ಹೆಂಗಸರು ಹಾಗೂ ಗಂಡಸರಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಿದಾಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂತು. ಶೇ.46 ರಷ್ಟು ಮಹಿಳೆಯರು ಹಾಗೂ ಶೇ. 30 ರಷ್ಟು ಪುರುಷರು ಇಂಟರ್ ನೆಟ್ ಕಡೆಗೆ ಒಲವು ತೋರಿದ್ದಾರೆ. ಸೆಕ್ಸ್ ಬದಲು ಆ ಸಮಯದಲ್ಲಿ ಸರ್ಫಿಂಗ್ ಮಾಡಿ ಕಾಲ ಕಳೆಯುವುದಾಗಿ ಹೇಳಿದ್ದಾರೆ. ಅದರಲ್ಲೂ ಒಟ್ಟಾರೆ ಶೇ. 65 ಮಂದಿ ಇಂಟರ್ ನೆಟ್ ಇಲ್ಲದೆ ಜೀವನ ವ್ಯರ್ಥ ಎಂದು ಸಾರಿದ್ದಾರೆ.
ಸೆಕ್ಸ್ ಹಾಗೂ ನೆಟ್ ಸರ್ಫಿಂಗ್ ವಿಷಯ ಬಂದಾಗ ಸೆಕ್ಸ್ ಅನ್ನು ಬದಿಗೊತ್ತುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಅಚ್ಚರಿಯ ಅಂಶ ಎಂದು ಇಂಟೆಲ್ ಸಂಸ್ಥೆ ಹೇಳಿದೆ. ಈ ಸಮೀಕ್ಷೆ ನಡೆಸಲು ಇಂಟೆಲ್ ಸಂಸ್ಥೆ , ಹ್ಯಾರೀಸ್ ಇಂಟರ್ಯಾಕ್ಟೀವ್ ಸಂಸ್ಥೆ ಸಹಾಯ ಪಡೆದಿತ್ತು.
18-34 ವರ್ಷ ವಯಸ್ಸಿನ ಶೇ. 49 ರಷ್ಟು ಮಹಿಳೆಯರು ಇಂಟರ್ ನೆಟ್ ಗೆ ಮತ ನೀಡಿದ್ದಾರೆ. ವಯಸ್ಸಾದವರಿಗೆ ಇಂಟರ್ ನೆಟ್ ವ್ಯಾವೋಹ ಇನ್ನೂ ಹೆಚ್ಚಾಗಿದೆ . 35-44 ವಯಸ್ಸಿನ ಶೇ. 52 ರಷ್ಟು ಜನ ಮಹಿಳೆಯರು ನೆಟ್ ಇಲ್ಲದೆ ನಾವಿಲ್ಲ ಎಂದಿದ್ದಾರೆ. ಆದರೆ ಗಂಡಸರಲ್ಲಿ ಶೇ. 39(18-34 ವರ್ಷ ವಯಸ್ಸಿನ) ಹಾಗೂ ಶೇ. 23(35-44 ವಯಸ್ಸಿನ ) ಜನ ಮಾತ್ರ ಇಂಟರ್ ನೆಟ್ ನತ್ತ ಒಲವು ತೋರಿದ್ದಾರೆ. ಇದೇ ರೀತಿ ಕೇಬಲ್ ಟಿವಿ(ಶೇ. 39), ಹೊರಾಂಗಣ ವಿಹಾರ(ಶೇ.20), ಶಾಪಿಂಗ್(ಶೇ. 18), ಜಿಮ್ ಗೆ ಹೋಗುವವರು(ಶೇ.10) ಪಟ್ಟಿ ಕೂಡ ಸಿದ್ಧವಿದೆ.
(ಸೂ: ಈ ಸಮೀಕ್ಷೆ ಅಮೆರಿಕದಲ್ಲಿ ನಡೆಸಿದ್ದು, ಸದ್ಯಕ್ಕೆ ಅಲ್ಲಿಗೆ ಮಾತ್ರ ಸೀಮಿತ. ಪೂರ್ಣ ಪಟ್ಟಿ ಬಿಡುಗಡೆಗೆ ಕಾಯಬೇಕು)