•  

ಕೂಡಿಕೆಗಿಂತ ಬಾಣಂತಿ ಮಗುವಿನ ಆರೋಗ್ಯ ಮುಖ್ಯ

Array
Mother child health is more important than love making
 
ಆಷಾಢ ಮಾಸದಲ್ಲಿ ಗಂಡ ಮತ್ತು ಹೆಂಡತಿ ಲೈಂಗಿಕ ಕ್ರಿಯೆ ಆಚರಿಸಿಕೊಳ್ಳಬಾರದು ಎನ್ನುವುದಕ್ಕೆ ಇನ್ನೊಂದು ವೈಜ್ಞಾನಿಕ ಕಾರಣವಿದೆ. ಈ ತಿಂಗಳಲ್ಲಿ ಕೂಡಿಕೆ ಫಲಪ್ರದವಾಗಿ ಹೆಂಡತಿ ಗರ್ಭ ಧರಿಸಿದರೆ ಮುಂದೆ ಪ್ರಸವವಾಗುವುದು ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ.

ಹಸಿಹಸಿ ಬಾಣಂತಿ ಉಷ್ಣಯುಕ್ತ ಆಹಾರಗಳನ್ನು ಸೇವಿಸುತ್ತಿರುತ್ತಾಳೆ. ಬೇಸಿಗೆಯಲ್ಲಿ ಇಂಥ ಆಹಾರಗಳನ್ನು ಮತ್ತಷ್ಟು ಸೇವಿಸಿದರೆ ಆರೋಗ್ಯದಲ್ಲಿ ಏರುಪೇರಾಗುವುದು ನಿಶ್ಚಿತ. ಅಲ್ಲದೆ, ಕೂಸಿನ ಮೇಲೆಯೂ ಇದು ದುಷ್ಪರಿಣಾಮವಾಗುವ ಸಂಭವನೀಯತೆಯೆ ಹೆಚ್ಚು.

ಬೇಸಿಗೆಯಲ್ಲಿ ಈ ಅನಪೇಕ್ಷಿತ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಆಷಾಢದ ಮಳೆಗಾಲದಲ್ಲಿಯೇ ಜಾಣ್ಮೆಯಿಂದ ಗಂಡ ಹೆಂಡತಿ ದುರವಿರುವುದು ವಿಹಿತವಲ್ಲವೆ? ಅಷ್ಟು ಮಾತ್ರವಲ್ಲ, ಬೇಸಿಗೆಯಲ್ಲಿ ಸಿಡುಬು, ದಡಾರ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಆಯುರ್ವೇದ ವೈದ್ಯರು.

;
English summary
Why sex is prohibited for the young married couple during Ashadha Maasa in the month of July and August? There are 4 reasons in Ayurveda why newly wedded couple should abstain from sexual life in this rainy season. Follow the series.
Story first published: Friday, July 22, 2011, 17:24 [IST]

Get Notifications from Kannada Indiansutras