ಒಂದು ಕಾಲವಿತ್ತು ಹಸ್ತ ಮೈಥುನವೆಂದರೆ ಭಯ, ಇದನ್ನು ರೂಢಿಸಿಕೊಂಡರೆ ಆರೋಗ್ಯ ವಿಷಮಿಸುತ್ತದೆ, ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ, ಗಂಡಸುತನ ಕಳೆದುಕೊಂಡು ಯಾವುದಕ್ಕೂ ಕೆಲಸಕ್ಕೆ ಬಾರದಂತೆ ಆಗುತ್ತೀವಿ ಎಂದು ತಪ್ಪು ತಪ್ಪಾಗಿ ಕಲ್ಪಿಸಿಕೊಳ್ಳಲಾಗಿತ್ತು. ಆದರೆ ಇಂದು ಮುಖ್ಯವಾಗಿ ಯುವಕರಲ್ಲಿ ಹಸ್ತಮೈಥುನ ಒಂದು ಹವ್ಯಾಸವಾಗಿಬಿಟ್ಟಿದೆ. ಲೈಂಗಿಕ ಸುಖ ಅನುಭವಿಸಲು ನಿರಪಾಯಕಾರಿಯಾದ ಸುಲಭೋಪಾಯ ಎಂದರೆ ಹಸ್ತಮೈಥುನ.
ಹಸ್ತಮೈಥುನದಿಂದ ಲೈಂಗಿಕ ಉದ್ವೇಗವನ್ನು ಕಳೆದುಕೊಳ್ಳುವ ಜತೆಗೆ ಸಂತೋಷವನ್ನು ಗಳಿಸಿಕೊಳ್ಳಬಹುದು. ಹೆಸರಾಂತ ವೈದ್ಯರು ಕೂಡಾ ಯುವಕರಿಗೆ ಈ ಸಲಹೆಯನ್ನು ನೀಡುವುದನ್ನು ನಾವು ಅನೇಕ ಸಲ ಕೇಳಿದ್ದೇವೆ, ಓದಿದ್ದೇವೆ. ಹಸ್ತಮೈಥುನ ಮಾಡಿಕೊಳ್ಳುವುದರಿಂದ ಲೈಂಗಿಕ ಸುಖ ಪಡೆಯಬಹುದು. ಇದನ್ನು ಸಂಪೂರ್ಣವಾಗಿ ಅನುಭವಿಸಬೇಕಾದರೆ ಸ್ವ ಯಂ ಪ್ರೇರಣೆ ಇಲ್ಲವೇ ಕಾಮವನ್ನು ಉದ್ರೇಕಿಸುವ ಸಾಹಿತ್ಯ, ನಗ್ನ ಚಿತ್ರಗಳ ಮೂಲಕ ಕಾಮಾಸಕ್ತಿಯನ್ನು ಕೆರಳಿಸಿಕೊಳ್ಳಬಹುದು. ನಂತರ ಹಸ್ತುಮೈಥುನ ಮಾಡಿಕೊಂಡು ತೃಪ್ತಿ ಹೊಂದಬಹುದು. ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಚಿಕಿತ್ಸೆಗಳು ಇಷ್ಟೇಲ್ಲಾ ಮುಂದುವರೆದಿದ್ದರೂ ಅನೇಕ ವಿದ್ಯಾವಂತರು ಲೈಂಗಿಕ ಜ್ಞಾನದ ಕೊರತೆಯಿಂದ ಹಸ್ತಮೈಥುನ ಮಾಡಿಕೊಳ್ಳಲು ಹೆದರುತ್ತಾರೆ. ಯಾಕೆಂದರೆ ಅವರಲ್ಲಿ ಕೆಲ ಮೂಢನಂಬಿಕೆಗಳು ತಲೆಯಲ್ಲಿ ತುಂಬಿಕೊಂಡಿರುತ್ತವೆ. ಹಾಗೆಯೇ ಮತ್ತೆ ಕೆಲವರು ಉದ್ರೇಕದ ಕೊರತೆಯಿಂದ ಹಸ್ತಮೈಥುನ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಮೊದಲು ತಿಳಿದುಕೊಳ್ಳಬೇಕಾದ ಅಂಶವೆಂದರೆ, ಹಸ್ತಮೈಥುನ ಮಾಡಿಕೊಳ್ಳುವುದು ತಪ್ಪಲ್ಲ. ಇದರಿಂದ ಯಾವುದೇ ತೊಂದರೆಯಾಗಲಿ, ಆರೋಗ್ಯ ಸಮಸ್ಯೆಯಾಗಲಿ ಉಂಟಾಗಲು ಸಾಧ್ಯವಿಲ್ಲ. ಹಸ್ತಮೈಥುನದಿಂದ ದಾಂಪತ್ಯ ಜೀವನದಲ್ಲಿ ಹಲವಾರು ಲೈಂಗಿಕ ಸಮಸ್ಯೆಗಳು ಎದುರಾಗಲಿದೆ ಎಂದು ಹೇಳುವವರ ಮಾತು ಸಹ ಮೂರ್ಖತನದ ಪರಮಾವಧಿ. ಸಂತಾನೋತ್ಪತ್ತಿ ವೃದ್ಧಿಗೆ ವೃಷಣಗಳು ವೀರ್ಯವನ್ನು ಪ್ರತಿ ನಿಮಿಷ ಉತ್ಪಾದನೆ ಮಾಡುತ್ತಿರುತ್ತವೆ. ಇದು ಪ್ರಕೃತಿ ಸಹಜ ಕೂಡಾ. ಆದ್ದರಿಂದ ಯಾವ ಭಯ, ಹೆದರಿಕೆಯಿಲ್ಲದೆ ಹಸ್ತಮೈಥುನದಲ್ಲಿ ತೊಡಗಿಕೊಳ್ಳ ಬಹುದು. ಉತ್ಕಟ ಬಯಕೆಯಾದಲ್ಲಿ ವೀರ್ಯವನ್ನು ಸ್ಖಲಿಸಲು ಪರ್ಯಾಯ ಮಾರ್ಗವಾಗಿ ಹಸ್ತಮೈಥುನದ ಮೊರೆಹೋಗುವುದರಲ್ಲಿ ತಪ್ಪೇನಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇನ್ನೊಂದು ಹಸ್ತಮೈಥುನಕ್ಕೆ ಹೆಣ್ಣು ಗಂಡು ಎಂಬ ಭೇಧಭಾವವಿಲ್ಲ. ಹಸ್ತಮೈಥುನ ಮಾಡಿಕೊಳ್ಳಲು ಮಹಿಳೆಯರಿಗಾಗಿಯೇ ಕೆಲ ಸಾಧನೆಗಳ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ರೀತಿಯ ಸಾಧನಗಳ ಬಳಕೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದೆ.
ಹಸ್ತಮೈಥುನ ಬಗ್ಗೆ ಕೆಲ ಗ್ರಾಮೀಣ ಪ್ರದೇಶದಲ್ಲಿ ಕೆಲ ಮೂಢನಂಬಿಕೆಗಳಿವೆ. ಅಂತಹ ಯಾವುದೇ ನಂಬಿಕೆಗಳಿಗೆ ಕಿವಿಗೊಡುವುದು ಸರಿಯಲ್ಲ. ಲೈಂಗಿಕತೆ ಹೆಚ್ಚಾದಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದು ಎಲ್ಲರಿಗೂ ಕ್ಷೇಮ. ಕಾರಣವೆಂದರೆ ಅನ್ಯ ಮಹಿಳೆಯೊಂದಿಗೆ ಲೈಂಗಿಕ ಸಂಬಂಧದಿಂದ ಆಗುವ ಆನಾಹುತ, ತೆರೆಬೇಕಾದ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕಾಗಿದ್ದು ಅವಶ್ಯವಾಗಿದೆ. ಯಾಕೆಂದರೆ ಅನ್ಯ ಸ್ತ್ರೀ ಅಥವಾ ಪುರುಷನೊಂದಿಗೆ ಸಂಬಂಧವಿಟ್ಟುಕೊಂಡಲ್ಲಿ ಹಲವಾರು ಲೈಂಗಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಸಮಸ್ಯೆ ನಿವಾರಣೆಗೆ ಹಸ್ತಮೈಥುನ ಸೂಕ್ತ ಎಂಬುದನ್ನು ಮರೆಯಬೇಡಿ.
ಒಟ್ಟಿನಲ್ಲಿ ಹಸ್ತಮೈಥುನದ ಉದ್ದೇಶ ಲೈಂಗಿಕ ಸುಖವನ್ನು ಅನುಭವಿಸುವುದು ಅನ್ನುವುದನ್ನು ಮರೆಯಬೇಡಿ. ಹಸ್ತಮೈಥುನವನ್ನು ಯಾವುದೇ ಕಾರಣಕ್ಕು ಹತ್ತಿಕ್ಕಲು ಸಾಧ್ಯವಿಲ್ಲ. ಮನಸ್ಸಿನಲ್ಲಿ ಉದ್ಭವಿಸುವ ಲೈಂಗಿಕ ವಾಂಛೆಗಳನ್ನು ಹೊರಗೆಡಹಲು ಪ್ರಕೃತಿ ಪ್ರಸಾದಿಸಿದ ವರ ಹಸ್ತಮೈಥುನ. ಇದಕ್ಕೆ ಹೆಣ್ಣು ಗಂಡೆಂಬ ಭೇಧಭಾವವಿಲ್ಲ. ಲೈಂಗಿಕ ಹಾಗೂ ಮಾನಸಿಕ ತಾಕಲಾಟಗಳನ್ನು ಹಸ್ತಮೈಥುನ ಸರಿದೂಗಿಸುತ್ತದೆ. ಮನಸ್ಸಿನಲ್ಲಿ ಮೂಡುವ ಅತಿಯಾದ ಲೈಂಗಿಕ ವಾಂಛೆಗಳನ್ನು ಅದುಮಿಟ್ಟಿಕೊಂಡರೆ ಮತ್ತಷ್ಟು ಮಾನಸಿಕ ಸಂಘರ್ಷಗಳಿಗೆ ಎಡೆಮಾಡಿಕೊಡುತ್ತದೆ. ಕೊನೆಯದಾಗಿ, ಅತಿಯಾದರೆ ಅಮೃತವೂ ವಿಷ ಎಂಬಂತೆ ಹಸ್ತಮೈಥುನವೇ ದೊಡ್ಡ ಗೀಳಾಗಿ ಪರಿಣಮಿಸಿ ಬಿಟ್ಟರೆ ಕಷ್ಟ ಎಂಬುದನ್ನು ಮರೆಯದೆ ನೆನಪಿನಲ್ಲಿಡಿ.