ಅತ್ಯಂತ ಖಾಸಗಿಯಾಗಿರುವ ಈ ವಿಷಯವನ್ನು ತಮ್ಮ ಸಂಶೋಧನೆಯ ವಸ್ತುವನ್ನಾಗಿ ಮಾಡಿಕೊಂಡು, ಲೈಂಗಿಕತೆಯ ರಹಸ್ಯಗಳನ್ನೆಲ್ಲ ಬಯಲಿಗೆಳೆಯುವ ವಿಜ್ಞಾನಿಗಳು ಮಾತ್ರ ಇದನ್ನು ಒಪ್ಪುವುದಿಲ್ಲ. ಪ್ರೇಮೋನ್ಮಾದ ಉಕ್ಕಿಹರಿಯುವಾಗ ಮಹಿಳೆಯರು ಮಾಡುವ ಮುಲುಕಾಟಗಳು ಎಲ್ಲಾ ಸುಳ್ಳೇ ಸುಳ್ಳು ಎಂದು ಹೇಳಿ ಮಹಿಳೆಯರ ಮುಖ ಇನ್ನಷ್ಟು ಕೆಂಪಾಗುವಂತೆ ಮಾಡಿದ್ದಾರೆ.
ಪ್ರೇಮ ಕಾರಂಜಿ ಚಿಮ್ಮುವಾಗ ಮಹಿಳೆಯರಲ್ಲಿ ಉದ್ಭವವಾಗುವ ಭಾವನೆಗಳು, ಅವರು ಅನುಭವಿಸುವ ಸಂತಸದ ಘಳಿಗೆಗಳು, ಪ್ರೇಮೋತ್ಕಟತೆಯ ನರಳಾಟಗಳು ಸಂಗಾತಿಯ ಮೇಲೆ ಅವಲಂಬಿಸಿರುತ್ತವೆ ಎಂಬುದು ಲೈಂಗಿಕ ವಿಜ್ಞಾನಿಗಳು ಮುಂದಿಡುವ ವಾದ.
ನೋವಿನ ನರಳಾಟವಾಡದಿದ್ದರೆ ಸಂಗಾತಿಯೊಂದಿಗಿನ ಭಾವನಾತ್ಮಕ ಬಾಂಧವ್ಯಕ್ಕೆ ಮುಕ್ಕಾಗಬಹುದೆಂಬ ಆತಂಕ ಮಹಿಳೆಯರಲ್ಲಿ ಮನೆಮಾಡಿರುತ್ತದೆ ಅಥವಾ ಸುಖಿಸುವಲ್ಲಿ ಸೋತಿದ್ದೇವೆಂಬ ಭಾವ ಗಂಡಸಲ್ಲಿ ಬರಬಾರದೆಂಬ ಅನಿಸಿಕೆಯಿಂದ ಸುಳ್ಳು ಮುಲುಕಾಟದಲ್ಲಿ ತೊಡಗುತ್ತಾರೆ ಎಂಬ ಅಂಶವನ್ನು ಹೊರಗೆಡಹಿದ್ದಾರೆ.
ದೈಹಿಕ ಸಂಬಂಧ ಮತ್ತು ಮಾನಸಿಕ ಸಂಬಂಧದಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಲೈಂಗಿಕತೆಯ ವಿಷಯದಲ್ಲಿ ಮಿದುಳು ಕೂಡ ವಿಭಿನ್ನವಾಗಿಯೇ ಸ್ಪಂದಿಸುತ್ತದೆ. ಮಾನಸಿಕವಾಗಿ ದೇಹವೆರಡು ಆತ್ಮವೊಂದು ಎಂಬಂತೆ ಜೋಡಿಗಳು ಜೀವಿಸಿದ್ದರೂ ದೈಹಿಕವಾಗಿ ಸುಖಿಸುವಾಗ ಒಂದೇ ರೀತಿಯ ಸ್ಪಂದನೆಯಿರುವುದಿಲ್ಲ.
ಎಷ್ಟೇ ಆಟಗಳನ್ನು ಆಡಿದರೂ ಸಂಭೋಗದ ಉತ್ತಂಗಕ್ಕೇರಲು ಮಹಿಳೆ ವಿಫಲಳಾದಾಗ ಬೇರೆ ದಾರಿಯಿಲ್ಲದೆ ಸುಖಿಸಿದಂತೆ ನರಳಾಟವಾಡುವ ಸಾಧ್ಯತೆಯೂ ಇರುತ್ತದೆ. ಈ ಕೊರತೆಯನ್ನು ಪರಸ್ಪರ ಮಾತುಕತೆಗಳ ಮುಖಾಂತರ ಗಂಡನೊಂದಿಗೆ ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ಸಲಹೆ. ನಿಜವಾದ ಸುಖಪಡಲು ನಾನಾ ಮಾರ್ಗಗಳಿವೆ ಎಂಬುದು ಅವರ ಅನಿಸಿಕೆ.