•  

ಫ್ಯಾಷನ್‌ ಶೋನಲ್ಲಿಯೂ ಮೇಳೈಸುತ್ತಿದೆ ಕಾಮಸೂತ್ರ!

Array
kamasutra-in-fashion-show
 
ವಾತ್ಸಾಯನನ ಕಾಮಸೂತ್ರ ಆಧರಿಸಿ ಸಿನಿಮಾ, ನಾಟಕ, ಪುಸ್ತಕ, ಆಡಿಯೋ ಮುಂತಾದವುಗಳೆಲ್ಲ ಬಂದ ಮೇಲೆ ಶೃಂಗಾರ ಕಲೆಯು ಫ್ಯಾಷನ್‌ ಲೋಕದಲ್ಲೂ ಅನಾವರಣ ಆಗಿದೆ.

ಖ್ಯಾತ ಫ್ಯಾಷನ್‌ ಡಿಸೈನರ್ ಸುನೀತ್‌ ವರ್ಮಾ ರಾಜಧಾನಿಯಲ್ಲಿ ಶನಿವಾರ ಸಂಜೆ (ಜುಲೈ 23) 'ಕಾಮಸೂತ್ರ ಫ್ಯಾಷನ್‌ ಶೋ' ಆಯೋಜಿಸಿದ್ದರು. ಮಾಡೆಲ್‌ಗ‌ಳು ಮಾದಕ ಭಂಗಿಯಲ್ಲಿ ಹಾಗೂ ಒಬ್ಬರನ್ನೊಬ್ಬರು ಪ್ರಚೋದಿಸುವ ರೀತಿಯಲ್ಲಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದರು.

ಬಟ್ಟೆಯ ವಿನ್ಯಾಸದಲ್ಲಿ ಕಾಮಸೂತ್ರದ ಸಾಕ್ಷಾತ್ಕಾರ ಕಾಣಿಸಲಿಲ್ಲವಾದರೂ ಫ್ಯಾಷನ್‌ ಶೋ ಒಟ್ಟಾರೆ ವಾತಾವರಣ ರಸಿಕತೆಯಿಂದ ತುಂಬಿತ್ತು. ಅದಕ್ಕೆ ತಕ್ಕಂತೆ ಸಂಗೀತ ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಲೈಂಗಿಕ ಕ್ರಿಯೆಯ ವಿವಿಧ ಭಂಗಿಗಳನ್ನು ತೋರಿಸುವ ನೃತ್ಯದೊಂದಿಗೆ ಶೋ ಆರಂಭವಾಯಿತು. ಇದರಲ್ಲಿ ಸಂಗಾತಿಯನ್ನು ಮಿಲನೋತ್ಸವಕ್ಕೆ ಸೆಳೆಯುವ ಹೆಜ್ಜೆಗಳಿದ್ದವು.

'ಲೈಂಗಿಕತೆಯ ಬಗ್ಗೆ ಮಾತನಾಡಲು ಅತಿ ಸಭ್ಯ ವಿಧಾನವೆಂದರೆ ಫ್ಯಾಷನ್‌. ನನ್ನ ವಸ್ತ್ರ ವಿನ್ಯಾಸದಲ್ಲಿ ದೇಹ ಹಾಗೂ ಆತ್ಮಕ್ಕೆ ಆಭರಣವಾಗಬಲ್ಲ ಉಡುಗೆಗಳನ್ನೇ ಸಿದ್ಧಪಡಿಸಲು ಯತ್ನಿಸಿದ್ದೇನೆ' ಎಂದು ಸುನೀತ್‌ ಹೇಳಿದರು.

English summary
Fashion is the politest way of talking about sex. Taking the thought forward, Suneet Varma presented his collection at the ongoing Synergy one Delhi Couture Week (July 23), inspired by the most celebrated Hindu texts in the world, the Kamasutra.
Story first published: Monday, July 25, 2011, 10:01 [IST]

Get Notifications from Kannada Indiansutras