ಸಂಭೋಗದ ಸಮಯದಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಎಂಬ ಹಾರ್ಮೋನು ದೈಹಿಕ ನೋವನ್ನು ಕಡಿಮೆ ಮಾಡಲು ಸಹಕಾರಿ. ಇದೇ ಹಾರ್ಮೋನು ಸುಖನಿದ್ದೆ ಹತ್ತಲು ಮತ್ತು ಜೋಡಿಗಳಲ್ಲಿ ಬಿರುಕುಗೊಂಡ ಸಂಬಂಧ ಬೆಸೆಯಲು ಕೂಡ ಕಾರಣವಾಗುತ್ತದೆ. ಸಂಭೋಗಿಸುವಾಗ ಆಕ್ಷಣ ನೋವಿನಲ್ಲೂ ಆನಂದಿಸಲು ಸಾಧ್ಯವಾಗುವುದು ಈ ಹಾರ್ಮೋನಿನಿಂದ.
ಈ ಅಂಶ ಕೂಡ ಸಾಕಷ್ಟು ಅಧ್ಯಯನ ಮತ್ತು ಪ್ರಯೋಗಗಳನ್ನು ನಡೆಸಿದ ನಂತರ ಪ್ರಮಾಣಿತವಾಗಿದೆ. ಈ ಹಾರ್ಮೋನು ಹೆಚ್ಚಿಸುವ ಮಾತ್ರೆ ನುಂಗಿದಾಗ ಚುಚ್ಚಿದಾಗ ಆಗುವ ನೋವು ಕುಗ್ಗಿರುವುದು ಸಾಬೀತಾಗಿದೆ. ಆದರೆ, ಈ ಹಾರ್ಮೋನು ಸ್ರವಿಸಲು ಮಾತ್ರೆ ನುಂಗಬೇಕಾಗಿಲ್ಲ, ಇಬ್ಬರೂ ಒಪ್ಪಿ ಅಪ್ಪಿ ಸಂಭೋಗದಲ್ಲಿ ತೊಡಗಿದರೂ ಸಾಕು.
English summary
Health benefits of sexual activity : Regular sexual activity reduces pain in the body. A harmone called Oxytocin releases increasing the production of endorphins while love making, which reduces pain and increases happiness.