟ್ವೀನ್ ದಿ ಶೀಟ್ಸ್ ಆಫ್ ಸ್ಮಾಲ್ ಟೌನ್ ಇಂಡಿಯಾ' ಸಮೀಕ್ಷೆಯಲ್ಲಿ ವಿಸ್ಮಯಕಾರಿಯಾದ ಮತ್ತು ಈ ಪ್ರದೇಶಗಳ ಬಗ್ಗೆ ಹೆಚ್ಚಾಗಿ ತಿಳಿಯದ ಅನೇಕ ಸಂಗತಿಗಳು ಬಹಿರಂಗವಾಗಿವೆ. ಒಟ್ಟು ಹನ್ನೆರಡು ಊರುಗಳಲ್ಲಿ ನಡೆಸಿದ ಸಮೀಕ್ಷೆ ಅಚ್ಚರಿಯ ಸಂಗತಿಗಳನ್ನು ತೆರೆದಿಟ್ಟಿದೆ. ಅವು ಕೆಳಗಿನಂತಿವೆ.

ಅತಿ ಹೆಚ್ಚು ಲೈಂಗಿಕ ತೃಪ್ತರು ಇರುವ ಊರು

ಅತಿ ಹೆಚ್ಚು ಲೈಂಗಿಕ ತೃಪ್ತರು ಇರುವ ಊರು

ಈಶಾನ್ಯ ಭಾರತದ ಮಿಜೋರಾಂ ರಾಜಧಾನಿ ಐಜಾಲ್‌ನಲ್ಲಿ ಸಮೀಕ್ಷೆ ನಡೆಸಿದ ಎಲ್ಲ ಪ್ರದೇಶಗಳಿಗಿಂತ ಹೆಚ್ಚಿನ ದಂಪತಿಗಳು ಲೈಂಗಿಕ ತೃಪ್ತಿ ಹೊಂದಿದ್ದಾರೆ. ಅಲ್ಲಿ ಶೇ.79ರಷ್ಟು ಗಂಡು ಹೆಣ್ಣುಗಳು ಕೂಡಿಕೆಯಲ್ಲಿ ಆನಂದ ಹೊಂದುತ್ತಾರೆ. ಸಮುದ್ರಮಟ್ಟದಿಂದ 3715 ಅಡಿ ಎತ್ತರವಿರುವದ ಐಜಾಲ್ ಪ್ರವಾಸಿಗರ ಸ್ವರ್ಗ ಮಾತ್ರವಲ್ಲ, ಅಲ್ಲಿ ನೆಲೆಸಿರುವ ದಂಪತಿಗಳಿಗೂ ಸ್ವರ್ಗಸುಖವನ್ನು ತೆರೆದಿಟ್ಟಿದೆ.

ಬಹುಸಂಗಾತಿಯ ಆಯ್ಕೆ ನೋ ಪ್ರಾಬ್ಲಂ

ಬಹುಸಂಗಾತಿಯ ಆಯ್ಕೆ ನೋ ಪ್ರಾಬ್ಲಂ

ಐಜಾಲ್‌ನ ಇನ್ನೊಂದು ವಿಶೇಷತೆಯೆಂದರೆ, ಗಂಡು ಹೆಣ್ಣುಗಳು ತಮ್ಮ ಸಂಗಾತಿಯನ್ನು ತಾವೇ ನೇರವಾಗಿ ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. ಇಲ್ಲಿ ಲಿವ್-ಇನ್-ಪಾರ್ಟನರ್‌ಶಿಪ್ ಸಂಖ್ಯೆಯೂ ಉಳಿದೆಲ್ಲ ಊರುಗಳಿಗಿಂತ ಹೆಚ್ಚು. ಒಂದಕ್ಕಿಂತ ಹೆಚ್ಚು ಸಂಗಾತಿಯನ್ನು ಏಕಕಾಲದಲ್ಲಿ ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯವೂ ಇಲ್ಲಿ ಅಧಿಕವಾಗಿದೆ. ಇದನ್ನು ಅವರು ಅನೈತಿಕ ಸಂಬಂಧ ಅಂತ ಕರೆಯುವುದಿಲ್ಲ.

ಲೈಂಗಿಕತೆಗೂ ಭಾವುಕತೆಗೂ ಸಂಬಂಧವೇ ಇಲ್ಲ

ಲೈಂಗಿಕತೆಗೂ ಭಾವುಕತೆಗೂ ಸಂಬಂಧವೇ ಇಲ್ಲ

ಈ ಸಮೀಕ್ಷೆಯಲ್ಲಿ ಭಾಗಿಯಾದ ಶೇ.58ರಷ್ಟು ಮಂದಿ ಲೈಂಗಿಕತೆಗೂ ಭಾವುಕತೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಲೈಂಗಿಕ ಕ್ರಿಯೆ ನಡೆಯುವಾಗ ಹೆಚ್ಚಾಗಿ ಒಬ್ಬರ ಮುಖವನ್ನೊಬ್ಬರು ನೋಡುವುದು ಅಪರೂಪವಾದ್ದರಿಂದ ಕಾಮಕೇಳಿ ನಡೆಯುವಾಗ ಕಾಮಕೇಳಿಗೆ ಮಾತ್ರ ಅಲ್ಲಿ ಸ್ಥಾನ. ಭಾವುಕತೆ ಏನಿದ್ದರೂ ಬಟ್ಟೆಯೊಡನೆ ಕಳಚಿಟ್ಟು ಬರಬೇಕಷ್ಟೆ.

ನನ್ನ ಹೆಂಡ್ತಿ ನಿನಗೆ, ನಿನ್ನ ಹೆಂಡ್ತಿ ನನಗೆ!

ನನ್ನ ಹೆಂಡ್ತಿ ನಿನಗೆ, ನಿನ್ನ ಹೆಂಡ್ತಿ ನನಗೆ!

ಇದು ನಂಬಲು ಅಸಾಧ್ಯವಾದರೂ ನಂಬಲೇಬೇಕಾಗಿರುವಂತಹ ಸಂಗತಿ. ಪಶ್ಚಿಮ ಬಂಗಾಳ ರಾಜ್ಯದ ಅಸನಸೋಲ್ ಎಂಬ ಪಶ್ಚಿಮ ಬಂಗಾಳದ ಎರಡನೇ ಅತಿದೊಡ್ಡ ನಗರದಲ್ಲಿ ಸಂಗಾತಿಗಳನ್ನು ವಿನಿಮಯ ಮಾಡಿಕೊಳ್ಳುವುದು ನಿಷಿದ್ಧ ಸಂಗತಿಯೇ ಅಲ್ಲ. ಹೆಂಡತಿಯರನ್ನು ಲೈಂಗಿಕ ಚಟುವಟಿಕೆಗಾಗಿ ವಿನಿಮಯ ಮಾಡಿಕೊಳ್ಳುವುದು ಪ್ರತಿದಿನ ಗಂಡುಹೆಣ್ಣು ಕಾಮಕೇಳಿ ನಡೆಸಿದಷ್ಟೇ ಸಹಜವಂತೆ. ಏನು ಕಾಲ ಬಂತಪ್ಪ?

ಸಂಗಾತಿ ಬಟ್ಟೆ ಬಿಚ್ಚುವುದು ನೋಡುವುದೇ ಆನಂದ

ಸಂಗಾತಿ ಬಟ್ಟೆ ಬಿಚ್ಚುವುದು ನೋಡುವುದೇ ಆನಂದ

ಕಣ್ಣೆದುರು ಸಂಗಾತಿ ಬಟ್ಟೆ ಬಿಚ್ಚುವುದು ಅಸಹಜವಾದ ಕ್ರಿಯೆಯೇನಲ್ಲ. ಇದು ಎಲ್ಲ ದಾಂಪತ್ಯಗಳಲ್ಲಿ ನಡೆಯುವ ವಿದ್ಯಮಾನವೇ. ಆದರೆ, ಮಧ್ಯಪ್ರದೇಶದ ರತ್ಲಮ್ ಎಂಬ ಊರಿನಲ್ಲಿ (ಜಬ್ ವಿ ಮೆಟ್ ಚಿತ್ರೀಕರಣಗೊಂಡ ಸ್ಥಳ) ಕಾಮಕೇಳಿ ನಡೆಸುವುದಕ್ಕಿಂತ ಹೆಣ್ಣು ತನ್ನ ಕಣ್ಣಮುಂದೆ ನಗ್ನವಾಗುವುದನ್ನೇ ನೋಡಿ ಕಾಮಪರವಶರಾಗುವಲ್ಲಿ ಹೆಚ್ಚಿನ ಆತ್ಮತೃಪ್ತಿ ಹೊಂದುತ್ತಾರಂತೆ. ಅಷ್ಟಕ್ಕೇ ನಿಲ್ಲಿಸ್ತಾರಾ ಮುಂದೇನಾದ್ರೂ ಮಾಡ್ತಾರಾ ಅಂತ ಮಾತ್ರ ಕೇಳಬೇಡಿ.

ಸಂಭೋಗ ತಪ್ಪಿಸಲು ತಲೆನೋವಿನ ಕಾರಣ

ಸಂಭೋಗ ತಪ್ಪಿಸಲು ತಲೆನೋವಿನ ಕಾರಣ

ಸಂಗಾತಿಯೇ ತಲೆನೋವೋ, ಸಂಗಾತಿಯೊಡನೆ ಸಮಾಗಮ ಮಾಡುವುದು ತಲೆನೋವೋ ಅಥವಾ ನಿಜವಾಗ್ಲೂ ತಲೆನೋವೋ... ಸೇಲಂನಲ್ಲಿ ಜೀವನಸಂಗಾತಿಯೊಡನೆ ಸಂಭೋಗ ನಡೆಸುವ ಸಂದರ್ಭ ಬಂದಾಗ ತಲೆನೋವಿನ ಕಾರಣ ಹೇಳಿ ತಪ್ಪಿಸಿಕೊಳ್ಳುವವರು ಜಾಸ್ತಿಯಿದ್ದಾರಂತೆ. ಇವರೆಂಥ ವಿಚಿತ್ರ ವ್ಯಕ್ತಿಗಳು ಅಂತ ಅನಿಸಲ್ವಾ?

ಕಾಮೋತ್ತೇಜಕವಾಗಿ ಆಟಿಕೆ ಬಳಕೆ

ಕಾಮೋತ್ತೇಜಕವಾಗಿ ಆಟಿಕೆ ಬಳಕೆ

ಕೇರಳದ ಕೊಟ್ಟಾಯಂನಲ್ಲಿ ಶೇ.9ರಷ್ಟು ಜನರು ಮಿಲನ ಮಹೋತ್ಸವ ನಡೆಸುವಾಗ ಕಾಮೋತ್ಕಟತೆ ತಲುಪಲು ಸಂಗಾತಿಯ ಸಹಾಯ ಪಡೆದುಕೊಳ್ಳದೆ ಕಾಮದ ಆಟಿಕೆಯನ್ನು ಜಾಸ್ತಿ ಬಳಸುತ್ತಾರಂತೆ. ಕೇಳಿಯ ಸಮಯದಲ್ಲಿ ಸಂಭೋಗ ಸರಾಗವಾಗಿ ಆಗಲು ತೆಂಗಿನೆಣ್ಣೆಯನ್ನೂ ಬಳಸ್ತಾರಂತೆ!

ಒಂದೇ ಟೈಮಲ್ಲಿ ಒಬ್ಬರಿಗಿಂತ ಹೆಚ್ಚು

ಒಂದೇ ಟೈಮಲ್ಲಿ ಒಬ್ಬರಿಗಿಂತ ಹೆಚ್ಚು

ಮಧ್ಯಪ್ರದೇಶದ ರತ್ಲಮ್‌ನಲ್ಲಿ ನಡೆಯುವ ಇಂಥ ಚಟುವಟಿಕೆ ಕೇಳಿದರೆ (ನೋಡಲು ಸಾಧ್ಯವಿಲ್ಲ) ಏನು ಅನ್ನುತ್ತೀರೋ? ಒಂದೇ ಹಾಸಿಗೆಯಲ್ಲಿ ಹೆಂಡತಿ ಪಕ್ಕದಲ್ಲಿರುವಾಗಲೇ ಮತ್ತೊಬ್ಬಳನ್ನು ಸೇರಿಸಿಕೊಂಡರೆ ಹೆಂಡತಿಗೆ ಯಾವುದೇ ತೊಂದರೆ ಇಲ್ಲವಂತೆ. ಹಾಗೆಯೆ, ಇಲ್ಲಿ ಸಲಿಂಗ ಕಾಮಿಗಳ ಸಂಖ್ಯೆಯೂ ಹೆಚ್ಚು.

ಗುಂಟೂರಿನ ಮೆಣಸಿನಕಾಯಿಗಿಂತ ಇದು ಸ್ಪೈಸಿ

ಗುಂಟೂರಿನ ಮೆಣಸಿನಕಾಯಿಗಿಂತ ಇದು ಸ್ಪೈಸಿ

ಆಂಧ್ರಪ್ರದೇಶದ ಗುಂಟೂರಿನಲ್ಲಿ ಲಿವ್-ಇನ್-ರಿಲೇಶನ್‌ಶಿಪ್ಪೂ ಬೇಡ, ಮದುವೆಯೂ ಬೇಡ, ಒಂದೇ ಒಂದು ರಾತ್ರಿ ಮಜಾ ಮಾಡಿ ಬಂಧವನ್ನು ಕಳಚಿಕೊಳ್ಳುವವರ ಸಂಖ್ಯೆ ಅಧಿಕವಂತೆ.

 
English summary
Do you think sex is still a dirty game in India, the country where Kamasutra was invented? Think twice. A survey conducted by India Today and Nielsen by thrown light on many interesting facts, which you did not know, about sex in smaller cities in India.
Story first published: Wednesday, December 5, 2012, 15:00 [IST]
Please Wait while comments are loading...

Get Notifications from Kannada Indiansutras