2006ರಲ್ಲಿ ಆದ ಅಪಹರಣಗಳಿಗೆ ಹೋಲಿಸಿದರೆ 2007ರಲ್ಲಿ ಪುರುಷರ ಅಪಹರಣದ ಸಂಖೆಯ ಶೇ. 40ರಷ್ಟು ಹೆಚ್ಚಿದೆ. 2007ರಲ್ಲಿ 67 ಪುರುಷರನ್ನು ಲೈಂಗಿಕತೆಗಾಗಿ ಮತ್ತು ವೇಶ್ಯಾವಾಟಿಕೆಗಾಗಿ ಅಪಹರಿಸಲಾಗಿತ್ತು ಎಂಬ ಆಘಾತಕಾರಿ ಅಂಕಿ-ಅಂಶಗಳನ್ನು ಎನ್‌ಸಿಆರ್‌ಬಿ ನೀಡಿದೆ.
ಮಹಿಳೆಯರ ಅಪಹರಣಗಳಂತೂ ಅವ್ಯಾತವಾಗಿ ನಡೆದಿವೆ. ಇತ್ತೀಚೆಗೆ ನೀಡಿರುವ ವರದಿಯ ಪ್ರಕಾರ ಒಟ್ಟು 2586 ಮಹಿಳೆಯರನ್ನು ಕಾಮತೃಷೆ ತೀರಿಸಿಕೊಳ್ಳಲು ಅಪಹರಿಸಲಾಗಿದೆ. ಅವರಲ್ಲಿ 50 ಮಹಿಳೆಯರ ವಯಸ್ಸು 50 ದಾಟಿತ್ತು ಎಂಬುದು ನಿಜಕ್ಕೂ ದಿಗಿಲುಂಟು ಮಾಡುವಂತಿದೆ.
'ಕ್ರೈಂ ಇನ್ ಇಂಡಿಯಾ 2007' ಎಂಬ ವರದಿಯಲ್ಲಿ ರಾಷ್ಟ್ರೀಯ ಕ್ರೈಂ ರೆಕಾರ್ಡ್ಸ್ ಬ್ಯೂರೋ ಲೈಂಗಿಕತೆಗಾಗಿ ಅಪಹರಣ ಕುರಿತಂತೆ ಭಾರತದಲ್ಲಾಗುತ್ತಿರುವ ಅಪರಾಧದ ವರದಿಯನ್ನು ಬಹಿರಂಗಪಡಿಸಿದೆ. 2006ಕ್ಕೆ ಹೋಲಿಸಿದರೆ 2007ರಲ್ಲಿ ಲೈಂಗಿಕತೆಗಾಗಿ ಮಹಿಳೆಯರ ಅಪಹರಣಗಳು ಕಡಿಮೆಯಾಗಿವೆ.
18ರಿಂದ 30 ವರ್ಷದೊಳಗಿನ ಮಹಿಳೆಯರು ಹೆಚ್ಚು ಬಲಿಪಶುಗಳಾಗುತ್ತಿದ್ದಾರೆ. ಇವರ ಸಂಖ್ಯೆಯೇ ಶೇ. 65ರಷ್ಟಿದೆ. ಅಪಹರಿಸಲಾದ 1608 ಮಹಿಳೆಯರಲ್ಲಿ 264 ಜನರನ್ನು ವೇಶ್ಯಾವಾಟಿಕೆಗೆ ದೂಡಲಾಗಿದೆ. ಐವರು ಪುರುಷರನ್ನೂ ವೇಶ್ಯಾವಾಟಿಕೆಗೆ ದೂಡಲಾಗಿದೆ.
ಇದೆಲ್ಲಕ್ಕಿಂತ ಆಘಾತಕಾರಿ ಸಂಗತಿಯೆಂದರೆ, ಮಹಿಳೆಯರನ್ನೇ ಆಗಲಿ, ಪುರುಷರನ್ನೇ ಆಗಲಿ ಲೈಂಗಿಕತೆಗಾಗಿ ಅಪಹರಿಸಿದ ಒಂದೇ ಒಂದು ಪ್ರಕರಣವೂ ಭಾರತದಲ್ಲಿ ದಾಖಲಾಗಿಲ್ಲ. ಆದರೆ, ಕೇವಲ ಬಿಕ್ಷಾಟನೆಗಾಗಿ ಅಪಹರಿಸಿದ 17 ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
(ಏಜೆನ್ಸೀಸ್)