•  

ಸೆಕ್ಸ್.ಕಾಂ ಡೊಮೇನ್ ಹೆಸರು ಮಾರಾಟಕ್ಕಿದೆ

Array
Sex.com domain name if on sale
 
ನ್ಯೂ ಯಾರ್ಕ್, ಮಾ. 10 : ಅತ್ಯಂತ ಬೇಡಿಕೆಯ ಮತ್ತು ಅತ್ಯಧಿಕ ಮೌಲ್ಯವುಳ್ಳ ಸೆಕ್ಸ್.ಕಾಂ ಡೊಮೇನ್ ಹೆಸರನ್ನು ಮಾರಾಟಕ್ಕಿಡಲಾಗಿದ್ದು, ಮಾರ್ಚ್ 18ರಂದು ಅದರ ಹರಾಜು ನಡೆಯಲಿದೆ. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ವೆಬ್ ಲೋಕದಲ್ಲಿ ಭಾರೀ ಸಂಚಲನ ಉಂಟಾಗಿದೆ.

ಈ ಡೊಮೇನನ್ನು ಕೊಳ್ಳಲು ಮುಂದಾಗುವ ಮುನ್ನ ಹರಾಜಿನ ಆರಂಭಿಕ ಬೆಲೆಯನ್ನೊಮ್ಮೆ ನೋಡಿಬಿಡಿ. ಬರೀ ಹತ್ತು ಲಕ್ಷ ಡಾಲರ್ ಆರಂಭಿಕ ಬೆಲೆಯಿಂದ ಹರಾಜು ಪ್ರಾರಂಭವಾಗಲಿದೆ. ನ್ಯೂ ಯಾರ್ಕ್ ನಲ್ಲಿರುವ ವಿಂಡೆಲ್ಸ್ ಮಾರ್ಕ್ಸ್ ಲೇನ್ ಅಂಡ್ ಮಿಟೆಂಡಾರ್ಫ್ ಎಲ್ಎಲ್ ಪಿ ಸಂಸ್ಥೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಗ್ರಾಂಟ್ ಮೀಡಿಯಾ ಮುಖ್ಯಸ್ಥ ಮತ್ತು ಡೇಟಿಂಗ್ ಅಂತರ್ಜಾಲ ತಾಣ match.comಅನ್ನು ಪ್ರಾರಂಭಿಸಿದ್ದ ಗ್ಯಾರಿ ಕ್ರೆಮೆನ್ ಅವರು 1994ರಲ್ಲಿ sex.com ಡೊಮೇನನ್ನು ನೊಂದಾಯಿಸಿದ್ದರು. ಸರ್ಚ್ ಇಂಜಿನ್ನಿನಲ್ಲಿ ಅತಿ ಹೆಚ್ಚು ಹುಡುಕಿದ ಪದದ ಡೊಮೇನ್ ಹೆಸರನ್ನು 1996ರಲ್ಲಿ 140 ಲಕ್ಷ ಡಾಲರಿಗೆ ಮಾರಾಟ ಮಾಡಲಾಗಿತ್ತು.

ಅತಿ ಸರಳ ಹೆಸರು ಹೊಂದಿರುವ ಆದರೆ ಅಷ್ಟೇ ಲಾಭ ತರುವಂಥ ಡೊಮೇನ್ ಹೆಸರನ್ನು ಕೊಳ್ಳಲು ಭಾರೀ ಪೈಪೋಟಿ ನಡೆಯಲಿದೆ ಎಂಬುದು ಇಂಟರ್ನೆಟ್ ತಜ್ಞರ ಅಭಿಮತ. ಕಲ್ಪನೆಗೂ ಮೀರಿದ ಬೆಲೆಗೆ ಸೆಕ್ಸ್.ಕಾಂ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ. 2008ರಲ್ಲಿ www.pizza.com ದಾಖಲೆಯ 25 ಲಕ್ಷ ಡಾಲರಿಗೆ ಮರಾಟವಾಗಿತ್ತು.

Story first published: Wednesday, March 10, 2010, 15:46 [IST]

Get Notifications from Kannada Indiansutras