ಕನಸು ನನಸಾಗಿಸೇ ತುಸು ನಿಮಿಶದಲೇ ಎಲೆಲೇ ಕೆಂಡ ಸಂಪಿಗೆ ಕಂಪು
ಬರಬಾರದೇಕೆ ಅವಸರದಲಿ ಮೊಸರನು ಕಡೆಯೋಣ ಕಡೆಗೋಲು ಕಾದಿದೆ
ಬರುವುದು ಮೇಲೇರಿ ಘಮ ಘಮ ನವನೀತ; ಸಂತಸ ಮೆಲ್ಲಲು ತುಟಿಯಿದೆ
ಬೆಣ್ಣೆ ಮೆಲ್ಲಲು ಮದನ ಮಧುಸೂಧನ ತಾನೇ ಬರಲಿರುವ ಕದ್ದು ಮೆದ್ದರೇ ಸವಿ
ಕೈ ನೀಡಿ ಬೇಡಿ ಉಂಡರೆ ಅದರಲಿ ಮೈ ಝುಮ್ಮು ತುಸೂ ಬಾರದೇ ಎನ್ನ ದೇವಿ
ಗೊಲ್ಲನಿಲ್ಲದಾಗ ಮೆಲ್ಲ ಮೆಲ್ಲಗೆ ಹುಸಿ ಹೆಜ್ಜೆಯಿಟ್ಟು ನದಿಯ ದಡದಲ್ಲಿ ನನ್ನ ಕೂಡು
ಪಿಳ್ಳಂಗೋವಿಯ ಕೈಲಿ ಪಿಡಿದು ನುಡಿಸುವೆಯಂತೆ ನಿನ್ನ ತುಟಿಯಲ್ಲಿ ರತಿಯ ಹಾಡು
ನಾನೂ ನೀನೂ ಯುಗ ಯುಗಗಳ ಬಂಧಿತರು ಎಂದೆಬುದನು ಮರೆತೆಯಾ ಶ್ರೀದೇವಿ?
ಗೊಲ್ಲನೂ ಇದೆಲ್ಲ ಬಲ್ಲ; ಎಲ್ಲಿಯೋ ಗೋವುಗಳ ಅಟ್ಟಿಸಿ ನಮ್ಮಿಂದ ಮರೆಯಾಗಿಹನಲ್ಲವೇ
ಇವೆಲ್ಲಾ ನಮ್ಮೆಲ್ಲರ ನಾಟಕ; ನಲ್ಲೆ! ನಾನೂ ನೀನೂ ಆಟವನಾಡಲೆಂದೇ ಗೊಲ್ಲನೂ ಅಲ್ಲಿಲ್ಲ
ಲೀಲಾಲೋಲೆ ನೀನಾಗಿರುವಾಗ ನಾನು ನಿನ್ನನು ವೈಕುಂಠಕೆ ಒಯ್ಯುವುದರಲಿ ತಪ್ಪೇನಿಲ್ಲ
English summary
A kannada poem by KRS Murthy, America.