ನಗರದ ಖಾಸಗಿ ಹೋಟೆಲ್‌ನಲ್ಲಿ ಎಫ್‌ಪಿಎ ಇಂಡಿಯಾ ಸಂಸ್ಥೆ ಏರ್ಪಡಿಸಿದ್ದ ಲೈಂಗಿಕ ಶಿಕ್ಷಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಯುವಜನತೆ ಇಂದು ಸೈಬರ್ ಕೆಫೆಗಳ ಮೂಲಕ ಪ್ರಚೋದನಾ ಲೈಂಗಿಕ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಅಪಾಯಕಾರಿ ಬೆಳವಣಿಗೆ ನಿಯಂತ್ರಣಕ್ಕಾಗಿ ಲೈಂಗಿಕ ಶಿಕ್ಷಣ ಅಗತ್ಯ ಎಂದು ಸಲಹೆ ನೀಡಿದರು.
ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ವಿವಾಹ ಪೂರ್ವ ಲೈಂಗಿಕತೆ ಮತ್ತು ಲಿವಿಂಗ್ ಟುಗೆದರ್‌ನಂತಹ ಕೆಟ್ಟ ಸಂಸ್ಕೃತಿ ಹೆಚ್ಚುತ್ತಿದೆ. ಇದರ ತಡೆಗಾಗಿ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸಬೇಕಿದೆ. ಲೈಂಗಿಕ ಜ್ಞಾನ ಎಂದರೆ ಸೆಕ್ಸ್ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಮೂಡಿದೆ. ಇದೊಂದು ಅಂಗಾಂಗಗಳ ಕುರಿತ ಶಿಕ್ಷಣ ಎಂದು ಅರ್ಥೈಸಬೇಕಿದೆ ಎಂದು ಕಿವಿಮಾತು ಹೇಳಿದರು.
2002 ರಲ್ಲಿ ದೇಶದ 13 ರಾಜ್ಯಗಳಲ್ಲಿ 5 ರಿಂದ 12 ವಯಸ್ಸಿನ ಮಕ್ಕಳ ನಡುವೆ ನಡೆಸಿದ ಸಮೀಕ್ಷೆ ಪ್ರಕಾರ ಶೇ 53.2 ರಷ್ಟು ಮಕ್ಕಳು ಲೈಂಗಿಕ ಅಪಚಾರಕ್ಕೆ ಒಳಗಾಗಿರುವುದು ಪತ್ತೆಯಾಗಿದೆ. ವಿದ್ಯಾರ್ಥಿಗಳ ನಡುವೆ ನಡೆಸಿದ ಸಮೀಕ್ಷೆ ಪ್ರಕಾರ, ಶೇ 40 ಯುವಕರು, ಶೇ 12 ರಷ್ಟು ಯುವತಿಯರು ವಿವಾಹ ಪೂರ್ವ ಲೈಂಗಿಕ ಕ್ರಿಯೆ ಪಡೆದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಶೇ. 53ರಿಂದ 55 ಪುರುಷರು ಮತ್ತು ಶೇ 23 ರಿಂದ 25 ಮಹಿಳೆಯರು ಮದುವೆಯಾಗಿಯೂ ಪರ ಸ್ತ್ರೀ / ಪುರುಷರೊಂದಿಗೆ ದೈಹಿಕ ಸಂಬಂಧ ಹೊಂದಿರುವ ಬಗ್ಗೆಯೂ ಸಮೀಕ್ಷೆಯಲ್ಲಿ ತಿಳಿಸಿದೆ ಎಂದು ವಿವರಿಸಿದರು. (ದಟ್ಸ್ ಕನ್ನಡ ವಾರ್ತೆ)