•  

ರೈತನ ಮನೆಯಲ್ಲಿ ಕನಸು ಕುಡಿಯೊಡೆಯಬೇಕಿದ್ದರೆ...

Array
If farmer does not concentrate on sowing...
 
ಈ ನಾಲ್ಕನೆಯ ಕಾರಣ ಮಳೆಗಾಲದಲ್ಲಿ ಮೊಳಕಾಲು ಉದ್ದ ಕೆಸರಲ್ಲಿ ಕಾಲು ಹುದುಗಿಸಿ ದುಡಿದು ದೇಶಕ್ಕಾಗಿ ಅನ್ನ ನೀಡುವ ಉಳುವ ಯೋಗಿಗಳಿಗೆ ಮಾತ್ರ ಅನ್ವಯ. ಮಳೆಹನಿ ಇಳೆಗೆ ಬಿದ್ದೊಡನೆ ಕೈಯಲ್ಲಿ ನೇಗಿಲು ಹಿಡು, ಎತ್ತುಗಳನ್ನು ಹೂಡಿ, ಭೂಮಿ ಹಸನು ಮಾಡಿ, ಬೀಜವನ್ನು ಬಿತ್ತುವ ಕಾಲ. ನಮಗೆ ಬೇಕೆಂದಾಗ ಮಳೆ ಬರುವುದಿಲ್ಲ, ಮಳೆ ಬಂದಾಗ ಬಿತ್ತಲು ರೈತರು ಸಿದ್ಧರಾಗಿರಬೇಕು.

ಇಂಥ ಸಂದರ್ಭದಲ್ಲಿ ಮದುವೆ ಮಾಡಿ ರೈತ ಮತ್ತು ಆತನ ಹೆಂಡತಿ ಒಬ್ಬರನ್ನೊಬ್ಬರು ನೋಡುತ್ತ ಮನೆಯಲ್ಲಿ ಕುಳಿತರೆ ಎತ್ತುಗಳೇ ಜಾಡಿಸಿ ಒದ್ದಾವು. ಚಕ್ಕಡಿ ಗಾಡಿಯನ್ನು ಹೂಡಿಕೊಂಡು, ಬಗಲಲ್ಲಿ ಕಟಕು ರೊಟ್ಟಿ, ಗುರೆಳ್ಳು ಚಟ್ನಿ ತುಂಬಿಕೊಂಡು ಹೊಲದ ಕಡೆಗೆ ಕಾಲು ಹಾಕುವ ರೈತನನ್ನು ಕಂಡರೆ ಎತ್ತುಗಳಿಗೆ ಅದೇನೋ ಪ್ರೀತಿ.

ನೋಟದಲ್ಲೇ ಮಾಯ ಮಾಡುವ ಹೆಂಡತಿಯನ್ನು ಆಷಾಢದಲ್ಲಿ ಕೂಡಿ, ಹೊಸ ಜೀವಕಳೆಯ ಕನಸನ್ನು ಕಾಣುತ್ತ ಬೆಚ್ಚನೆ ಮನೆಯಲ್ಲೇ ಕುಳಿತರೆ, ಇಳೆಯಲ್ಲಿ ಬೀಜ ಬಿತ್ತಿ ಮೊಳಕೆಯೊಡುವುದು ಯಾವ ಕಾಲದಲ್ಲಿ. ಈ ಕಾಲದಲ್ಲಿ ಏಕಾಗ್ರತೆ ಕಳೆದುಕೊಂಡು ಮೈಮರೆತರೆ ಇಡೀ ವರ್ಷ ಅರೆಹೊಟ್ಟೆಯೇ ಗ್ಯಾರಂಟಿ.

ಹೀಗಾಗಿ ಹೆಂಡತಿಯ ಬಿಸುಪಿನ ಅಪ್ಪುಗೆಯಲ್ಲಿ ಗಂಡ ಮೈಮರೆಯುವ ಮುನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸಲಾಗುತ್ತದೆ. ಬಿತ್ತುವ ಕಾರ್ಯ ಮುಗಿದು ಬೆಳೆ ನಳನಳಿಸುವ ಸಮಯಕ್ಕೆ ವಾಪಸ್ ಬರುತ್ತಾಳೆ. ಆಗ ಮತ್ತೊಂದು ಕನಸು ಕುಡಿಯೊಡೆದಿರುತ್ತದೆ.

;
English summary
Why sex is prohibited for the young married couple during Ashadha Masa in the month of July and August? There are 4 reasons in Ayurveda why newly wedded couple should abstain from sexual life in this rainy season. Follow the series.
Story first published: Friday, July 22, 2011, 16:52 [IST]

Get Notifications from Kannada Indiansutras