•  

ಕಾಂಡೋಮ್ ಕುರ್ತಾ ಬೇಕಾ, ರೇಟ್ 3K ಇಂದ 10K ಅಷ್ಟೇ!

Array
Condom Kurta on Sale
 
ನವದೆಹಲಿ ಜೂ 20: ಯಾವುದಕ್ಕೂ ಕಾಲ ಕೂಡಿ ಬರಬೇಕು ಎಂದು ಹಿರಿಯರು ಹೇಳಿದ್ದು ದೆಹಲಿ ಮೂಲದ ವಸ್ತ್ರ ವಿನ್ಯಾಸಕಾರ ಎಂಎ ರಹಮಾನ್ ಪಾಲಿಗೆ ನಿಜವಾಗಿದೆ. 2010ರಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏಡ್ಸ್ ಜಾಗೃತಿ ಮೂಡಿಸಲು ತಯಾರಿಸಿದ್ದ ಕಾಂಡೋಮ್ ಕುರ್ತಾ ಈಗ ಜನಪ್ರಿಯತೆ ಗಳಿಸುತ್ತಿದೆ. ಭಾರತ ಸರ್ಕಾರದಿಂದ ತಿರಸ್ಕೃತಗೊಂಡ ಈ ಅಂಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಕಚೇರಿ ಮುಟ್ಟಿ ಮೆಚ್ಚುಗೆ ಗಳಿಸಿಕೊಂಡು ಬಂದಿದೆ.

ಕಳೆದ ಡಿಸೆಂಬರ್ ನಲ್ಲಿ ಕಾಂಡೋಮ್ ಗಳನ್ನು ಬಳಸಿ ಕುರ್ತಾ ತಯಾರಿಸಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗಲಿಲ್ಲ. ಪ್ರಮುಖ ರಾಜಕೀಯ ಮುಖಂಡರೊಬ್ಬರಿಗೆ ಇಮೇಲ್, ಫ್ಯಾಕ್ಸ್ ಕಳಿಸಿದೆ ಇನ್ನೂ ಉತ್ತರ ಸಿಕ್ಕಿಲ್ಲ. ಕೊನೆ ಪ್ರಯತ್ನವಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಸಂಪರ್ಕ ಪಡೆದು ನನ್ನ ವಿನ್ಯಾಸದ ಉದ್ದೇಶವನ್ನು ತಿಳಿಸಿದೆ.

ಕಾಂಡೋಮ್ ಕುರ್ತಾ ಹೇಗಿದೆ: ಕುರ್ತಾ ಕಾಲರ್ ನಲ್ಲಿ ಎಮೆರ್ಜೆನ್ಸಿ ಕಾಂಡೋಮ್ ಗಳಿವೆ. ಉಳಿದ ಕಾಂಡೋಮ್ ಗಳನ್ನು ಸ್ಟಿಚ್ ಮಾಡಿ ಸುಂದರ ಫ್ಯಾಬ್ರಿಕ್ ಹೊದಿಕೆ ನೀಡಲಾಗಿದೆ. ಇಟಾಲಿಯನ್ ಫ್ಯಾಬ್ರಿಕ್ ವಿನ್ಯಾಸಕ್ಕೆ 10,000 ರು ದಿಂದ 12,000 ರು ತಗುಲುತ್ತದೆ. ಕಾಟನ್ ಫ್ಯಾಬ್ರಿಕ್ ಗೆ 3,000ರು ನಿಂದ 4,000ರು ಆಗುತ್ತದೆ. ಕಾಟನ್ ಫ್ಯಾಬ್ರಿಕ್ ವಿಶೇಷವಾಗಿ ಅವರಿಗಾಗಿ(ರಾಜಕಾರಣಿ) ಮಾಡಿದ್ದು, ಕುರ್ತಾ, ವೆಸ್ಟ್ ಕೋಟ್ ಹಾಗೂ ಜಾಕೆಟ್ ಗಳು ಲಭ್ಯವಿದೆ.

ವಿಶ್ವ ಏಡ್ಸ್ ದಿನಾಚರಣೆ(ಡಿ.1)ಯಂದು ದೆಹಲಿಯಲ್ಲಿ ಫ್ಯಾಷನ್ ಶೋ ನಡೆಸಿ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶವಿದೆ. ನಾಕೊ(NACCO), ವಿಶ್ವಸಂಸ್ಥೆ, ಮಾಧ್ಯಮಗಳ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿ ಎಂದು ಪ್ರೋಟಿನ್ ಎಂಬ ಫ್ಯಾಷನ್ ಮಳಿಗೆ ಮಾಲೀಕ ರಹಮಾನ್ ಹೇಳುತ್ತಾರೆ.

English summary
Fashion Designer MA Rahman has designed a a condom kurta for World Aids Day. But it didn't click in India. He sent the design to UN Secretary General got appreciation. Rahman is now planning to organise a fashion show in Delhi this year.
Story first published: Tuesday, June 21, 2011, 12:42 [IST]

Get Notifications from Kannada Indiansutras