ಮನುಜನ ಮಿದುಳಿನಲ್ಲಿ ಎರಡು ಭಾಗಗಳಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರದ ವಿಚಾರ. ತಿಳಿದಿರದ ಇನ್ನೊಂದು ವಿಚಾರವೆಂದರೆ, ಮಿದುಳಿನ ಎರಡೂ ಭಾಗಗಳನ್ನು ಏಕಕಾಲದಲ್ಲಿ ಬಳಸುತ್ತೇವೆಂದು ಗಂಡು ಭಾವಿಸಿರುತ್ತಾನೆ. ಅದರಲ್ಲೂ, ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಗಂಡಿನಲ್ಲಿ ಮಿದುಳಿನ ಒಂದು ಭಾಗ ಮಾತ್ರ ಕೆಲಸ ಮಾಡುತ್ತಿರುತ್ತದಂತೆ. ಇನ್ನೊಂದು ನಿದ್ದೆ ಹೊಡೆಯುತ್ತಿರುತ್ತದೆ.
ಆದರೆ, ಮಹಿಳೆಯರಲ್ಲಿ ಮಿದುಳಿನ ಎರಡೂ ಭಾಗಗಳು ಜಾಗೃತವಾಗಿರುತ್ತವೆ ಮತ್ತು ಕಾರ್ಯಪ್ರವೃತ್ತವಾಗಿರುತ್ತವೆ. ಇದೇ ಮಹಿಳೆಯರು ಕಾಮಕ್ರೀಡೆಯಲ್ಲಿ ಗಂಡಿಗಿಂತ ಹೆಚ್ಚು ಸುಖಿಸಲು ಕಾರಣ. ಮಹಿಳೆ ಏಕಾಂಗಿಯಾಗಿದ್ದಾಗ ಕಾಮಕೇಳಿಯಲ್ಲಿ ನಿರತರಾಗಿರುವಂತೆ ಕಲ್ಪನಾವಿಲಾಸದಲ್ಲಿ ಮುಳುಗಿದ್ದಾಗಲೇ ಮಿದುಳಿನ ಒಂದು ಭಾಗ ಚುರುಕಾಗಿಬಿಡುತ್ತದೆ. ಇನ್ನು ಪ್ರಣಯರಾಜನಿಂದ ಕಾಮಕೇಳಿಗೆ ಆಹ್ವಾನ ಬಂದು, ಮೈಮನ ಮುಟ್ಟಿ ವಿದ್ಯುತ್ ಸಂಚಾರವಾಗುತ್ತಿದ್ದಂತೆ ಇನ್ನೊಂದು ಭಾಗ ನರನಾಡಿಗಳನ್ನು ಬಡಿದೆಬ್ಬಿಸಿಬಿಡುತ್ತದೆ.
ಕಾಮಕೇಳಿಯ ಉತ್ತುಂಗದಲ್ಲಿದ್ದಾಗ ಮಿದುಳಿಗೆ ಕೆಲಸವಾದರೂ ಏನು ಎಂದು ಅಪಹಾಸ್ಯ ಮಾಡುವ ಬದಲು ಮಿದುಳನ್ನೇ ಅಧ್ಯಯನಕ್ಕೆ ಒಡ್ಡಿದಾಗ ಈ ಸಂಗತಿಗಳು ಬಹಿರಂಗವಾಗಿವೆ. ಗಂಡು ಹೆಣ್ಣಿನ ನಡುವೆ ಮಿಲನ ಮಹೋತ್ಸವ ಏರ್ಪಟ್ಟಾಗ ಗಂಡು ಮೇಲೋ ಹಣ್ಣು ಮೇಲೆ ಎಂಬಿತ್ಯಾದಿ ಸಂಗತಿಗಳನ್ನು ಸಂಶೋಧನೆಯಲ್ಲಿ ಆಸಕ್ತಿಯಿರುವ ಮಹಾಶಯರು ಬೆತ್ತಲೆ ಮಾಡಿದ್ದಾರೆ.
ಮನಸ್ಸಿನಲ್ಲಿರುವ ಕಂದಕ, ದುಗುಡ, ಕೀಳರಿಮೆ ಮುಂತಾದವುಗಳನ್ನು ಬಟ್ಟೆಯಂತೆ ಬಿಚ್ಚಿಹಾಕಿ ಮನಸು ಹಕ್ಕಿಯಂತೆ ಸ್ವಚ್ಛಂದವಾದಾಗ ಹುರಿಗೊಂಡ ದೇಹ ಕೂಡ ಕಾಮನಬಿಲ್ಲು ಹದೆಯೇರಿಸಲು ತಯಾರಾಗಿಬಿಡುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಣ್ಣಿನ ಮೇಲೆ ಸವಾರಿ ಮಾಡುವಲ್ಲಿ ಗಂಡು ಸೋತುಬಿಡುತ್ತಾನೆ. ಬುರುಡೆ ಇದ್ದರೆ ಮಾತ್ರವಲ್ಲ ಅದನ್ನು ಬಳಸಿಕೊಳ್ಳುವ ಕಲೆಯೂ ಗೊತ್ತಿರಬೇಕು. ಒಪ್ತೀರಾ?