ಅದರಲ್ಲೂ ಭಾರತ ಮೂಲದ ಟಿಟಿಕೆ ಲಿಗ್ ಸಂಸ್ಥೆ ಹಾಗೂ ಡುರೆಕ್ಸ್ ನಡುವಿನ ಕಿತ್ತಾಟದಿಂದ ಕಾಂಡೋಮ್ ಸಿಗುವುದೇ ದುರ್ಲಭವಾಗಿದೆ ಎಂದು ಡೈಲಿಮೇಲ್ ವರದಿ ಮಾಡಿದೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸ್ಥಳೀಯ ಆರೋಗ್ಯ ಸಂಸ್ಥೆಗಳು, ಕಾಂಡೋಮ್ ಇಲ್ಲದೆ ಸೆಕ್ಸ್ ಮಾಡಬೇಡಿ, ಎಸ್ ಟಿಡಿ(sexually transmitted diseases), ಬೇಡದ ಗರ್ಭ ಧರಿಸಿ ಸಮಾಜಕ್ಕೆ ಹೊರೆಯಾಗಬೇಡಿ ಎಂದು ಎಲ್ಲೆಡೆ ಎಚ್ಚರಿಕೆ ನೀಡುತ್ತಲಿದೆ.
ವಯಸ್ಸಾದವರ ಬಗ್ಗೆ ಅಷ್ಟು ಚಿಂತೆಯಿಲ್ಲ. ಆದರೆ, ಈಗಷ್ಟೇ ಹದಿಹರೆಯಕ್ಕೆ ಕಾಲಿಟ್ಟವರು ತಮ್ಮ ಕಾಮನೆಯನ್ನು ಹತ್ತಿಕ್ಕಲಾಗದೆ ಆತುರಕ್ಕೆ ಬಿದ್ದು ಅಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಮುಂದಾಗುವ ಭೀತಿ ಎದುರಾಗಿದೆ.
ಇದು ಒಮ್ಮೆ ಅಭ್ಯಾಸವಾದರೆ ಮುಂದೆ ಕಾಂಡೋಮ್ ಗೆ ಗುಡ್ ಬೈ ಹೇಳಿದರೂ ಅಚ್ಚರಿ ಏನಿಲ್ಲ. ಹಾಗಾಗಿ ಕಾಂಡೋಮ್ ಬಳಕೆ ಬಗ್ಗೆ ತುತ್ತೂರಿ ಊದಲೇಬೇಕು ಎಂದು ಡಾ ಮಾಲ್ಕಂ ವಾಂಡೆನ್ ಬರ್ಗ್ ಹೇಳಿದ್ದಾರೆ.
ಟಿಟಿಕೆ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಕೆಲವರು ಕಾಂಡೋಮ್ ವಿತರಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೋರ್ಟ್ ಅರ್ಜಿಯಲ್ಲಿ ತಕ್ಷಣವೇ ತಿರಸ್ಕರಿಸಿದೆ.