ಸುಳ್ಳಲ್ಲ. ಲಾಡೆನ್ ಕೊಲೆಯಾದಾಗ ಪಾಕ್ ಮನೆಯಲ್ಲಿ ದೊರಕಿದ ವಸ್ತುಗಳಲ್ಲಿ ವಯಾಗ್ರದೊಂದಿಗೆ ಈ ವಿಡಿಯೋ ಕೂಡ ಇತ್ತು. ಉಗ್ರರಿಗೆ ತರಬೇತಿ ಕೊಡುತ್ತಿರುವ ವಿಡಿಯೋ ದೃಶ್ಯಗಳಿವೆಯೋ ಎಂದು ನೋಡುತ್ತಿದ್ದ ಅಮೆರಿಕ ತನಿಖೆದಾರರನ್ನು ಈ ವಿಡಿಯೋ ಬೆಚ್ಚಿಬೀಳಿಸಿದ್ದಿರಲೂಬಹುದು. ಆತನ ಪಾಕ್ ಮನೆಯಲ್ಲಿ ಅಶ್ಲೀಲ ವಿಡಿಯೋ ದೊರಕಿರುವುದನ್ನು ಅಮೆರಿಕದ ಅಧಿಕಾರಿಯೊಬ್ಬರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಅಶ್ಲೀಲ ವಿಡಿಯೋದಲ್ಲಿ ಲಾಡೆನ್ ಪಾತ್ರದಾರಿಯಾಗಿದ್ದನೋ ಎಂಬ ಕುರಿತು ಯಾವುದೇ ಉತ್ತರಗಳಿನ್ನೂ ದೊರಕಿಲ್ಲ. ಆದರೆ ತುಂಬಾ ಆಸಕ್ತಿದಾಯಕವಾದ, ಮಂದ್ರ ಸ್ಥಾಯಿಯಲ್ಲಿರುವ, ಮಂದಗತಿಯಲ್ಲಿರುವ, ದೀರ್ಘಾವಧಿಯ ಅಶ್ಲೀಲ ವಿಡಿಯೋ ಇದಾಗಿದೆ ಅಂತ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ವಿಷ್ಯ ಬಹಿರಂಗಪಡಿಸಿದ್ದು ನಾನು ಅಂತ ಹೇಳಬೇಡಿ ಅಂತ ಅವರು ಅವಲತ್ತುಕೊಂಡಿದ್ದಾರೆ.
ಆದರೆ ಲಾಡೆನ್ ಮನೆಯಲ್ಲಿ ಯಾವುದೇ ಅಂತರ್ ಜಾಲ ಸಂಪರ್ಕವಿರಲಿಲ್ಲ. ಅಥವಾ ಯಾವುದೇ ಸಂವಹನ ನೆಟ್ ವರ್ಕ್ ಗಳಿರಲಿಲ್ಲ. ಹೀಗಾಗಿ ಅಶ್ಲೀಲ ವಿಡಿಯೋ ನೋಡಲು ಹೇಗೆ ಸಾಧ್ಯವಿದೆ ಎಂಬ ವಾದವೂ ಇದೆ. ಆದರೆ ಒಬಾಮಾ ಸರಕಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಒಸಾಮ ಟೆಲಿವಿಷನ್ ನೋಡುತ್ತಿದ್ದ. ಆ ಟೆಲಿವಿಷನ್ ನಲ್ಲಿ ವಿಡಿಯೋ ಪ್ಲೇ ಬ್ಯಾಕ್ ವ್ಯವಸ್ಥೆಯೂ ಇದೆ ಎನ್ನಲಾಗಿದೆ.
ಲಾಡೆನ್ ರಸಿಕ ಎಂಬುದು ಆತ ಸತ್ತ ಮರುದಿನವೇ ಜಗತ್ತು ಅಭಿಪ್ರಾಯಪಟ್ಟಿತ್ತು. ಆತನ ಆ ವಯಸ್ಸಿನಲ್ಲೂ ವಯಾಗ್ರ ಬಳಸುತ್ತಿದ್ದ ಎಂದರೆ ಆತನ ಜೀವನೋತ್ಸಹ ಎಂತಹದ್ದು ಎಂದು ಕೆಲವು ಮುದುಕರು ಆಶ್ಚರ್ಯಪಟ್ಟಿದ್ದರು. ಅದೆಲ್ಲ ಕಟ್ಟುಕತೆ ಅಂತ ಕೆಲವರು ಹೇಳತೊಡಿಗಿದಾಗ ಯೆಮಿನಿಯ ಹೆಣ್ಣು, ಲಾಡೆನ್ ನ ಐದನೇ ಪತ್ನಿ "ಹೌದು ಅವರು ವಯಾಗ್ರ ಬಳಸುತ್ತಿದ್ದರು" ಎಂತ ಒಪ್ಪಿಕೊಂಡಿದ್ದಳು. ಜೀವನೋತ್ಸವ ಹೆಚ್ಚಿಸವ ಕಲ್ಲಂಗಡಿ ಹಣ್ಣು ಆತನ ನೆಚ್ಚಿನ ಹಣ್ಣಾಗಿತ್ತು.
ಒಸಾಮಾ ಲಾಡೆನ್ ಎಂದರೆ ಭರ್ತಿ 5 ಹೆಂಡತಿಯರು ಗಂಡ ಮತ್ತು 20 ಮಕ್ಕಳು ಅಪ್ಪ. ಅದರಲ್ಲಿ ಮೊದಲ ಪತ್ನಿಯ ಹೆಸರು ನಾಜ್ವಾ ಘಾನೆಮ್. ಇವಳಿಗೆ ಹನ್ನೆರಡು ಮಕ್ಕಳು. ಅದರಲ್ಲಿ ಮೊದಲ ಮಗನ ಹೆಸರು ಅಬ್ದುಲ್ಲಾ ಲಾಡೆನ್. ಕೊನೆಯ ಮಗಳ ಹೆಸರು ನೂರ್ ಬಿನ್ ಲಾಡೆನ್. ಎರಡನೇ ಹೆಂಡತಿಯ ಹೆಸರು ಖತೀಜಾ ಶರೀಪ್.
ಮೂರನೇ ಪತ್ನಿಯ ಹೆಸರು ಖೈರಾಹಾ ಸಬಾರ್. ಅವಳು ಈಗಾಗಲೇ ಸತ್ತಿದ್ದಾಳೆ. ಒಸಾಮನ ನಾಲ್ಕನೇ ಪತ್ನಿಯ ಹೆಸರು ಸಿಹಾಮ್ ಸಬಾರ್. ಇವಳಿಗೆ ಆರು ಮಂದಿ ಮಕ್ಕಳು. ಲಾಡೆನ್ ಐದನೇ ಪತ್ನಿಯ ಹೆಸರು ಅಮಲ್ ಆಲ್-ಸದಾಹ. ಇವಳಿಗೆ 2001ರಲ್ಲಿ ಒಬ್ಬ ಮಗ ಹುಟ್ಟಿದ್ದಾನೆ. ಇವೆಲ್ಲ ವಯಾಗ್ರ ಮತ್ತು ಸೆಕ್ಸ್ ವಿಡಿಯೋ ಪ್ರಭಾವ ಆಗಿರಬಹುದೇ?